ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'9 ಕೋಟಿ ಡಾಲರ್‌ ಮೌಲ್ಯದ ಮಿಲಿಟರಿ ವಿಮಾನಗಳ ಬಿಡಿಭಾಗ, ಸೇವೆ ಪೂರೈಕೆಗೆ ಒಪ್ಪಿಗೆ'

Last Updated 4 ಡಿಸೆಂಬರ್ 2020, 11:50 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸಿ -130 ಜೆ–ಸೂಪರ್ ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನಗಳಿಗೆ ಬಳಸುವಂತಹ 9 ಕೋಟಿ ಡಾಲರ್‌ ಮೌಲ್ಯದ ಯಂತ್ರಾಂಶ ಮತ್ತು ಸೇವೆಗಳನ್ನು ಭಾರತಕ್ಕೆ ಪೂರೈಸಲು ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ.

‘ಈ ಪ್ರಸ್ತಾವಿತ ಮಾರಾಟವು ಅಮೆರಿಕ–ಭಾರತದ ಕಾರ್ಯತಂತ್ರ ಸಂಬಂಧ ಮತ್ತು ಪ್ರಮುಖ ರಕ್ಷಣಾ ಪಾಲುದಾರ ಭದ್ರತೆಯನ್ನು ಸುಧಾರಿಸಲು ನೆರವಾಗುವ ಮೂಲಕ ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯನ್ನು ಬೆಂಬಲಿಸಲಿದೆ‘ ಎಂದು ರಕ್ಷಣಾ ಇಲಾಖೆಯ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (ಡಿಎಸ್‌ಸಿಎ) ತಿಳಿಸಿದೆ.

‘ಭಾರತ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ವಲಯದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಯನ್ನು ಕಾಪಾಡಲು ಭಾರತವು ಒಂದು ಪ್ರಮುಖ ಶಕ್ತಿಯಾಗಿ ಮುಂದುವರೆದಿದೆ‘ ಎಂದು ಅಮೆರಿಕದ ಸಂಸತ್ತಿನ ಕೆಳಮನೆಗೆ ನೀಡಿದ ಪ್ರಮುಖ ಮಾರಾಟ ಅಧಿಸೂಚನೆಯಲ್ಲಿ ಡಿಎಸ್‌ಸಿಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT