ಭಾನುವಾರ, ಸೆಪ್ಟೆಂಬರ್ 19, 2021
24 °C

ಒಮಾನ್‌ನಲ್ಲಿ ತೈಲ ಟ್ಯಾಂಕರ್‌ ಮೇಲೆ ಡ್ರೋನ್ ದಾಳಿ; ಇಬ್ಬರು ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ದುಬೈ: ಒಮಾನ್ ಕರಾವಳಿಯಲ್ಲಿರುವ ಅರೇಬಿಯನ್ ಸಮುದ್ರದಲ್ಲಿದ್ದ ತೈಲ ಟ್ಯಾಂಕರ್‌ ಗುರಿಯಾಗಿಸಿ ನಡೆಸಿದ ಡ್ರೋನ್‌ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಶನಿವಾರ ಸ್ಪಷ್ಟಪಡಿಸಿದೆ.

ಮರ್ಸರ್ ಸ್ಟ್ರೀಟ್‌ನಲ್ಲಿ ತೈಲ ಟ್ಯಾಂಕರ್‌ ಮೇಲೆ ಗುರುವಾರ ರಾತ್ರಿ ಈ ದಾಳಿ ನಡೆದಿದೆ. ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಈ ದಾಳಿ ನಡೆಸಲಾಗಿದೆ.

ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೂ, ಇಸ್ರೇಲಿ ಅಧಿಕಾರಿಗಳು ಈ ಡ್ರೋನ್‌ ದಾಳಿಯನ್ನು ಟೆಹ್ರಾನ್ ನಡೆಸಿದೆ ಎಂದು ಆರೋಪಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು