ಮಂಗಳವಾರ, ಸೆಪ್ಟೆಂಬರ್ 21, 2021
29 °C

ಅಮೆರಿಕದಲ್ಲಿ 2,500 ಮಂದಿ ಗಂಭೀರ ಅಪರಾಧಗಳಿಂದ ಮುಕ್ತ

ಎಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದಲ್ಲಿ ಹಿಂದಿನ ಮೂರು ದಶಕಗಳಲ್ಲಿ ತಮ್ಮದಲ್ಲದ ತಪ್ಪಿಗಾಗಿ ಶಿಕ್ಷೆಗೆ ಗುರಿಯಾಗಿದ್ದ ಸುಮಾರು 2,500 ಮಂದಿ ಗಂಭೀರ ಅಪರಾಧಗಳಿಂದ ಮುಕ್ತರಾಗಿದ್ದಾರೆ.

ಈ ಪೈಕಿ ಅರ್ಧದಷ್ಟು ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನು ‍ಪೊಲೀಸರು ಹಾಗೂ ಫಿರ್ಯಾದಿದಾರರೇ ತಡೆ ಹಿಡಿದಿದ್ದಾರೆ ಎಂಬುದು ನ್ಯಾಷನಲ್‌ ರೆಜಿಸ್ಟ್ರಿ ಆಫ್‌ ಎಕ್ಸೊನರೇಷನ್ಸ್‌ ಸಂಸ್ಥೆಯ ಅಧ್ಯಯನದಿಂದ ತಿಳಿದುಬಂದಿದೆ.

ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಶೇ 61ರಷ್ಟು ಸಾಕ್ಷಿಗಳನ್ನು ಪೊಲೀಸರು ತಡೆ ಹಿಡಿದಿದ್ದಾರೆ ಎಂಬುದೂ ಅಧ್ಯಯನದಿಂದ ಗೊತ್ತಾಗಿದೆ.

ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ–ಇರ್ವಿನ್‌, ದಿ ಯೂನಿವರ್ಸಿಟಿ ಆಫ್‌ ಮಿಷಿಗನ್‌ ಲಾ ಸ್ಕೂಲ್‌ ಹಾಗೂ ಮಿಷಿಗನ್‌ ಸ್ಟೇಟ್‌ ಯೂನಿವರ್ಸಿಟಿ ಲಾ ಸ್ಕೂಲ್‌ ಜಂಟಿಯಾಗಿ ಈ ಸಂಶೋಧನೆ ಕೈಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.