ಶನಿವಾರ, ನವೆಂಬರ್ 26, 2022
23 °C
Xi Jinping appears in public

ಸಾರ್ವಜನಿಕವಾಗಿ ಕಾಣಿಸಿದ ಜಿನ್‌ಪಿಂಗ್‌: ವದಂತಿಗಳಿಗೆ ತೆರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಶಾಂಘೈ ಸಹಕಾರ ಶೃಂಗಸಭೆಯಲ್ಲಿ (ಎಸ್‌ಸಿಒ) ಪಾಲ್ಗೊಂಡು ಹಿಂತಿರುಗಿದ ಮೇಲೆ ಸೆ.16ರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಂಗಳವಾರ ಕಮ್ಯುನಿಸ್ಟ್‌ ಪಕ್ಷದ ಕಳೆದೊಂದು ದಶಕದ ಆಡಳಿತ ಸಾಧನೆ ಬಿಂಬಿಸುವ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಮೂಲಕ ಮೊದಲ ಬಾರಿಗೆ ಕಾಣಿಸಿಕೊಂಡರು. 

ಆಡಳಿತರೂಢ ಕಮ್ಯುನಿಸ್ಟ್‌ ಪಕ್ಷದ ಪ್ರಮುಖ ಅಧಿವೇಶನ ಮುಂದಿನ ತಿಂಗಳು ನಿಗದಿಯಾಗಿದ್ದು, ಜಿನ್‌ಪಿಂಗ್‌ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಈ ಪ್ರದರ್ಶನ ನಡೆಯುತ್ತಿದೆ. 

ಜಾಲತಾಣಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ‘ಕಮ್ಯುನಿಸ್ಟ್‌ ದೇಶದಲ್ಲಿ ಸೇನಾ ಕ್ರಾಂತಿ ನಡೆದಿದೆ, ಅಧ್ಯಕ್ಷರನ್ನು ಪದಚ್ಯುತಿಗೊಳಿಸಿ ಗೃಹಬಂಧನದಲ್ಲಿರಿಸಲಾಗಿದೆ’ ಎಂಬ ಮಾಹಿತಿ ಮತ್ತು ವಿಡಿಯೊಗಳಿಂದ ವ್ಯಾಪಕವಾಗಿ ಹರಡಿದ್ದ ವದಂತಿಗಳಿಗೆ ಜಿನ್‌ಪಿಂಗ್‌ ಅವರ ಸಾರ್ವಜನಿಕ ಭೇಟಿ ತೆರೆ ಎಳೆದಿದೆ. 

ಚೀನಾದ ಮಣ್ಣಿನ ಗುಣಗಳನ್ನು ಉಳಿಸಿಕೊಳ್ಳುವ ಜತೆಗೆ ಸಮಾಜವಾದದ ಹೊಸ ದಿಗ್ವಿಜಯವನ್ನು ದೃಢನಿಶ್ಚಯದಿಂದ ಮುಂದುವರಿಸಲು ಸರ್ವ ಪ್ರಯತ್ನ ನಡೆಸುವಂತೆ ತಮ್ಮ ಪಕ್ಷದ ಪ್ರತಿನಿಧಿಗಳಿಗೆ ಅವರು ಕರೆ ನೀಡಿದರು ಎಂದು ಸರ್ಕಾರಿ ಸುದ್ದಿ ಸಂಸ್ಥೆ ಶಿನುಹಾ ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು