ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Nobel Prize| ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ‘ವೈದ್ಯಕೀಯ ನೊಬೆಲ್‌’

Last Updated 4 ಅಕ್ಟೋಬರ್ 2021, 12:33 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌:ಅಮೆರಿಕದ ಸಂಶೋಧಕರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೂಟಿಯನ್ ಅವರಿಗೆ ಜಂಟಿಯಾಗಿ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿ ಸೋಮವಾರ ಹೇಳಿದೆ.

ಚರ್ಮದಲ್ಲಿನ ಸ್ಪರ್ಶ ಮತ್ತು ತಾಪಮಾನ ಗ್ರಾಹಕ ವ್ಯವಸ್ಥೆಯ ಕುರಿತ ಸಂಶೋಧನೆಗಳಿಗಾಗಿ ಇಬ್ಬರಿಗೂ ಬಹುಮಾನವನ್ನು ನೀಡಲಾಗಿದೆ ಎಂದು ಸಮಿತಿ ಹೇಳಿದೆ.

ನರ ಪ್ರಚೋದನೆಗಳ ಮೂಲಕ ಮಾನವರು ತಾಪಮಾನ ಮತ್ತು ಒತ್ತಡವನ್ನು ಹೇಗೆ ಗ್ರಹಿಸುತ್ತಾರೆ ಎಂಬ ಯಾಂತ್ರಿಕತೆಯನ್ನು ಈ ಜೋಡಿ ನಿರೂಪಿಸಿದೆ.

ದೀರ್ಘಕಾಲೀನ ನೋವುಗಳನ್ನೂ ಒಳಗೊಂಡಂತೆ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಈ ಜ್ಞಾನವನ್ನು ಬಳಸಲಾಗುತ್ತಿದೆ.

ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (₹8.50 ಕೋಟಿ) ಒಳಗೊಂಡಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT