ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಾಯ್ಡ್‌ ಹತ್ಯೆ: ಪೊಲೀಸ್‌ ಅಧಿಕಾರಿ ಚೌವಿನ್‌ ತಪ್ಪಿತಸ್ಥ

Last Updated 21 ಏಪ್ರಿಲ್ 2021, 11:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕಪ್ಪು ವರ್ಣೀಯ ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಮಿನ್ನೆಪೊಲಿಸ್‌ನ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ತಪ್ಪಿತಸ್ಥ ಎಂದು ಅಮೆರಿಕದ ಕೋರ್ಟ್‌ ಹೇಳಿದೆ.

ಫ್ಲಾಯ್ಡ್‌ ಹತ್ಯೆಗೆ ಸಂಬಂಧಿಸಿದ ಚೌವಿನ್‌ ವಿರುದ್ಧ ಮೂರು ಆರೋಪಗಳಿದ್ದವು. ಈ ಆರೋಪಗಳ ಕುರಿತುವಿಚಾರಣೆ ನಡೆಸಿದ 12 ನ್ಯಾಯಾಧೀಶರಿರುವ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

20 ಡಾಲರ್‌ ಮೊತ್ತದ ನಕಲಿ ಬಿಲ್‌ ಸೃಷ್ಟಿಸಿದ ಆರೋಪದ ಮೇಲೆ ಕಳೆದ ವರ್ಷ ಮೇ 25ರಂದು ಫ್ಲಾಯ್ಡ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಫ್ಲಾಯ್ಡ್‌ ಅವರನ್ನು ಕೆಳಗೆ ಕೆಡವಿ ಹಾಕಿದ್ದ ಪೊಲೀಸ್‌ ಅಧಿಕಾರಿ ಚೌವಿನ್‌, ಆತನ ಕುತ್ತಿಗೆ ಮೇಲೆ ಮೊಣಕಾಲಿಟ್ಟು 9 ನಿಮಿಷಗಳಿಗೂ ಅಧಿಕ ಕಾಲ ಒತ್ತಿದ್ದ. ಉಸಿರುಗಟ್ಟಿದ ಪರಿಣಾಮ ಫ್ಲಾಯ್ಡ್‌ ಮೃತಪಟ್ಟಿದರು.

ಇಡೀ ಘಟನೆಯ ದೃಶ್ಯಗಳನ್ನು ಸೆರೆ ಹಿಡಿಯಲಾಗಿತ್ತು. ಈ ದೃಶ್ಯಗಳು ವೈರಲ್‌ ಆದ ನಂತರ, ವರ್ಣಭೇದ ನೀತಿಯನ್ನು ಖಂಡಿಸಿ ಅಮೆರಿಕದಲ್ಲಿ ಪ್ರತಿಭಟನೆ ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT