ಎಂಜಿನಿಯರಿಂಗ್: 2,859 ಸೀಟುಗಳು ಲಭ್ಯ

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿರುವುದರಿಂದ ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು ಹಾಗೂ ಪೋಷಕರು ನಿರಾಳವಾಗಿದ್ದಾರೆ.
ಹೈ–ಕ ಭಾಗದ 19 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ 4,084 ಸರ್ಕಾರಿ ಸೀಟುಗಳಲ್ಲಿ ಶೇ 70ರಷ್ಟು ಮೀಸಲಾತಿಯಂತೆ 2,859 ಸೀಟುಗಳು ಹೈ–ಕ ಭಾಗದ ವಿದ್ಯಾರ್ಥಿ ಗಳಿಗೆ ಲಭಿಸಲಿವೆ. ರಾಯಚೂರು ಹಾಗೂ ಹೂವಿನಹಡಗಲಿ (ಬಳ್ಳಾರಿ)ಯಲ್ಲಿ ಎರಡು ಸರ್ಕಾರಿ ಕಾಲೇಜುಗಳಿವೆ. ಈ ಎರಡೂ ಕಾಲೇಜುಗಳಿಂದ ತಲಾ 252 ಸೀಟುಗಳು ಲಭ್ಯ ಇವೆ. ಇನ್ನುಳಿದ 17 ಖಾಸಗಿ ಕಾಲೇಜುಗಳಾಗಿವೆ.
ಗುಲ್ಬರ್ಗದ ಕೆಬಿಎನ್ ಎಂಜಿನಿ ಯರಿಂಗ್ ಕಾಲೇಜು, ಕೆಸಿಟಿ ಎಂಜಿನಿ ಯರಿಂಗ್ ಕಾಲೇಜು ಹಾಗೂ ಬೀದರ್ನಲ್ಲಿರುವ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜು (ಧಾರ್ಮಿಕ ಅಲ್ಪಸಂಖ್ಯಾತ ಕೋಟಾ) ಗಳಲ್ಲಿ 589 ಸರ್ಕಾರಿ ಸೀಟುಗಳು ಲಭ್ಯ ಇವೆ. ಆದರೆ, ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ 371 (ಜೆ) ಕಲಂ ಅಡಿ ಶೇ70 ರಷ್ಟು ಸೀಟುಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ನೀಡಬೇಕೆ, ಬೇಡವೆ ಎನ್ನುವ ಬಗ್ಗೆ ಇನ್ನಷ್ಟೇ ತೀರ್ಮಾನವಾಗ ಬೇಕಾಗಿದೆ.
ಶರಣಬಸವೇಶ್ವರ ವಿದ್ಯಾಸಂಸ್ಥೆಯ ಗೋದುತಾಯಿ ಎಂಜಿನಿಯರಿಂಗ್ ಕಾಲೇಜು ಈ ಭಾಗದ ಏಕೈಕ ಮಹಿಳಾ ಎಂಜಿನಿಯರಿಂಗ್ ಕಾಲೇಜಾಗಿದ್ದು, 120 ಸೀಟುಗಳು ಲಭ್ಯ ಇವೆ. ಇದರಲ್ಲಿ 84 ಸೀಟುಗಳು ಹೈ–ಕ ವಿದ್ಯಾರ್ಥಿ ಗಳಿಗೆ ಲಭಿಸಲಿವೆ. ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ (ಸ್ವಾಯತ್ತ ಕಾಲೇಜು) ಕಾಲೇಜಿನಲ್ಲಿ 461 ಸೀಟುಗಳು ಲಭ್ಯ ಇವೆ.
ಲಭ್ಯವಿರುವ ಸೀಟುಗಳ ವಿವರ: ಕೊಪ್ಪಳ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಇಲ್ಲ. ಗಂಗಾವತಿಯಲ್ಲಿ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಯಾದರೂ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಯಾದ ಗಿರಿಯಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜು ಇದೆ.
ಬೀದರ್: ಜಿಎನ್ಡಿ ಎಂಜಿನಿಯರಿಂಗ್ ಕಾಲೇಜು (284), ರೂರಲ್ ಎಂಜಿನಿ ಯರಿಂಗ್ ಕಾಲೇಜು, ಭಾಲ್ಕಿ (310), ಬಸವಕಲ್ಯಾಣ ಕಾಲೇಜು, ಬಸವಕಲ್ಯಾಣ (210), ಲಿಂಗರಾಜಪ್ಪ ಕಾಲೇಜು (150).
ಗುಲ್ಬರ್ಗ: ಪಿಡಿಎ ಕಾಲೇಜು–ಅನುದಾನಿತ (461), ಪಿಡಿಎ ಕಾಲೇಜು–ಅನುದಾನರಹಿತ (30), ಕೆಬಿಎನ್ ಕಾಲೇಜು (283), ಕೆಸಿಟಿ ಕಾಲೇಜು (102), ಅಪ್ಪ ಎಂಜಿನಿಯ ರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆ (210), ಗೋದುತಾಯಿ ಮಹಿಳಾ ಕಾಲೇಜು (120), ಶೆಟ್ಟಿ ಎಂಜಿನಿ ಯರಿಂಗ್ ಶಿಕ್ಷಣ ಸಂಸ್ಥೆ (150).
ಯಾದಗಿರಿ: ವೀರಪ್ಪ ನಿಷ್ಠಿ ಕಾಲೇಜು, ಹಸನಾಪುರ, ಸುರಪುರ (120).
ರಾಯಚೂರು: ಎಸ್ಎಲ್ಎನ್ ಕಾಲೇಜು (150), ಸರ್ಕಾರಿ ಕಾಲೇಜು (252), ನವೋ ದಯ ಎಂಜಿನಿಯ ರಿಂಗ್ ಕಾಲೇಜು (180).
ಬಳ್ಳಾರಿ: ರಾವ್ ಬಹದ್ದೂರ್ ಮಹಾಬಳೇಶ್ವರ ಕಾಲೇಜು (340), ಬಳ್ಳಾರಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ (270), ಪ್ರೌಢದೇವರಾಯ ತಾಂತ್ರಿಕ ಶಿಕ್ಷಣ ಸಂಸ್ಥೆ, ಹೊಸಪೇಟೆ (210), ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜು, ಹೂವಿನಹಡಗಲಿ (252).
ಸಿಇಟಿ ಪ್ರವೇಶ ಪರೀಕ್ಷೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 2014ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೊಪಥಿ, ಯುನಾನಿ, ನ್ಯಾಚುರೋಪಥಿ ಮತ್ತು ಯೋಗ, ಎಂಜಿನಿಯರಿಂಗ್, ಕೃಷಿ ವಿಜ್ಞಾನ, ರೇಷ್ಮೆ, ಅರಣ್ಯಶಾಸ್ತ್ರ, ತೋಟಗಾರಿಕೆ, ಬಿ–ಫಾರ್ಮ, ಡಿ–ಫಾರ್ಮ ಕೋರ್ಸು ಗಳಿಗೆ 2014–15ನೇ ಸಾಲಿನ ಪ್ರವೇಶಕ್ಕೆ ವೇಳಾಪಟ್ಟಿ ಸಿದ್ಧಪಡಿಸಿದೆ.
2014ರ ಸಿಇಟಿ ವೇಳಾಪಟ್ಟಿ
ಮೇ 1 ಬೆಳಿಗ್ಗೆ 10.30 ರಿಂದ 11.50 ಜೀವಶಾಸ್ತ್ರ
ಮಧ್ಯಾಹ್ನ 2.30 ರಿಂದ 3.50 ಗಣಿತಶಾಸ್ತ್ರ
ಮೇ 2 ಬೆಳಿಗ್ಗೆ 10.30 ರಿಂದ 11.50 ಭೌತಶಾಸ್ತ್ರ
ಮಧ್ಯಾಹ್ನ 2.30 ರಿಂದ 3.50 ರಸಾಯನಶಾಸ್ತ್ರ
ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳು
ಮೇ 3 ಬೆಳಿಗ್ಗೆ 11.30 ರಿಂದ 12.30 ಕನ್ನಡ ಭಾಷೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.