ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವಿನ ಕೋವಿಡ್ ಸಂಬಂಧಿತ ನಿರ್ಬಂಧ ವಿವಾದ ಮುಂದುವರಿದಿದೆ. ಕೋವಿಡ್ ನೆಪದಲ್ಲಿ ಅಮೆರಿಕದ ವಿಮಾನಗಳನ್ನು ಚೀನಾ ನಿರ್ಬಂಧಿಸಿದ ನಂತರ ಅಮೆರಿಕ ಸಹ ಚೀನಾದಿಂದ ತನ್ನ ದೇಶಕ್ಕೆ ಹಾರುವ 44 ವಿಮಾನಗಳಿಗೆ ತಡೆ ನೀಡಿದೆ.

ಅಮೆರಿಕದ ಸಾರಿಗೆ ಇಲಾಖೆಯು ಶುಕ್ರವಾರ ನೀಡಿರುವ ಆದೇಶದಿಂದ ನಾಲ್ಕು ಚೀನಾ ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ. ಉಭಯ ರಾಷ್ಟ್ರಗಳ ನಡುವೆ ದೀರ್ಘಕಾಲದ ಕೋವಿಡ್ ನಿರ್ಬಂಧಗಳ ವಿವಾದದಲ್ಲಿ ಇದು ಇತ್ತೀಚಿನ ಬೆಳವಣಿಗೆ ಎನ್ನಲಾಗಿದೆ.

ಈ ಹಿಂದಿನ ವಿಮಾನಗಳಲ್ಲಿನ ಪ್ರಯಾಣಿಕರಿಗೆ ಕೋವಿಡ್ ದೃಢಪಟ್ಟಿದ್ದರಿಂದ ಡೆಲ್ಟಾ ಏರ್ಲೈನ್ಸ್, ಯುನೈಟೆಡ್ ಏರ್ಲೈನ್ಸ್ ಮತ್ತು ಅಮೆರಿಕನ್ ಏರ್ಲೈನ್ನಿಂದ ಬರುವ ವಿಮಾನಗಳಿಗೆ ಚೀನಾ ಈ ಹಿಂದೆ ನಿರ್ಬಂಧ ಹೇರಿತ್ತು.

ಚೀನಾದ ನಿರ್ಬಂಧ ಕ್ರಮಗಳು ಪ್ರತಿ ದೇಶಕ್ಕೆ ಇತರ ದೇಶದ ವಿಮಾನಯಾನ ಸಂಸ್ಥೆಗಳ ಪ್ರವೇಶದ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅಮೆರಿಕ ಹೇಳಿದೆ.

ಜನವರಿ 30 ರಿಂದ ಮಾರ್ಚ್ 29ರವರೆಗೆ ಏರ್ ಚೀನಾ, ಚೀನಾ ಈಸ್ಟರ್ನ್ ಏರ್ಲೈನ್ಸ್, ಚೀನಾ ಸೌಥರ್ನ್ ಏರ್ಲೈನ್ಸ್ ಮತ್ತು ಕ್ಸಿಯಾಮೆನ್ ಏರ್ಲೈನ್ಸ್ ವಿಮಾನಗಳನ್ನು ಅಮೆರಿಕ ನಿರ್ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.