ಶುಕ್ರವಾರ, ಜೂನ್ 25, 2021
29 °C

ಬಡರಾಷ್ಟ್ರಗಳಿಗೆ ಇನ್ನೂ ಲಭ್ಯವಾಗದ ಕೋವಿಡ್‌ ಲಸಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಎನ್‌ಡ್ಜಮೀನಾ (ಚಾಡ್‌): ಹಲವು ಶ್ರೀಮಂತ ರಾಷ್ಟ್ರಗಳು ತಮ್ಮ ನಾಗರಿಕರಿಗಾಗಿ ಲಸಿಕೆಯನ್ನು ದಾಸ್ತಾನು ಮಾಡಿಕೊಂಡಿವೆ. ಆದರೆ ಚಾಡ್‌ನಂತಹ ಅದೆಷ್ಟೋ ಬಡರಾಷ್ಟ್ರಗಳಲ್ಲಿ ಈವರೆಗೆ ಲಸಿಕೆಯ ಒಂದು ಡೋಸ್‌ ಕೂಡ ಲಭ್ಯವಾಗಿಲ್ಲ.

‘ಆಫ್ರಿಕಾ ಖಂಡದಲ್ಲಿ ಸುಮಾರು 12 ರಾಷ್ಟ್ರಗಳು ಲಸಿಕೆಗಾಗಿ ಕಾಯುತ್ತಿವೆ. ಈ ಸಾಲಿನಲ್ಲಿ ಚಾಡ್‌, ಬರ್ಕಿನಾ ಪಾಸೊ,ಎರಿಟ್ರಿಯಾ. ಹೈಟಿ ಮತ್ತು ತಾಂಜೇನಿಯಾ ದೇಶಗಳಿವೆ. ಲಸಿಕೆ ಸರಬರಾಜು ವಿಚಾರದಲ್ಲಿ ಆಫ್ರಿಕ ಖಂಡವೇ ಹಿಂದುಳಿದಿದ್ದು, ಅಲ್ಲಿನ ಕೆಲವು ರಾಷ್ಟ್ರಗಳು ಇನ್ನಷ್ಟು ಹಿಂದೆಬಿದ್ದಿವೆ. ಆಫ್ರಿಕಾ ಖಂಡದಲ್ಲಿ ವಿಶ್ವದಲ್ಲಿ ನೀಡಲಾಗುತ್ತಿರುವ ಶೇಕಡಾ 1ರಷ್ಟು ಲಸಿಕೆ ಮಾತ್ರ ಲಭ್ಯವಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

‘ವಿಶ್ವದ ಹಾಟ್‌ಸ್ಪಾಟ್‌ಗಳಿಗೆ ಹೋಲಿಸಿದರೆ ಇಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. ಆದರೆ ಇಲ್ಲಿನ ಆರೋಗ್ಯ ವ್ಯವಸ್ಥೆ ದುರ್ಬಲವಾಗಿರುವುದರಿಂದ ಹೊಸ ಸ್ವರೂಪದ ಸೋಂಕು ಪತ್ತೆಯಾಗುವ ಸಾಧ್ಯತೆಯಿದೆ’ ಎಂದು ಅದು ಎಚ್ಚರಿಸಿದೆ.

ಚಾಡ್‌ನಲ್ಲಿ ಈವರೆಗೆ 170 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 1.1 ಕೋಟಿ ಜನಸಂಖ್ಯೆ ಇರುವ ಹೈಟಿಯಲ್ಲಿ ಸಹ ಇದುವರೆಗೆ ಲಸಿಕೆ ನೀಡಿಕೆ ಆರಂಭವಾಗಿಲ್ಲ.

‘ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಭಾರತವೂ ಜಾಗತಿಕವಾಗಿ ನೀಡುತ್ತಿದ್ದ ಲಸಿಕೆ ಪ್ರಮಾಣವನ್ನು ಕಡಿಮೆಗೊಳಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣದಿಂದಾಗಿ ಲಸಿಕೆ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಇದರಿಂದಾಗಿ ಬರ್ಕಿನಾ ಪಾಸೊಗೆ ಲಸಿಕೆ ಸಿಗಲು ಇನ್ನಷ್ಟು ತಡವಾಗಲಿದೆ’ ಎಂದು ಅಮೆರಿಕದ ನೆರವು ಗುಂಪಿನ ಸಿಇಒ ಡೊನಾಲ್ಡ್‌ ಬ್ರೂಕ್ ಅವರು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು