ನವದೆಹಲಿ (ಪಿಟಿಐ): ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ‘ಟೆರಿ’ ಮಹಾನಿರ್ದೇಶಕ ರಾಜೇಂದ್ರ ಕುಮಾರ್ ಪಚೌರಿ ಅವರು ಸಂಸ್ಥೆಗೆ ಕಾಲಿಡದಂತೆ ಗುರುವಾರ ತಡೆಯೊಡ್ಡಿದ ದೆಹಲಿ ನ್ಯಾಯಾಲಯ, ಅವರ ಬಂಧನಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮಾರ್ಚ್ 27ವರೆಗೂ ವಿಸ್ತರಿಸಿತು.

ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜ್ಕುಮಾರ್ ತ್ರಿಪಾಠಿ ಅವರು, ಮಹಿಳಾ ಸಹೋದ್ಯೋಗಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ‘ಟೆರಿ’ ಸಿಬ್ಬಂದಿ ಹಾಗೂ ದೂರುದಾರರನ್ನು ಸಂಪರ್ಕಿಸದಂತೆಯೂ ಪಚೌರಿ ಅವರಿಗೆ ನಿರ್ಬಂಧ ಹೇರಿದರು.

‘ಆರೋಪಿಯು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ತನಿಖೆ ಅವಧಿಯಲ್ಲಿ ‘ಟೆರಿ’ ಕಚೇರಿ ಪ್ರವೇಶಿಸಬಾರದು, ಸಂಸ್ಥೆಯ ಸಿಬ್ಬಂದಿಯನ್ನಾಗಲಿ ದೂರುದಾರರನ್ನಾಗಲಿ ಸಂಪರ್ಕಿಸಬಾರದು ಹಾಗೂ ಸಾಕ್ಷಿಗಳನ್ನು ತಿರುಚಬಾರದು’ ಎಂದು ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.