ಗುರುವಾರ , ಏಪ್ರಿಲ್ 2, 2020
19 °C

15 ನಿಮಿಷದಲ್ಲೇ 1 ಎಕರೆಗೆ ಔಷಧಿ ಸಿಂಪಡಿಸುವ ಡ್ರೋನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರೀಕರಣಕ್ಕಾಗಿ ಡ್ರೋನ್‌ಗಳನ್ನು ಬಳಸುವುದು ನಮಗೆಲ್ಲ ತಿಳಿದಿರುವ ವಿಚಾರ. ಈಗ ಅವುಗಳನ್ನು ಕೃಷಿ ಚಟುವಟಿಕೆಗಳಿಗೂ ಬಳಸಬಹುದು ಎನ್ನುತ್ತಿದೆ ಕೃಷಿ ಮೇಳದಲ್ಲಿನ ವರ್ಷಾ ಅಗ್ರಿ ಬಿಸಿನೆಸ್‌ ಸೆಂಟರ್‌ನ ಮಳಿಗೆ.

ಹೌದು, ಔಷಧ ಸಿಂಪಡಿಸುವ ಡ್ರೋನ್‌ ಕೃಷಿ ಮೇಳದಲ್ಲಿ ರೈತರ ಗಮನಸೆಳೆಯುತ್ತಿದೆ. ಕೃಷಿ ಕಾರ್ಮಿಕರ ಕೊರತೆಯಿರುವುದರಿಂದ ಬಹುಪಯೋಗಿ ಯಂತ್ರಗಳ ಬಗ್ಗೆ ರೈತರ ಆಲೋಚಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿರು ಈ ಡ್ರೋನ್‌, ಕೇವಲ 15 ನಿಮಿಷದಲ್ಲಿ ಒಂದು ಎಕರೆಗೆ ಔಷಧವನ್ನು ಸಿಂಪಡಿಸುತ್ತದೆ.

ವರ್ಷಾ ಅಗ್ರಿ ಬಿಸಿನೆಸ್‌ ಸೆಂಟರ್‌ ಫಾರ್ ಡೆವಲಪಮೆಂಟ್‌ ಕಂಪನಿ ಅಭಿವೃದ್ಧಿ ಪಡಿಸಿರುವ ಈ ಡ್ರೋನ್‌ನ ಬೆಲೆ ಬರೋಬ್ಬರಿ ₹8 ಲಕ್ಷ. ಹೀಗೆಂದು ಕೇಳಿದ ಕೂಡಲೇ ಹುಬ್ಬೇರಿಸಿ ಮುಂದಕ್ಕೆ ಹೆಜ್ಜೆ ಇಡುತ್ತಿದ್ದ ರೈತರನ್ನು ಬಾಡಿಗೆಗೂ ಈ ಲಭ್ಯವಿದೆ ಎನ್ನುವ ವಿಚಾರ ಹಿಡಿದು ನಿಲ್ಲಿಸಿತು. 

ಹತ್ತು ಲೀಟರ್‌ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಈ ಡ್ರೋನ್‌ ಒಂದು ಕಿ.ಮೀ ವ್ಯಾಪ್ತಿಯ ಹಾಗೂ 100 ಮೀಟರ್‌ ಎತ್ತರದವರೆಗೂ ಹಾರಾಡುತ್ತದೆ. ಒಮ್ಮೆ ಚಾರ್ಜ್‌ ಮಾಡಿದರೆ 15 ನಿಮಿಷ ಹಾರಾಡಿಸಬಹುದಾಗಿದ್ದು, ಈ ಸಮಯದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಿಸಬಹುದು. 

‘ರಾಜ್ಯ ಯಾವುದೇ ಭಾಗದಲ್ಲಿಯೂ ಈ ಡ್ರೋನ್‌ ಬಾಡಿಗೆಗೆ ಲಭ್ಯವಿದ್ದು, ಒಂದು ಎಕರೆಗೆ ₹500 ದರವನ್ನು ಕಂಪನಿ ನಿಗದಿಪಡಿಸಿದ್ದೇವೆ. ಇದನ್ನು ಖರೀದಿಸಿದರೆ, ಅದರ ಹಾರಾಟಕ್ಕೆ ಗ್ರಾಹಕರೇ ಅನುಮತಿಯನ್ನು ಪಡೆದುಕೊಳ್ಳಬೇಕು’ ಎಂದು ಕಂಪನಿಯ ಶಿವಾನಂದ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)