ತೇಗದ ಮರದ ಹೆಸರು ಕೇಳದವರು ವಿರಳ. ಅದನ್ನು ಬಳಸದವರೂ ವಿರಳ. ಹೊಸ ಮನೆಗೆ ಕಡೇ ಪಕ್ಷ ಮುಂಬಾಗಿಲನ್ನಾದರೂ ತೇಗದಿಂದ ಮಾಡಿಸಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ತೇಗದ ಕಿಟಕಿ, ಬಾಗಿಲುಗಳು, ಪೀಠೋಪಕರಣಗಳು ಅತ್ಯಂತ ಮನ ಮೋಹಕ. ಆದ್ದರಿಂದಲೇ ಅವು ಹೆಚ್ಚು ಜನರಿಗೆ ಇಷ್ಟ. ರಾಜ್ಯದ ದಾಂಡೇಲಿ, ಯಲ್ಲಾಪುರ, ಕಾಕನಕೋಟೆ, ಹುಣಸೂರು ಅರಣ್ಯ ಪ್ರದೇಶಗಳು ಬಹಳ ಹಿಂದಿನಿಂದಲೂ ತೇಗದ ಮರಗಳ ತೋಪುಗಳಿಗೆ ಹೆಸರುವಾಸಿ.

ಸಾಗುವಾನಿ ಎಂಬುದು ತೇಗಕ್ಕೆ ಇರುವ ಮತ್ತೊಂದು ಹೆಸರು. ವೈಜ್ಞಾನಿಕ ಹೆಸರು ‘ಟೆಕ್ಟೋನ ಗ್ರಾಂಡಿಸ್’. ಭಾರತ, ಬರ್ಮಾ, ಮಲೇಶಿಯಾ, ಇಂಡೋನೇಶಿಯಾ ದೇಶಗಳು ತೇಗದ ತವರು. ಇವುಗಳ ಜೊತೆಗೆ ಆಫ್ರಿಕಾ ಮತ್ತು ಕೆರಿಬಿಯನ್ ದೇಶಗಳು ದೊಡ್ಡ ಪ್ರಮಾಣದಲ್ಲಿ ತೇಗದ ಬೆಳೆದು ಹೊರ ದೇಶಗಳಿಗೆ ರಫ್ತು ಮಾಡುತ್ತವೆ.

ತೇಗವನ್ನು ‘ಮರಗಳ ರಾಜ’ ಎಂದೂ ಕರೆಯುತ್ತಾರೆ. ತೇಗದ ನೂರಾರು ವರ್ಷ ಬಾಳಿಕೆ ಬರುತ್ತದೆ. ಅದಕ್ಕೆ ಗೆದ್ದಲು ಹಿಡಿಯುವುದಿಲ್ಲ. ತೇಗದ ಮರ ಆಕರ್ಷಕ ಹಳದಿ ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ಮರದ ಮೇಲ್ಮೈಎಳೆಗಳು, ಪಟ್ಟೆಗಳು ಮತ್ತು ಉಂಗುರಗಳಿಂದ ಕೂಡಿವೆ. ಮರದ ಕೆತ್ತನೆಯೂ ಸುಲಭ. ಹೆಚ್ಚು ಗಡುಸಲ್ಲ. ಉಳಿದ ಯಾವುದೇ ಮರಕ್ಕಿಂತ ತೇಗ ಭಿನ್ನವಾಗಿದೆ. ತೇಗದ ಉಪಯೋಗಗಳು ಹಲವಾರು. ಗೃಹ ನಿರ್ಮಾಣಕ್ಕೆ, ಪೀಠೋಪಕರಣಗಳಿಗೆ, ಹಡಗು ನಿರ್ಮಾಣಕ್ಕೆ ಮನೆಯ ಒಳಾಂಗಣ ಅಲಂಕಾರಕ್ಕೆ, ರೈಲ್ವೆ ಕೋಚುಗಳ ನಿರ್ಮಾಣಕ್ಕೆ ತೇಗದ ಮರ ಬಳಕೆಯಾಗುತ್ತಿದ್ದು ಜಗತ್ತಿನಾದ್ಯಂತ ಬಹುಬೇಡಿಕೆ ಇದೆ.

ಈ ಬೇಡಿಕೆಯಿಂದಾಗಿಯೇ ತೇಗ ಬಲು ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಒಂದು ಘನ ಅಡಿ ತೇಗದ ಮರಕ್ಕೆ ಎರಡೂವರೆಯಿಂದ ಐದು ಸಾವಿರ ರೂ ಬೆಲೆ ಇದೆ. ಭಾರತವೂ ಹೊರ ದೇಶಗಳಿಂದ ತೇಗ ಆಮದು ಮಾಡಿಕೊಳ್ಳುತ್ತಿದೆ. ಈಗ ತೇಗಕ್ಕೆ ಒಳ್ಳೆಯ ಬೆಲೆ ಮತ್ತು ಬೇಡಿಕೆ ಇರುವುದರಿಂದ ತೇಗ ಬೆಳೆಯಲು ಸಕಾಲ. ಬೆಳೆಯುವುದು ಲಾಭದಾಯಕ.

ನಮ್ಮ ರಾಜ್ಯದ ಅನೇಕ ರೈತರು ವ್ಯಾಪಕವಾಗಿ ತೇಗದ ಮರ ಬೆಳೆಯುತ್ತಿದ್ದಾರೆ. ಅನೇಕರು ಲಾಭ ಗಳಿಸುತ್ತಿದ್ದಾರೆ. ಪಾಂಡವಪುರ ತಾಲ್ಲೂಕಿನ ರೈತರೊಬ್ಬರು ಹೊಲದ ಬದುಗಳ ಮೇಲೆ ಬೆಳೆದ 20 ವರ್ಷ ವಯಸ್ಸಿನ 14 ಮರಗಳಿಂದ 4 ಲಕ್ಷ ರೂ ಆದಾಯ ಪಡೆದಿದ್ದಾರೆ. ಕಡಿಮೆ ಖರ್ಚು, ಶ್ರಮದಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಹೀಗಾಗಿ ತೇಗದ ಮರ ರೈತರ ಪಾಲಿಗೆ ವರಎನ್ನಬಹುದು.

ಬೇಸಾಯ ಕ್ರಮ: ಎಲ್ಲ ಬಗೆಯ ಮಣ್ಣಿನಲ್ಲೂ ತೇಗ ಬೆಳೆಯುತ್ತದೆ. ನೀರು ಸರಾಗವಾಗಿ ಹರಿದು ಹೋಗುವಂತಹ ಮತ್ತು ಚೆನ್ನಾಗಿ ಬೆಳಕು ಬೀಳುವ ಭೂಮಿ ಅವಶ್ಯ. ನೀರಾವರಿಯಲ್ಲಿ ಬೆಳವಣಿಗೆಯ ವೇಗ ಹೆಚ್ಚು. ಹೊಲ, ತೋಟಗಳ ಬದುಗಳಲ್ಲಿ, ಹಿತ್ತಿಲುಗಳಲ್ಲಿ, ಬೀಳು ಭೂಮಿಯಲ್ಲಿ ಹೀಗೆ ಎಲ್ಲೆಡೆ ತೇಗ ಬೆಳೆಯಬಹುದು. ಪೂರ್ತಿ ನೆಡು ತೋಪಿನಲ್ಲಿ ಬೆಳೆಯಬಹುದು. ಕೃಷಿ ಅರಣ್ಯಕ್ಕೆ ಇದು ಅತ್ಯುತ್ತಮ ಮಾದರಿ.

ಮೇ-ಜೂನ್ ತಿಂಗಳು ನಾಟಿಗೆ ಸಕಾಲ. 2ಮೀ x 2 ಮೀ ಅಂತರದಲ್ಲಿ ಒಂದೂವರೆ ಅಡಿ ಉದ್ದ, ಅಗಲ, ಆಳದ ಗುಂಡಿಗಳನ್ನು ತೆಗೆಯಬೇಕು. ಪಾಲಿಥೀನ್ ಚೀಲಗಳಲ್ಲಿ ಬೆಳೆದ ಸಸಿಗಳನ್ನು ನಾಟಿಗೆ ಬಳಸಬೇಕು. ಆರೋಗ್ಯವಂತ ಸಸಿಗಳನ್ನು ನಾಟಿಗೆ ಆರಿಸಿಕೊಳ್ಳಬೇಕು. ವರ್ಷದಲ್ಲಿ ಎರಡು ಸಲ ಒಂದು ಸಸಿಗೆ 40 ಗ್ರಾಂ ಡಿ.ಎ.ಪಿ ಗೊಬ್ಬರವನ್ನು ಸುಮಾರು ಐದು ವರ್ಷಗಳವರೆಗೆ ಕೊಡಬೇಕು. ಗಿಡಗಳ ಸುತ್ತ ಆಗಾಗ ಕಳೆ ತೆಗೆಯಬೇಕು. ಒಂದು ವರ್ಷದ ನಂತರ ನೆಲ ಮಟ್ಟದಿಂದ ಮೇಲಕ್ಕೆ ಶೇ 40 ರಷ್ಟು ಎತ್ತರದವರೆಗೆ ರೆಕ್ಕೆಗಳನ್ನು ಸವರಿ ತೆಗೆಯಬೇಕು.

7 ಮತ್ತು 13 ನೇ ವರ್ಷಗಳಲ್ಲಿ ದಪ್ಪವಾದ, ನೇರವಾದ ಮರಗಳನ್ನು ಉಳಿಸಿಕೊಂಡು ಡೊಂಕಾದ ಮತ್ತು ಕೃಶವಾದ ಮರಗಳನ್ನು ತೆಗೆದು ಹಾಕಬೇಕು. 13 ನೇ ವರ್ಷಕ್ಕೆ ಶೇ. 30ರಷ್ಟು ಮರಗಳನ್ನು ಮಾತ್ರ ಉಳಿಸಿಕೊಳ್ಳುವುದು ಸೂಕ್ತ. 20 ವರ್ಷಗಳಾವ ಹೊತ್ತಿಗೆ ಮರಗಳು ಬಲಿತು ಟಿಂಬರ್ ಗುಣ ಪಡೆಯುತ್ತವೆ. ಆ ನಂತರ ಅವನ್ನು ಕತ್ತರಿಸಿ ಮಾರಾಟ ಮಾಡಬಹುದು. ಒಂದು ಎಕರೆಗೆ ಕನಿಷ್ಟ 25 ಲಕ್ಷ ರೂ ಆದಾಯ ಸಿಗುತ್ತದೆ.

ತೇಗಕ್ಕೆ ಇರುವ ಬೇಡಿಕೆಯನ್ನು ಮನಗಂಡು ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಣೆ ಮಾಡಲು ಕ್ರಮಗಳನ್ನು ಕೈಗೊಂಡಿದೆ. ಎನ್.ಆರ್.ಇ.ಜಿ.ಎಸ್. ಯೋಜನೆಯಡಿ ಇಲಾಖೆಯೇ ರೈತರ ಜಮೀನಿನಲ್ಲಿ ತೇಗ ನಾಟಿ ಮಾಡಿಕೊಡುತ್ತದೆ. ಕೆ.ಆರ್.ಪೇಟೆ ತಾಲ್ಲೂಕೊಂದರಲ್ಲೇ ಈ ವರ್ಷ 7 ಲಕ್ಷ ತೇಗದ ಸಸಿಗಳನ್ನು ನಾಟಿ ಮಾಡಿ ಕೊಡಲಾಗಿದೆ. ತೇಗದ ಸಸಿ ಬೇಕಾದವರು ಆಯಾ ತಾಲ್ಲೂಕಿನ ಸಾಮಾಜಿಕ ವಲಯದ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.

ಬಡ ರೈತರು ತೇಗ ಬೆಳೆದು ಆರ್ಥಿಕವಾಗಿ ಸಬಲರಾಗಬಹುದು. ಇದರಿಂದ ಅರಣ್ಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಪರಿಸರ ಸಂರಕ್ಷಣೆಯಾಗುತ್ತದೆ.

( ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೈಸೂರು ವಿಭಾಗ, ಮೈಸೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.