ಶೂಟಿಂಗ್: ಮನು–ಸೌರಭ್‌ಗೆ ಚಿನ್ನ

7

ಶೂಟಿಂಗ್: ಮನು–ಸೌರಭ್‌ಗೆ ಚಿನ್ನ

Published:
Updated:

ಕುವೈತ್: ಭಾರತದ ಶೂಟರ್‌ಗಳಾದ ಮನು ಭಾಕರ್ ಮತ್ತು ಸೌರಭ್ ಚೌಧರಿ ಅವರು ಇಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌ನ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

 ಸ್ಪರ್ಧೆಯ ಕೊನೆಯ ದಿನವಾದ ಶುಕ್ರವಾರ ನಡೆದ ಫೈನಲ್‌ನಲ್ಲಿ ಮನು ಮತ್ತು ಸೌರಭ್ ಜೋಡಿಯು ಚೀನಾದ ವಾಂಗ್ ಕ್ಸಿಯಾಯು ಮತ್ತು ಹಾಂಗ್ ಶಾಕಿ ಅವರಿಂದ ತೀವ್ರ ಸ್ಪರ್ಧೆ ಎದುರಿಸಿದರು.

ಮನು ಮತ್ತು ಸೌರಭ್ ಅವರು 485.4 ಪಾಯಿಂಟ್ಸ್‌ ಗಳಿಸಿದರು. ಚೀನಾದ ಜೋಡಿಯು 477.9 ಪಾಯಿಂಟ್ಸ್‌ ಗಳಿಸಿದರು .

ಮೂರನೇ ಸ್ಥಾನವನ್ನೂ ಚೀನಾದ ಜೋಡಿಯು ಗೆದ್ದಿತು. ಭಾರತದ ಜೋಡಿ ಅಭಿದ್ನಾ ಪಾಟೀಲ್ ಮತ್ತು ಅನ್ಮೋಲ್ ಜೈನ್ ಅವರು ನಾಲ್ಕನೇ ಸ್ಥಾನ ಪಡೆದರು.

ಉತ್ತರಪ್ರದೇಶದ ಸೌರಭ್ ಅವರು ಈ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಮೂರನೇ ಚಿನ್ನ ಇದಾಗಿದೆ. ಅವರು ವೈಯಕ್ತಿಕ ವಿಭಾಗದ 10 ಮೀಟರ್ಸ್ ಏರ್‌ ಪಿಸ್ತೂಲ್ ಮತ್ತು ತಂಡ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದರು. 

ಬಾಲಕಿಯರ ತಂಡವ ವಿಭಾಗದಲ್ಲಿ ಮನು ಬೆಳ್ಳಿ ಪದಕ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !