ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿ: ಅಮೆರಿಕದ ವಾಶೊ ಕೌಂಟಿಯಲ್ಲಿ ಮೊದಲ ಸಾವು

Last Updated 2 ಜುಲೈ 2021, 7:58 IST
ಅಕ್ಷರ ಗಾತ್ರ

ರೆನೊ (ಅಮೆರಿಕ): ಉತ್ತರ ನೆವಡಾದ ವಾಶೊ ಕೌಂಟಿಯಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿ ಸೋಂಕಿನಿಂದಾಗಿ 40 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇದು ಡೆಲ್ಟಾ ರೂಪಾಂತರ ತಳಿಯ ಸೋಂಕಿನಿಂದಾಗಿ ಸಂಭವಿಸಿದ ಮೊದಲ ಸಾವು ಎಂದು ಇಲ್ಲಿನ ಆರೋಗ್ಯ ಇಲಾಖೆ ದೃಢಪಡಿಸಿದೆ.

ಭಾರತದಲ್ಲಿ ಮೊದಲು ಕಂಡು ಬಂದಿದ್ದ ರೂಪಾಂತರ ತಳಿಯ ಸೋಂಕಿನಿಂದ ಬಳಲುತ್ತಿದ್ದ ಈ ಮಹಿಳೆಯನ್ನು ರೆನೊ–ಸ್ಪಾ‌ರ್ಕ್ಸ್ ಪ್ರದೇಶದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ. ಅಲ್ಲದೇ, ಅವರು ಕೋವಿಡ್‌–19 ಲಸಿಕೆಯನ್ನು ಪಡೆದಿರಲಿಲ್ಲ ಎಂದು ವಾಶೊ ಕೌಂಟಿಯ ಜಿಲ್ಲಾ ಆರೋಗ್ಯ ಅಧಿಕಾರಿ ಕೆವಿನ್ ಡಿಕ್ ಹೇಳಿದ್ದಾರೆ.

‘ವಾಶೊ ಕೌಂಟಿಯಲ್ಲಿ ಕಳೆದ ಎರಡು ವಾರಗಳಿಂದ ಡೆಲ್ಟಾ ತಳಿಯ ಸೋಂಕಿನ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಈ ತಳಿಯ ಸೋಂಕು ತೀವ್ರವಾಗಿ ಹರಡುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಿಂದ ಇಲ್ಲಿವರೆಗೆ ಈ ಕೌಂಟಿಯಲ್ಲಿ ಕೋವಿಡ್‌–19 ನಿಂದ 685 ಮಂದಿ ಸಾವನ್ನಪ್ಪಿದ್ದು, ರೂಪಾಂತರ ತಳಿಯಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ವಾಶೊ ಕೌಂಟಿಯಲ್ಲಿ ದೃಢಪಟ್ಟಿರುವ 51 ಕೊರೊನಾ ಸೋಂಕಿನ ಪ್ರಕರಣಗಳಲ್ಲಿ 34 ಡೆಲ್ಟಾ ರೂಪಾಂತರ ತಳಿಯ ಪ್ರಕರಣಗಳಾಗಿವೆ. ಜೂನ್ 15ರಂದು ನೆವಡಾದಲ್ಲಿ ಮೊದಲ ಡೆಲ್ಟಾ ರೂಪಾಂತರ ತಳಿ ಸೋಂಕಿನ ಪ್ರಕರಣ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT