ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವ ಲಸಿಕೆಗಳು: ಇಎಂಎ

Last Updated 12 ಜನವರಿ 2022, 3:40 IST
ಅಕ್ಷರ ಗಾತ್ರ

ಲಂಡನ್: ಓಮೈಕ್ರಾನ್ ಕೊರೊನಾ ರೂಪಾಂತರದಿಂದ ಉಂಟಾಗುವ ತೀವ್ರವಾದ ಕಾಯಿಲೆ ಮತ್ತು ಆಸ್ಪತ್ರೆಗೆ ದಾಖಲಾಗುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದು ಯೂರೋಪಿನ ಔಷಧ ಸಂಸ್ಥೆ(ಇಎಂಎ) ಎಂದು ಹೇಳಿದೆ.

‘ಓಮೈಕ್ರಾನ್‌ ಇತರ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿ ಕಂಡುಬಂದರೂ ಸಹ ಈ ಸೋಂಕು ಮೊದಲು ಕಂಡು ಬಂದ ದಕ್ಷಿಣ ಆಫ್ರಿಕಾ, ಬ್ರಿಟನ್ ಮತ್ತು ಕೆಲವು ಯೂರೋಪ್ ದೇಶಗಳಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ, ಓಮೈಕ್ರಾನ್ ಸೋಂಕಿನ ನಂತರ ಆಸ್ಪತ್ರೆಗೆ ದಾಖಲಾಗುವ ಅಪಾಯ ಕಡಿಮೆ ಇರುವುದು ಪತ್ತೆಯಾಗಿದೆ. ಇನ್ನು, ಈ ಅಧ್ಯಯನಗಳ ಪ್ರಕಾರ, ಕೊರೊನಾ ಮೂರನೇ ಅಲೆಯಲ್ಲಿ ಅಪಾಯದ ಅರ್ಧದಷ್ಟು ಪಾಲು ಡೆಲ್ಟಾದ್ದೇ ಆಗಿರಲಿದೆ ಎಂದು ಅಂದಾಜಿಸಲಾಗಿದೆ’ ಎಂದು ಇಎಂಎ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ರೋಗಲಕ್ಷಣ ಕಂಡು ಬರುವ ಇತರೆ ರೂಪಾಂತರಗಳಿಗೆ ಹೋಲಿಸಿದರೆ ಲಸಿಕೆ ಪರಿಣಾಮಕಾರಿತ್ವವು ಓಮೈಕ್ರಾನ್ ಸೋಂಕಿತರಲ್ಲಿ ಕಡಿಮೆಯಾಗಿದೆ ಎಂದು ಇತ್ತೀಚೆಗೆ ಪ್ರಕಟವಾದ ಅಧ್ಯಯನಗಳ ಫಲಿತಾಂಶಗಳನ್ನು ಇದು ಉಲ್ಲೇಖಿಸಿದೆ. ಹಾಗಾಗಿ, ಲಸಿಕೆ ಬಳಿಕವೂ ಜನರು ಓಮೈಕ್ರಾನ್‌ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ.

ಆದರೂ, ಓಮೈಕ್ರಾನ್ ರೂಪಾಂತರಕ್ಕೆ ಸಂಬಂಧಿಸಿರುವ ತೀವ್ರತರವಾದ ಕಾಯಿಲೆ ಮತ್ತು ಆಸ್ಪತ್ರೆಗೆ ಸೇರಿಸುವಿಕೆಯ ವಿರುದ್ಧ ಲಸಿಕೆಗಳು ಹೆಚ್ಚಿನ ಮಟ್ಟದ ರಕ್ಷಣೆಯನ್ನು ಒದಗಿಸುತ್ತವೆ ಎಂದು ಈ ಅಧ್ಯಯನಗಳು ಹೇಳುತ್ತವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚಿನ ಡೇಟಾ ಪ್ರಕಾರ, ಬೂಸ್ಟರ್ ಡೋಸ್ ಪಡೆದಿರುವ ಜನರು ತಮ್ಮ ಪ್ರಾಥಮಿಕ ಡೋಸ್‌ ಕೋವಿಡ್ ಲಸಿಕೆ ಪಡೆದವರಿಗಿಂತ ಉತ್ತಮವಾಗಿ ರಕ್ಷಣೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಲಸಿಕೆಗಳ ಪರಿಣಾಮಕಾರಿತ್ವವನ್ನು ಏಜೆನ್ಸಿಯು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಮತ್ತು ಈ ಮೌಲ್ಯಮಾಪನದ ಫಲಿತಾಂಶವು ಯೂರೋಪಿನ ಸದಸ್ಯ ರಾಷ್ಟ್ರಗಳ ಭವಿಷ್ಯದ ವ್ಯಾಕ್ಸಿನೇಷನ್ ಅಭಿಯಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಇಎಂಎಯ ಲಸಿಕೆಗಳ ಕಾರ್ಯತಂತ್ರದ ಮುಖ್ಯಸ್ಥ ಮಾರ್ಕೊ ಕ್ಯಾವಲೆರಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT