ಭಾನುವಾರ, ಏಪ್ರಿಲ್ 11, 2021
22 °C

ಪರೀಕ್ಷೆ: ಉತ್ತರ ಬರೆದ ಶಿಕ್ಷಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಇಲ್ಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಹಲಕಟ್ಟ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಅಬ್ದುಲ್ ಸಲೀಮ ವಿದ್ಯಾರ್ಥಿಗಳ ಉತ್ತರಪತ್ರಿಕೆಯಲ್ಲಿ ಉತ್ತರ ಬರೆದ ಘಟನೆ ನಡೆದಿದೆ.ಇಲ್ಲಿಯ ಸೆಂಟ್ ಅಂಬ್ರೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 15 ಶಾಲೆಗಳ ವಿದ್ಯಾರ್ಥಿಗಳು ಗಣಿತ ವಿಷಯದ ಪರೀಕ್ಷೆ ಬರೆಯುತ್ತಿದ್ದರು. ಒಂದನೇ ಪರೀಕ್ಷಾ ಕೇಂದ್ರದಲ್ಲಿ ಈ ಅಕ್ರಮ ನಕಲು ದಂಧೆ ನಡೆದಿದೆ. ಇದಕ್ಕೆ ಮುಖ್ಯ ಅಧೀಕ್ಷಕ ದರ್ಬು ರಾಠೋಡ್ ಅವರ ಸಹಮತವೂ ಇತ್ತು ಎನ್ನಲಾಗಿದೆ.ಕೇತ್ರ ಶಿಕ್ಷಣಾಧಿಕಾರಿ ಚವ್ಹಾಣ ಶೆಟ್ಟಿ ನೇತೃತ್ವದ ಜಾಗೃತದಳದ ಅಧಿಕಾರಿಗಳು ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟನೆ ಕೇಳಿದಾಗ, ‘ಸಣ್ಣಪುಟ್ಟ ವಿಷಯಗಳು ಹೋಗಲಿ ಬಿಡಿ’ ಎಂಬ ಹಾರಿಕೆಯ ಉತ್ತರ ಜಾಗೃತದಳದಿಂದ ದೊರಕಿತು.ಎರಡನೇ ಕೇಂದ್ರದಲ್ಲಿ ಮೂವರು ವಿದ್ಯಾರ್ಥಿಗಳು ನಕಲು ಮಾಡುತ್ತಿರುವ ಸಮಯದಲ್ಲಿ ಚಿತ್ತಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್.ಎಸ್. ರತ್ನಾಕರ್ ಹಿಡಿದರು. ನಂತರ ಕೇಂದ್ರದ ಮುಖ್ಯ ಅಧೀಕ್ಷಕಿ ಇಂಗಳಗಿ ಪೌಢಶಾಲೆಯ ಮುಖ್ಯೋಪಾಧ್ಯಾಯಿನಿ ನೇತ್ರಾವತಿಯವರ ನಿರ್ಲಕ್ಷವೇ ಕಾರಣ ಎಂದು ತಾಕೀತು ಮಾಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಕಲು ತಡೆಗಟ್ಟಲು ಚಿತ್ತಾಪುರ ತಾಲ್ಲೂಕಿನಲ್ಲಿ 17 ಜಾಗೃತದಳ ತಂಡಗಳನ್ನು ರಚಿಸಲಾಗಿದೆ. ಆದರೂ ಅಧಿಕಾರಿಗಳಿಂದಲೇ ಇಂಥ ಕೃತ್ಯ ನಡೆದಿದೆ ಎಂದು ಶಿಕ್ಷಣ ಪ್ರೇಮಿಗಳು ದೂರಿದ್ದಾರೆ.ಆರೋಪ: ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿ ಹಣ ಸಂಗ್ರಹಿಸಲಾಗಿದೆ. ಪ್ರೌಢ ಶಾಲೆಯ ಶಿಕ್ಷಕರು ಕೇಂದ್ರದಲ್ಲಿ ಇರಾಬಾರದು ಎಂಬ ನಿಯಮ ಇದ್ದರೂ ಕೆಲ ಖಾಸಗಿ ಶಾಲೆಯ ಶಿಕ್ಷಕರು ಕೇಂದ್ರದಲ್ಲಿ ನುಗ್ಗಿ ತಮ್ಮ ವಿದ್ಯಾರ್ಥಿಗಳಿಗೆ ನಕಲು ಪೂರೈಕೆಗೆ ಸಹಕರಿಸುತ್ತಿದ್ದಾರೆ ಎಂದು ವಾಡಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಪಂಚಾಳ ಆರೋಪಿಸಿದ್ದಾರೆ.ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 36ಕೋಣೆಗಳು, 40 ಶಿಕ್ಷರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.