ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಕ್ರಿಸ್‌ಮಸ್‌ ಪರೇಡ್‌ನತ್ತ ನುಗ್ಗಿದ್ದ ವಾಹನ, 5 ಸಾವು

Last Updated 22 ನವೆಂಬರ್ 2021, 7:03 IST
ಅಕ್ಷರ ಗಾತ್ರ

ವುಕೆಸಾ (ಅಮೆರಿಕ): ವಿಸ್ಕಾನ್ಸಿನ್‌ನ ವುಕೆಸಾದಲ್ಲಿ ಭಾನುವಾರ ರಾತ್ರಿ ಕ್ರಿಸ್‌ಮಸ್‌ ಪರೇಡ್‌ನಲ್ಲಿ ಭಾಗವಹಿಸಿದ್ದ ಜನರ ಮೇಲೆ ಎಸ್‌ಯುವಿ ಹರಿದ ಕಾರಣ 5 ಮಂದಿ ಮೃತಪಟ್ಟು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಈ ಘಟನೆಯನ್ನು ಹಲವರು ಮೊಬೈಲ್‌ ಫೋನ್‌ಗಳಲ್ಲಿ ಚಿತ್ರಿಸಿಕೊಂಡಿದ್ದಾರೆ.

'ಹಲವರು ಸಾವಿಗೀಡಾಗಿದ್ದಾರೆ. ಕೆಂಪು ಬಣ್ಣದ ಎಸ್‌ಯುವಿಯ ಚಾಲಕನನ್ನು ಬಂಧಿಸಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಯುತ್ತಿದೆ"ಎಂದು ಪೊಲೀಸ್‌ ಮುಖ್ಯಸ್ಥ ಡ್ಯಾನ್‌ ಥಾಮ್ಸ್‌ನ್‌ ತಿಳಿಸಿದ್ದಾರೆ.

ವಾಹನವು ಬ್ಯಾರಿಕೇಡ್‌ಗಳನ್ನು ಗುದ್ದಿಕೊಂಡು ಜನರ ಮೇಲೆ ಹರಿದಿದೆ. ಕೆಲವರು ಸಾವಿಗೀಡಾಗಿದ್ದು ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಸ್ಥಳೀಯ ಆಸ್ಪತ್ರೆಯೊಂದರಲ್ಲಿ 30ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿರುವುದಾಗಿ ವರದಿಯಾಗಿದೆ.ಕ್ಯಾಥೊಲಿಕ್‌ ಶಾಲೆಯ ಮಕ್ಕಳೂ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ವಾಹನವು ಬ್ಯಾರಿಕೇಡ್ ಅನ್ನು ಮುರಿದು ಬರುತ್ತಿದ್ದಂತೆಯೇ ಪೊಲೀಸ್‌ ಅಧಿಕಾರಿಯೊಬ್ಬರು ವಾಹನದತ್ತ ಗುಂಡು ಹಾರಿಸಿದ್ದಾರೆ. ಘಟನೆಯ ಅನೇಕ ದೃಶ್ಯಾವಳಿಗಳು ಲಭ್ಯವಾಗಿದ್ದು ಒಂದು ವಿಡಿಯೊದಲ್ಲಿ ಎಸ್‌ಯುವಿ ಬ್ಯಾರಿಕೇಡ್‌ ದಾಟಿ ಬರುತ್ತಿರುವ ದೃಶ್ಯವಿದ್ದರೆ, ಮತ್ತೊಂದರಲ್ಲಿ ರಸ್ತೆಯಲ್ಲಿ ಹೆಣ್ಣುಮಗು ನರ್ತಿಸುತ್ತಿರುವಾಗಲೇ ಆಕೆಯ ಪಕ್ಕದಿಂದ ವಾಹನ ಹಾಯ್ದು ಜನರ ಮೇಲೆ ಹರಿದ ದೃಶ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT