ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮೆನ್‌: ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಗೆ 10 ನಾಗರಿಕರು ಸಾವು

Last Updated 1 ನವೆಂಬರ್ 2021, 10:12 IST
ಅಕ್ಷರ ಗಾತ್ರ

ಸನ್ನಾ (ಯೆಮೆನ್): ಯೆಮೆನ್‌ನ ಹೌತಿ ಬಂಡುಕೋರರು ಸಿಡಿಸಿದ ಎರಡು ಬ್ಲಾಸ್ಟಿಕ್ ಕ್ಷಿಪಣಿಗಳಿಂದ 10 ನಾಗರಿಕರು ಮೃತಪಟ್ಟ ಘಟನೆ ಯೆಮೆನ್‌ನ ಮಾರಿಬ್ ನಗರದಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ.

ಮಾರಿಬ್‌ನ ‘ದರ್ ಅಲ್ ಹಾದಿತ್‘ ಮಸೀದಿ ಹಾಗೂ ಧಾರ್ಮಿಕ ಶಾಲೆಯನ್ನು ಗುರಿಯಾಗಿಸಿಕೊಂಡು ಹೌತಿ ಉಗ್ರರು ಈ ಕೃತ್ಯ ನಡೆಸಿದ್ದಾರೆ. ಘಟನೆಯಲ್ಲಿ 25 ಜನ ಗಂಭಿರವಾಗಿ ಗಾಯಗೊಂಡಿದ್ದಾರೆ.

ಮೃತಪಟ್ಟವರು ಹಾಗೂ ಗಾಯಗೊಂಡವರೆಲ್ಲರೂ ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದು ಬಂದಿದೆ. ಆದರೆ ಈ ದಾಳಿಯ ಬಗ್ಗೆ ಹೌತಿ ಉಗ್ರರು ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಯೆಮೆನ್‌ನ ಉತ್ತರ ಭಾಗವನ್ನು ತಾವು ಆಳಬೇಕು ಎಂದು ನಿರ್ಧರಿಸಿರುವ ಹೌತಿ ಬುಡಕಟ್ಟು ಜನ, ಹೌತಿ ರೆಬೆಲ್ಸ್ ಎಂಬ ಸಂಘಟನೆ ಕಟ್ಟಿಕೊಂಡು ಯೆಮೆನ್ ಸರ್ಕಾರದ ಜೊತೆ 2014 ರಿಂದ ನಾಗರಿಕ ಯುದ್ಧ ನಡೆಸುತ್ತಿದ್ದಾರೆ. ಉತ್ತರ ಭಾಗದ ಅನೇಕ ಪ್ರಾಂತ್ಯಗಳಲ್ಲಿ ಹಿಡಿತ ಸಾಧಿಸಿರುವ ಹೌತಿಗಳು ಇದೀಗ ತೈಲ ಸಮೃದ್ಧ ಮಾರಿಬ್ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ನೋಡುತ್ತಿದ್ದಾರೆ.

ಕಳೆದ ಗುರುವಾರವಷ್ಟೇ ಅಲ್-ಔಮ್ದ್‌ನಲ್ಲಿರುವ ಪ್ರಮುಖ ಬುಡಕಟ್ಟು ನಾಯಕನ ಮನೆಯ ಮೇಲೂ ಹೌತಿ ಉಗ್ರರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದರು. ಈ ವೇಳೆ ಕನಿಷ್ಠ 11 ನಾಗರಿಕರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT