ಸೋಮವಾರ, ನವೆಂಬರ್ 23, 2020
22 °C

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಇಂದು ಮತದಾನ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣಾ ಮುನ್ನಾದಿನವಾದ ಸೋಮವಾರ ಬಿರುಸಿನ ಪ್ರಚಾರ ನಡೆಯಿತು. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಕೊನೆ ಹಂತದಲ್ಲಿ ಮತದಾರರ ಒಲವು ಗಳಿಸಲು ಯತ್ನಿಸಿದರು. 

ಸಮೀಕ್ಷೆಯಲ್ಲಿ ಬೈಡನ್ ಅವರು ಮುಂದಿದ್ದರೂ, ಕೂದಲೆಳೆ ಅಂತರದಲ್ಲಿ ಗೆಲುವು ನಿರ್ಧಾರವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ದಾಖಲೆಯ ಅಂಚೆ ಮತಗಳು ಚಲಾವಣೆಯಾಗಿದ್ದು, ಫಲಿತಾಂಶ ಘೋಷಣೆ ಕೊಂಚ ತಡವಾಗುವ ಸಾಧ್ಯತೆಯಿದೆ. ಟ್ರಂಪ್ ಅವರು ಒಂದೇ ದಿನದಲ್ಲಿ ಮಿಷಿಗನ್, ಅಯೊವಾ, ಉತ್ತರ ಕೆರೊಲಿನಾ, ಜಾರ್ಜಿಯಾ ಹಾಗೂ ಫ್ಲಾರಿಡಾದಲ್ಲಿ ಸುತ್ತಾಡಿದರು. ಬೈಡನ್ ಅವರು, ತೀವ್ರ ಹಣಾಹಣಿ ಇರುವ ಪೆನ್ಸಿಲ್ವೇನಿಯಾದಲ್ಲಿ ಪಾಪ್ ತಾರೆ ಲೇಡಿ ಗಾಗಾ ಜತೆ ಮತಯಾಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು