ಮದುವೆಯಾದರೆ ಪ್ರೇಮಕ್ಕೊಂದು ಫುಲ್‌ಸ್ಟಾಪ್ ಎಂಬ ತಮಾಷೆ ಜತೆ ಮದುವೆ ನಿತ್ಯದ ಪ್ರೇಮಾರಾಧನೆ ಎನ್ನುವ ಜೋಡಿಗಳಿದ್ದಾರೆ. ಸಂಸಾರ ಜಂಜಡಗಳನ್ನು ದೂರಕ್ಕೆ ಸರಿಸಿ, ಪ್ರೇಮತೆಕ್ಕೆಯಲ್ಲಿ ನೆಮ್ಮದಿಯಾಗಿದ್ದಾರೆ.

ಚಂದನವನದ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಪ್ರೇಮದಿನದ ಸಂಭ್ರಮದಲ್ಲಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರಾಧಿಕಾ ಪಂಡಿತ್, ‘ಇದು ನಮ್ಮ 10ನೇ ವರ್ಷದ ಪ್ರೇಮಿಗಳ ದಿನ’ ಎಂದು ಹೇಳಿ ಕಳೆದ ವರ್ಷಗಳಿಂದ ಆಚರಿಸಿರುವ ಪ್ರೇಮಿಗಳ ದಿನದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ‘ಮೊದಲೆರಡು ವರ್ಷದ ಫೋಟೊಗಳು ಕಾಣೆಯಾಗಿವೆ. ಅದೆಲ್ಲಿ ಹೋದವು ಗೊತ್ತಿಲ್ಲ. ಆದರೆ ಎಂಟು ವರ್ಷದ ಫೋಟೊಗಳು, ಹಳೆಯ ನೆನಪುಗಳ ಸೌಂದರ್ಯವನ್ನು ಮೆಲುಕು ಹಾಕುವಂತೆ ಮಾಡಿವೆ. ಇದರಲ್ಲಿ ಇಷ್ಟವಾದ ಫೋಟೊ ಯಾವುದು ಎಂದು ಆಯ್ಕೆ ಮಾಡುವುದು ಕಷ್ಟ’ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಮಗಳು ಐರಾ ಇರುವ ಫೋಟೊವೊಂದು ಇದೆ ಎಂದಿದ್ದಾರೆ.

ಮದುವೆಯಾದ ಮೇಲೆ ಮೊದಲ ಬಾರಿಗೆ ಪ್ರೇಮಿಗಳ ದಿನ ಆಚರಿಸುತ್ತಿರುವ ನಟ ರಿಷಿ, ತಮ್ಮ ಪತ್ನಿ ಸ್ವಾತಿ ಪರಶುರಾಮನ್ ಅವರೊಂದಿಗೆ ಕುಟುಂಬ ಸಮೇತ ಕೇರಳದಲ್ಲಿದ್ದಾರೆ.

‘ಈ ವರ್ಷ ಕೇರಳದಲ್ಲೇ ನಮ್ಮೆಲ್ಲಾ ಸಂಭ್ರಮಾಚರಣೆ. ಒಂದು ಒಳ್ಳೇ ಊಟ ಮಾಡಿ, ಹೂಗುಚ್ಛ ಕೊಟ್ಟಿದ್ದೇನೆ. ನನ್ನ ಬದುಕಿನಲ್ಲಿ ಪ್ರೇಮಧಾರೆಯಾಗಿರುವ ಸ್ವಾತಿಗೆ ಧನ್ಯವಾದ ಹೇಳಿದ್ದೇನೆ’ ಎನ್ನುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆ್ಯಕ್ಟಿವ್ ಇರುವ ನಟಿ ಶಿಲ್ಪಾಶೆಟ್ಟಿ ತಮ್ಮ ಪತಿಗಾಗಿ ವಿಡಿಯೊವೊಂದನ್ನು ಮಾಡಿ ಪ್ರೇಮಿಗಳ ದಿನದ ಶುಭಾಷಯ ಕೋರಿದ್ದಾರೆ.

‘ಸ್ನೇಹಿತರಾಗಿದ್ದ ನಾವು ಪ್ರೇಮಿಗಳಾಗಿದ್ದು ಹೇಗೆ, ನನಗೆ ಕೊಟ್ಟ ಭಾಷೆಯನ್ನು ನೆರವೇರಿಸಿದ್ದೀರಿ, ನನ್ನೊಂದಿಗೆ ಸತ್ಯ ನಿಷ್ಠೆಯಿಂದ ನಡೆದುಕೊಂಡಿದ್ದೀರಿ, ನೀವು ನನ್ನವರು ಎಂದು ಹೇಳಲು ಖುಷಿಯಾಗುತ್ತದೆ. ಹೇಳಲು ಹೇಚ್ಚಿನದ್ದೇನು ಇಲ್ಲ. ಇಂದು ಮತ್ತು ಎಂದೆಂದು ನಾನು ಪ್ರೀತಿಸುತ್ತಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರೇಮಿಗಳ ದಿನವನ್ನೇ ಬದಲಾಯಿಸಿ ಫೆಬ್ರುವರಿ ಒಂದರಂದು ಪ್ರೇಮಿಗಳ ದಿನ ಆಚರಿಸುತ್ತಾರೆ ಪ್ರಮೋದ್ ಶೆಟ್ಟಿ. ಪಿಯುಸಿಯಲ್ಲಿ ಓದುತ್ತಿದ್ದಾಗ ಫೆಬ್ರುವರಿ ಒಂದರಂದು ಪ್ರಪೋಸ್ ಮಾಡಿದ್ದರಂತೆ ಹಾಗಾಗಿ ಅಂದೇ ಅವರಿಗೆ ಪ್ರೇಮಿಗಳ ದಿನ. ಮೊದಲಬಾರಿ ಕಾಲ್ಗೆಜ್ಜೆ ಉಡುಗೊರೆ ನೀಡಿದ್ದಾರೆ. ಪತ್ನಿ ಸುಪ್ರೀತಾ ಶೆಟ್ಟಿಯವರೊಂದಿಗೆ ಇದು 19ನೇ ವರ್ಷದ ಪ್ರೇಮಾಚರಣೆ. ಕೇಕ್‌ಕಟ್ ಮಾಡ್ತಾರಂತೆ. ಕೆಲಸದ ಒತ್ತಡದಲ್ಲಿ ಎಷ್ಟೇ ಬ್ಯುಸಿ ಇದ್ದರು, ವಿಶ್ ಮಾಡುವುದನ್ನು ಮರೆಯುವುದಿಲ್ಲ ಎನ್ನುತ್ತಾರೆ ಪ್ರಮೋದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.