ಗುರುವಾರ , ಸೆಪ್ಟೆಂಬರ್ 29, 2022
26 °C

ಭಾರತ ಮೂಲದ ಶೆಫಾಲಿ ರಾಜ್ದಾನ್‌ ನೆದರ್ಲೆಂಡ್ಸ್‌ಗೆ ಅಮೆರಿಕದ ರಾಯಭಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕನ್, ರಾಜಕೀಯ ಕಾರ್ಯಕರ್ತೆ ಶೆಫಾಲಿ ರಾಜ್ದಾನ್ ದುಗ್ಗಲ್ ಅವರನ್ನು ನೆದರ್ಲ್ಯಾಂಡ್ಸ್‌ಗೆ ತನ್ನ ರಾಯಭಾರಿಯಾಗಿ ಅಮೆರಿಕ ನಿಯೋಜಿಸಿದೆ.

50 ವರ್ಷದ ದುಗ್ಗಲ್ ಅವರ ನೇಮಕಕ್ಕೆ ಅಮೆರಿಕದ ಸೆನೆಟ್‌ನಲ್ಲಿ ಬುಧವಾರ ಧ್ವನಿ ಮತದ ಅಂಗೀಕಾರ ದೊರೆಯಿತು.

ಕಾಶ್ಮೀರಿ ಪಂಡಿತ ಸಮುದಾಯದವರಾದ ರಜ್ದಾನ್ ದುಗ್ಗಲ್ ಅವರು ಹರಿದ್ವಾರದಲ್ಲಿ ಜನಿಸಿದ್ದರು. ಎರಡು ವರ್ಷದವರಿದ್ದಾಗಲೇ ತಮ್ಮ ಕುಟುಂಬದೊಂದಿಗೆ ಅಮೆರಿಕದ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ಗೆ ತೆರಳಿದ್ದರು. ನಂತರ, ಐದು ವರ್ಷದವರಾಗಿದ್ದಾಗ ಓಹಿಯೋದ ಸಿನ್ಸಿನಾಟಿಗೆ ತೆರಳಿ, ಅಲ್ಲಿಯೇ ನೆಲೆಸಿದರು. ಮಿಯಾಮಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ರಜ್ದಾನ್ ದುಗ್ಗಲ್, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ್ದಾರೆ.

‘ನಾನು ಜನಿಸಿದ್ದು ಭಾರತದಲ್ಲಿ. ಆದರೆ ನಾನು ರೂಪುಗೊಂಡಿದ್ದು ಅಮೆರಿಕದಲ್ಲಿ‘ ಎಂದು ರಜ್ದಾನ್ ದುಗ್ಗಲ್ ಜುಲೈನಲ್ಲಿ ಸೆನೆಟ್‌ನ ವಿದೇಶಿ ವ್ಯವಹಾರಗಳ ಸಮಿತಿಯ ಸದಸ್ಯರೊಂದಿಗಿನ ಚರ್ಚೆಯ ವೇಳೆ ಹೇಳಿದ್ದರು.

ರಜ್ದಾನ್ ದುಗ್ಗಲ್ ಒಬ್ಬ ಅನುಭವಿ ರಾಜಕೀಯ ಕಾರ್ಯಕರ್ತೆ, ಮಹಿಳಾ ಹಕ್ಕುಗಳ ವಕೀಲೆ ಮತ್ತು ಮಾನವ ಹಕ್ಕುಗಳ ಪ್ರತಿಪಾದಕಿ. ಅವರು ಅಮೆರಿಕದ ‘ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಕೌನ್ಸಿಲ್‌’ಗೂ ನೇಮಕಗೊಂಡಿದ್ದರು. ಪಾಶ್ಚಿಮಾತ್ಯ ಪ್ರಾದೇಶಿಕ ಸಲಹೆಗಾರರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು