ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿಯ ಕಿಡ್ನಿ ಕಸಿ

Last Updated 20 ಜನವರಿ 2022, 15:25 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ಅಲಬಾಮಾ ವಿಶ್ವವಿದ್ಯಾಲಯದಲ್ಲಿಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರಿಗೆ ಕುಲಾಂತರಿ ಹಂದಿಯ ಕಿಡ್ನಿಯನ್ನು ಜೋಡಿಸಲಾಗಿದ್ದು, ಈ ಪ್ರಯೋಗ ಸಫಲವಾದರೆ ಈ ವರ್ಷವೇ ಜೀವಂತ ವ್ಯಕ್ತಿಗೂ ಕಿಡ್ನಿ ಕಸಿ ನಡೆಸುವ ಸಾಧ್ಯತೆ ಇದೆ.

ಈ ತಿಂಗಳ ಅರಂಭದಲ್ಲಿ ಮೇರಿಲ್ಯಾಂಡ್ ಮೆಡಿಕಲ್‌ ಕಾಲೇಜ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಹಂದಿಯ ಹೃದಯವನ್ನು ಜೋಡಿಸಲಾಗಿದ್ದು, ರೋಗಿ ಈಗಲೂ ಜೀವಂತ ಇದ್ದಾರೆ.

ಹಂದಿಯ ಕಿಡ್ನಿ ಕಸಿ ಮಾಡಿ ಮೂರು ದಿನಗಳಾಗಿದ್ದು, ವ್ಯಕ್ತಿಯ ಜೀವರಕ್ಷಕ ಸಾಧನವನ್ನು ತೆಗೆದುಹಾಕುವ ತನಕವೂ ಹಂದಿಯ ಕಿಡ್ನಿಗಳು ಮಾನವನ ದೇಹವನ್ನು ತಿರಸ್ಕರಿಸಿದ ಲಕ್ಷಣ ಕಾಣಿಸಿಲ್ಲ. ಮಾನವನ ರಕ್ತದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು ಹಂದಿಯ ಕಿಡ್ನಿಯ ರಕ್ತದ ನಾಳಗಳು ಹೊಂದಿರುವುದು ಕಂಡುಬಂದಿದೆ ಹೀಗಾಗಿ ವೈದ್ಯರು ಈ ಪ್ರಯೋಗದ ಬಗ್ಗೆ ಆಶಾಭಾವನೆ ಹೊಂದಿದ್ದಾರೆ.

‘ಅಂಗಾಂಗ ಕಸಿ ಮಾಡುವುದಕ್ಕೆ ಅಂಗಾಂಗಗಳ ಅಭಾವ ಇದೆ. ಹೀಗಾಗಿ ಮನುಷ್ಯರಿಗೆ ಪ್ರಾಣಿಗಳ ಅಂಗಾಂಗ ಜೋಡಿಸುವ ಪ್ರಯೋಗ ನಡೆದಿದೆ, ಇಂತಹ ಪ್ರಯೋಗ ನಡೆಸಿದರಷ್ಟೇ ಮುಂದೆ ಏನಾದರೂ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಬಹುದು’ ಎಂದು ಅಲಬಾಮಾ ವಿಶ್ವವಿದ್ಯಾಲಯದ ಡಾ.ಜೇಮ್‌ ಲುಕೆ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT