ಮಾನವ ಪ್ರತಿನಿತ್ಯ ಉಪಯೋಗಿಸುವ ವಸ್ತುಗಳಲ್ಲಿನ ವ್ಯರ್ಥ ತ್ಯಾಜ್ಯದ ಜತೆಗೆ ಅವನು ನಿತ್ಯ ಹೊರ ಹಾಕುವ ಮಲಕ್ಕೂ ಮೌಲ್ಯ ಕಟ್ಟುವ ಸಕಾಲ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಮಲದ ರಾಡಿಯ ಸುರಕ್ಷಿತ ಸಂರಕ್ಷಣೆ ಮತ್ತು ವಿಲೇವಾರಿ ಘಟಕ ದೇಶದಲ್ಲಿ ಮೊದಲ ಬಾರಿಗೆ ಅರಂಭಗೊಂಡಿದೆ.

ಬಹುತೇಕ ಗ್ರಾಮಿಣ ಪ್ರದೇಶದಲ್ಲಿ ಶೇಕಡಾವಾರು ಕುಟುಂಬಗಳಲ್ಲಿ ಶೌಚಾಲಯಗಳಿಲ್ಲ, ಅದು ಇರುವ ಕುಟುಂಬಗಳಿಗೆ ಮಲದ ರಾಡಿ ಹೊರ ತೆಗೆಸುವುದೇ ಒಂದು ಸವಾಲು. ಇದಕ್ಕೆ ಕೆಲ ನಗರ ಪ್ರದೇಶಗಳು ಹೊರತಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಲದ ರಾಡಿ ಸಂಸ್ಕರಣ ಘಟಕ (ಫೀಕಲ್ ಸ್ಲಜ್ ಟ್ರೀಟ್ಮೆಂಟ್ ಪ್ಲಾಂಟ್– ಎಫ್.ಎಸ್.ಟಿ.ಪಿ) ವಿಶಿಷ್ಟ ಘಟಕವನ್ನು ಅಳವಡಿಸಿ ಮಾನವನ ಯಾವುದೇ ನೇರ ಸಂಪರ್ಕವಿಲ್ಲದೆ ಮಲಮೂತ್ರದ ರಾಡಿಯನ್ನು ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ಮಾರಾಟ ಮಾಡುವ ಪ್ರಯತ್ನದ ಮೊದಲ ಹೆಜ್ಜೆ ಇದಾಗಿದೆ.

ತಾಜ್ಯ ಸಂಸ್ಕರಣ ಘಟಕಗಳಲ್ಲಿನ ದುರ್ವಾಸನೆ ಮತ್ತು ಅಸಹ್ಯದಂತಹ ಉಪದ್ರವಕಾರಿ ಅಂಶಗಳಿಗೆ ಅವಕಾಶವಿಲ್ಲ. ಮಲದ ರಾಡಿಯನ್ನು ಸ್ವಾಭಾವಿಕವಾಗಿ ವೆಚ್ಚ ಕಡಿಮೆ ಮತ್ತು ಪರಿಣಾಮಕಾರಿಯಾಗಿಯೂ ಇಂಧನ ಕ್ಷಮತೆ ರೀತಿಯಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ಕನಿಷ್ಠ ಕಾರ್ಯಾಚರಣೆ ಮತ್ತು ನಿರ್ವಹಣೆಯ ಅಗತ್ಯ ಹೊರತು ಪಡಿಸಿದರೆ ನೈರ್ಮಲ್ಯ ಲೋಪವನ್ನು ಮುಚ್ಚುವತ್ತ ಇದೊಂದು ಮಹತ್ವದ ಮೈಲಿಗಲ್ಲು ಎಂಬುದು ಪರಿಸರ ತಜ್ಞರ ಅಭಿಪ್ರಾಯ .

ದೇಶದ ಅನೇಕ ನಗರ ಮತ್ತು ಪಟ್ಟಣಗಳಂತೆ ದೇವನಹಳ್ಳಿ ಪುರಸಭೆ ನೆಲದಡಿ ಒಳ ಚರಂಡಿ ವ್ಯವಸ್ಥೆ ಹೊಂದಿಲ್ಲ. ಬಹುತೇಕ ಕುಟುಂಬದಲ್ಲಿನ ಶೌಚಾಲಯ ಘಟಕಗಳು ತ್ಯಾಜ್ಯ ವಿಲೇವಾರಿಗಾಗಿ ಸೆಪ್ಟಿಕ್ ಟ್ಯಾಂಕ್ ಮತ್ತು ಗುಂಡಿ ಶೌಚಾಲಯದ ಸ್ಥಳದಲ್ಲಿನ ನೈರ್ಮಲ್ಯ ಮೂಲ ಸೌಕರ್ಯದ (ಆನ್ ಸೈಟ್ ಸ್ಯಾನಿಟೇಷನ್ ಇನ್ಫ್ರಾಸ್ಟ್ರಕ್ಚರ್) ಮೇಲೆ ಅವಲಂಬಿತವಾಗಿದೆ. ಸಕಾಲದಲ್ಲಿ ತೆರವುಗೊಳಿಸುವುದು ಅನಿವಾರ್ಯವಾದರೂ ಪ್ರಸ್ತುತ ಅನೇಕ ಕಡೆಗಳಲ್ಲಿ ಇಂತಹ ಸಂಸ್ಕರಣ ಘಟಕ ಸಾಧ್ಯವಾಗಿಲ್ಲ. ಅಸುರಕ್ಷಿತ ಬಹಿರ್ದೆಸೆಗೆ ಎಡೆ ಮಾಡಿಕೊಟ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಮಾನವನ ಆರೋಗ್ಯಕ್ಕೆ ಗಂಡಾಂತರ ಮಾರ್ಗವಾಗಿದೆ. ಮಲದ ರಾಡಿ ವಿಲೇವಾರಿಗೆ ನಿಯೋಜಿತ ಸ್ಥಳಗಳ ಕೊರತೆ ಜತೆಗೆ ನೆಲ ಮತ್ತು ನೀರಿನಲ್ಲಿ ಅಸುರಕ್ಷಿತ ಸುರಿಯುವಿಕೆಗೆ ಕಾರಣವಾಗುತ್ತಿದೆ. ಆದರೆ ಈ ಘಟಕದಿಂದ ಸುರಕ್ಷಿತ ಪೂರೈಕೆ ಬಿಂದುವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತ್ಯಾಜ್ಯಗಳನ್ನು ಖಾಲಿ ಮಾಡುವ ವ್ಯವಸ್ಥೆಹಾಗೂ ಅವುಗಳ ನಿರ್ವಹಣೆಯು ಇಂದು ಸೂಕ್ತ ರೀತಿಯಲ್ಲಿ ಕ್ರಮಬದ್ಧವಾಗಿಲ್ಲ. ಹನಿಸಕರ್ಸ್ಸ್ ಎಂದು ಕರೆಯಲಾಗುವ ನಿರ್ವಾತ ಹೀರಿಕೊಳ್ಳವ ವಾಹನಗಳು ಅಸುರಕ್ಷಿತ ಮತ್ತು ಅನೌಪಚಾರಿಕ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉತ್ತಮ ರೀತಿ ವಿನ್ಯಾಸಗೊಳಿಸಿದ ಮಲದ ರಾಡಿ ನಿರ್ವಹಣೆ ಮತ್ತು ವ್ಯವಸ್ಥೆ ನೀತಿ ಅಥವಾ ನಿಯಂತ್ರಣ ಸಮರ್ಪಕವಾಗಿ ನಿಭಾಯಿಸುತ್ತದೆ.

ವಿಶೇಷವೆಂದರೆ ಇಡೀ ವ್ಯವಸ್ಥೆ ಸುಸ್ಥಿರತೆಗೆ ವಾಣಿಜ್ಯ ಮಾದರಿಗಳನ್ನು ಅಭಿವೃದ್ಧಿಗೊಳಿಸಿದೆ. ದೇಶದಲ್ಲಿ ಶೇಕಡ 70 ರಷ್ಟು ಮಂದಿ ತಮ್ಮ ತ್ಯಾಜ್ಯಗಳನ್ನು ಹೊರಹಾಕಲು ಸೆಪ್ಟಿಕ್ ಟ್ಯಾಂಕ್ ಮತ್ತು ಗುಂಡಿ ಶೌಚಾಲಯ ಬಳಸುತ್ತಿದ್ದಾರೆ. ಹಲವೆಡೆ ಮಲದ ರಾಡಿಯನ್ನು ಕೊಳವೆ ಮೂಲಕದ ಬದಲು ಹನಿ ಸಕರ್ಸ್ಸ್ನಿಂದ ಚಕ್ರಗಳ ಮೇಲೆ ಸಾಗಿಸಲಾಗುತ್ತದೆ. ಆದರೆ ಈ ಘಟಕ ಮುಂದಿನ ದಿನಗಳಲ್ಲಿ ದಿಕ್ಸೂಚಿಯಾಗಲಿದೆ.

ಮಲದ ರಾಡಿ ಸಂಸ್ಕರಣೆಗೆ ಬಳಕೆಯಾಗುತ್ತಿರುವುದು ಅಮೆರಿಕದ ತಂತ್ರಜ್ಞಾನ. ಆ ದೇಶದಲ್ಲಿ ಯಶಸ್ವಿಯಾದ ನಂತರ ಜರ್ಮನ್ಗೆ ವರ್ಗಾವಣೆಗೊಂಡಿದೆ. ಅಮೆರಿಕದ ದಿ ಬಿಲ್ ಮತ್ತು ಮಿಲಿಂಡಾ ಗೇಟ್ಸ್, ಸಿಡಿಡಿ ಸೊಸೈಟಿ ಮತ್ತು ಬಿಓಆರ್ಡಿಓ ಸಂಸ್ಥೆಗಳು ವೈಯಕ್ತಿಕ ಆಸಕ್ತಿ ವಹಿಸಿ ಹತ್ತು ಗುಂಟೆ ನಿವೇಶನದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಘಟಕ ಆರಂಭಿಸಿದೆ. ಒಂದು ವರ್ಷ ಈ ಸಂಸ್ಥೆಗಳು ಘಟಕದ ಉಸ್ತುವಾರಿ ವಹಿಸಲಿದ್ದು ಪುರಸಭೆಗೆ ನಂತರ ವಹಿಸಿಕೊಡಲಿದೆ. ಇಡೀ ವರ್ಷ ಜರ್ಮನ್ ತಂತ್ರಜ್ಞರೇ ಮುನ್ನಡೆಸಲಿದ್ದಾರೆ.

ಮಲದ ರಾಡಿ ನಿರ್ವಹಣೆ ಹೀಗೆ
ಪುರಸಭೆ ವ್ಯಾಪ್ತಿಯಲ್ಲಿನ ಶೌಚಾಲಯದ ಗುಂಡಿಯಲ್ಲಿ ಸಂಗ್ರಹವಾಗುವ ಮಲದ ರಾಡಿಯನ್ನು ಯಂತ್ರದ ಮೂಲಕ ಸಾಗಾಣಿಕೆ ಟ್ಯಾಂಕರ್ಗೆ ತುಂಬಿಸಿ ಸಂಸ್ಕರಣಾ ಘಟಕದಲ್ಲಿ ಅಳವಡಿಸಿರುವ ಪೈಪ್ ಮೂಲಕ ತುಂಬಿಸಲಾಗುತ್ತದೆ. 6 ಸಾವಿರ ಲೀಟರ್ ಸಾಮರ್ಥ್ಯದ ಘಟಕದಲ್ಲಿ ಮೂರು ಗಂಟೆಯಲ್ಲಿ ಮಲ ಮತ್ತು ನೀರಿನ ಅಂಶ ಕೊಳವೆ ಮೂಲಕ ಪ್ರತ್ಯೇಕವಾಗಿ ಸಂಗ್ರಹ ಘಟಕದಲ್ಲಿ ಶೇಖರಣೆಯಾಗುತ್ತದೆ. ಅಂತಿಮ ಹಂತದಲ್ಲಿ ಮಲ ಗಟ್ಟಿಯಾಗಿ ಒಣಗಿದ ನಂತರ ಪ್ಯಾಕಿಂಗ್ ಮಾಡಲಾಗುತ್ತದೆ. ಸಂಗ್ರಹವಾದ ನೀರನ್ನು ಪ್ಲಾಂಟೇಷನ್ಗೆ ಬಳಸುವ ಉದ್ದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.