ಶುಕ್ರವಾರ, ಜನವರಿ 15, 2021
21 °C

ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಂಸತ್ ಸದಸ್ಯರ ಚರ್ಚೆ: ವರದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಟ್ರಂಪ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಂಬಂಧ ಕ್ಯಾಬಿನೆಟ್‌ನ ಸದಸ್ಯರು ಚರ್ಚೆ ಆರಂಭಿಸಿದ್ದಾರೆ ಎಂದು ವರದಿಯಾಗಿವೆ.

ಯುಎಸ್‌ ಸಂವಿಧಾನಕ್ಕೆ 25ನೇ ತಿದ್ದುಪಡಿ ತರುವುದರ ಮೇಲೆ ಚರ್ಚೆಯು ಕೇಂದ್ರೀಕೃತವಾಗಿದೆ. ಇದು ದೇಶದ ಉಪಾಧ್ಯಕ್ಷ ಮತ್ತು ಕ್ಯಾಬಿನೆಟ್‌ ಸದಸ್ಯರು ‘ಅಧ್ಯಕ್ಷರು ಕಚೇರಿಯ ಕರ್ತವ್ಯ, ಅಧಿಕಾರ ನಿರ್ವಹಿಸಲು ಸಾಧ್ಯವಿಲ್ಲ’ ಎಂದು ನಿರ್ಧರಿಸಿದರೆ, ಅಧ್ಯಕ್ಷರನ್ನು ಅಧಿಕಾರದಿಂದ ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.

ಉಪಾಧ್ಯಕ್ಷ ಮೈಕಲ್‌ ಪೆನ್ಸ್‌ ಅವರು ‘ಅಧ್ಯಕ್ಷರನ್ನು ತೆರವುಗೊಳಿಸುವ ಮತದಾನ’ಕ್ಕೆ ಕ್ಯಾಬಿನೆಟ್‌ಅನ್ನು ಮುನ್ನಡೆಸಬೇಕಾಗುತ್ತದೆ.

ಹೆಸರು ಹೇಳಲು ಬಯಸದ ರಿಪಬ್ಲಿಕ್‌ ನಾಯಕರೊಬ್ಬರು, ಟ್ರಂಪ್‌ ಅವರು ‘ನಿಯಂತ್ರಣ ತಪ್ಪಿದ್ದಾರೆ’. ಸಂವಿಧಾನದ 25ನೇ ತಿದ್ದುಪಡಿ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು