ಮಂಗಳವಾರ, ಫೆಬ್ರವರಿ 25, 2020
19 °C
ನಿಮ್ಮ ಸಂಗಾತಿಗೆ ನೀವು ಪ್ರಪೋಸ್ ಮಾಡಿದ್ದು ಹೇಗೆ? ನಮಗೆ ತಕ್ಷಣ ಬರೆದು ಕಳುಹಿಸಿ

ವ್ಯಾಲೆಂಟೈನ್ಸ್ ಡೇ: ಮಧುರ ನೆನಪು ಹಂಚಿಕೊಳ್ಳಿರಿ, ಸ್ಮಾರ್ಟ್ ಸ್ಪೀಕರ್ ಗೆಲ್ಲಿರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Valentine Day Special

ಸೈಂಟ್ ವ್ಯಾಲೆಂಟೈನ್ಸ್ ಹೆಸರಿನಲ್ಲಿ ಪ್ರತಿ ವರ್ಷ ಫೆ.14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ಪಾಶ್ಚಾತ್ಯ ಸಂಭ್ರಮವು ಭಾರತಕ್ಕೆ ಬಂದು ಸಾಕಷ್ಟು ಕಾಲವೇ ಆಗಿದೆ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಸ್ವೇಚ್ಛೆಯಿಂದ ರಾದ್ಧಾಂತಗಳನ್ನು ಮಾಡುವವರೂ ಇದ್ದಾರೆ. ಆದರೆ ಈ ದಿನವನ್ನು ತಮ್ಮ ಪ್ರೀತಿ ಪಾತ್ರರಲ್ಲಿ ನಿಷ್ಕಲ್ಮಶ ಪ್ರೇಮ ನಿವೇದನೆ ಮಾಡಿಕೊಳ್ಳುವುದಕ್ಕೂ ಹಲವರು ಬಳಸುತ್ತಾರೆ. ನಿಮ್ಮ ಸಂಗಾತಿಗೆ ನೀವು ಹೇಗೆ ಪ್ರೇಮ ನಿವೇದನೆ ಮಾಡಿದಿರಿ? ಈ ಸವಿ ನೆನಪುಗಳನ್ನು 300 ಪದಗಳೊಳಗೆ ಪ್ರಜಾವಾಣಿ ಜೊತೆಗೆ ಹಂಚಿಕೊಳ್ಳಿರಿ.

ವಿಷಯ: ನೀವು ಇಷ್ಟಪಟ್ಟ ವ್ಯಕ್ತಿಗೆ ಹೇಗೆ ಪ್ರಪೋಸ್ ಮಾಡಿದಿರಿ?

ನಿಮ್ಮ ಮನದಲ್ಲಿ ಬೆಚ್ಚಗೆ ಅಡಗಿರುವ ನೆನಪುಗಳನ್ನು ಹಂಚಿಕೊಳ್ಳಲು ಪ್ರಜಾವಾಣಿ ಜಾಲತಾಣವು ವೇದಿಕೆ ಒದಗಿಸುತ್ತಿದೆ. ಆಯ್ದ ಬರಹಗಳನ್ನು Prajavani.net ನಲ್ಲಿ ಪ್ರಕಟಿಸಲಾಗುವುದು.

ಮಾತ್ರವಲ್ಲ, ಅವುಗಳಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಮೂರು ಬರಹಗಳಿಗೆ ಅಮೆಜಾನ್ ಇಕೋ-ಡಾಟ್ ಎಂಬ ಸ್ಮಾರ್ಟ್ ಸ್ಪೀಕರ್ ಬಹುಮಾನವೂ ಇದೆ. ಹಾಗಿದ್ದರೆ ತಡವೇಕೆ? ತಕ್ಷಣವೇ ಆ ಹಿಂದಿನ ದಿನಗಳನ್ನು ಮೆಲುಕು ಹಾಕಿಕೊಳ್ಳುತ್ತಾ, ಕೀಬೋರ್ಡ್‌ನಲ್ಲಿ ಟೈಪ್ ಮಾಡಲು ಸಿದ್ಧರಾಗಿ.

* ಕನ್ನಡ ಯುನಿಕೋಡ್‌ನಲ್ಲಿ ಟೈಪ್ ಮಾಡಿದ ಬರಹಗಳನ್ನು pvonline@prajavani.co.in ವಿಳಾಸಕ್ಕೆ ಇಮೇಲ್ ಕಳಿಸಿ
* ನಿಮ್ಮ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆ ಇರಲಿ.

* ನೀವು ಬರೆಯುವ ಪುಟ್ಟ ಲೇಖನವು ಸೋಷಿಯಲ್ ಮೀಡಿಯಾ, ನಿಯತಕಾಲಿಕ, ಯಾವುದೇ ಪತ್ರಿಕೆ, ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು ಎಂಬುದು ನೆನಪಿರಲಿ.
* ಹೆಸರು ಗೌಪ್ಯವಾಗಿರಿಸಬೇಕು ಎಂದಿದ್ದಲ್ಲಿ ಅದನ್ನೂ ನಮೂದಿಸಿ.
* ನಿಮ್ಮ ಬರಹಗಳು ನಮ್ಮನ್ನು ತಲುಪಲು 2020 ಫೆಬ್ರುವರಿ 10 ಕೊನೆಯ ದಿನ.
* ತೀರ್ಪುಗಾರರ ನಿರ್ಣಯವೇ ಅಂತಿಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು