ಭಾನುವಾರ, ಜನವರಿ 24, 2021
18 °C
ರಕ್ಷಣಾ ಮಸೂದೆ

ಭಾರತ–ಚೀನಾ ಸಂಘರ್ಷದ ವಿಷಯ ಒಳಗೊಂಡ ಮಸೂದೆ; ಅಮೆರಿಕ ಸಂಸತ್ತಿನ ಅನುಮೋದನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಚೀನಾ ಆಕ್ರಮಣವೂ ಸೇರಿದಂತೆ ಹಲವು ಪ್ರಮುಖ ರಕ್ಷಣಾತ್ಮಕ ವಿಚಾರಗಳನ್ನು ಒಳಗೊಂಡ ಅಂದಾಜು 740 ಬಿಲಿಯನ್ ಡಾಲರ್‌ ಮೊತ್ತದ ರಕ್ಷಣಾ ಮಸೂದೆಗೆ ಅಮೆರಿಕದ ಸಂಸತ್ತು ಅನಮೋದನೆ ನೀಡಿತು.

ಅಮೆರಿಕದ ಜನಪ್ರತಿನಿಧಿಗಳ ಸಭೆ ಮತ್ತು ಸೆನಟ್‌ ಮಂಗಳವಾರ ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆಗೆ (ಎನ್‌ಡಿಎಎ) ಅನುಮೋದನೆ ನೀಡಿದವು.

ಅಮೆರಿಕದ ಸಂಸದ ರಾಜಾ ಕೃಷ್ಣಮೂರ್ತಿ ಅವರ ನಿರ್ಣಯದ ಪ್ರಮುಖ ಅಂಶವಾದ, ಭಾರತದ ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದ ಮಿಲಿಟರಿ ಆಕ್ರಮಣವನ್ನು ಕೊನೆಗೊಳಿಸುವಂತೆ ಚೀನಾ ಸರ್ಕಾರವನ್ನು ಒತ್ತಾಯಿಸುವಂತಹ ಪ್ರಮಖ ಅಂಶಗಳು ಈ ಕಾಯ್ದೆಯಲ್ಲಿ ಸೇರಿವೆ.

ಈ ವರ್ಷದ ಮೇ ತಿಂಗಳಿನಿಂದ ಚೀನಾ ಮತ್ತು ಭಾರತ ತನ್ನ ಸೇನಾ ಪಡೆಗಳನ್ನು ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ನಿಯೋಜಿಸಿವೆ. ಈ ಸಮಸ್ಯೆ ಬಗೆಹರಿಸಲು ಉಭಯ ದೇಶಗಳ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಯಾವುದೂ ಫಲಪ್ರದವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು