ನಾಗಪ್ಪ ಬ್ಲಾಕ್ ಸುರಕ್ಷಾ ಟ್ಯೂಷನ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಇಂಚರ-2 ಕಾರ್ಯಕ್ರಮದಲ್ಲಿ ಭಕ್ತಿಗೀತೆ, ದೇಶಭಕ್ತಿಗೀತೆ, ಭಾವಗೀತೆಗಳ ಗಾಯನ ಪ್ರೇಕ್ಷಕರನ್ನು ಮುದಗೊಳಿಸಿತು.

ಗಣೇಶನಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸುರಕ್ಷಾ ಮತ್ತು ವೀಕ್ಷಾ ಅವರು ಹಾಡಿದ `ಶರಣು ಹೇಳಿವ್ರಿ ಸ್ವಾಮಿ ನಾವು ನಿಮಗಾ~ ಎಂಬ ರಂಗ ಗೀತೆ, `ಐಕ್ಯವೊಂದೇ ಮಂತ್ರ ಐಕ್ಯವೇ ಸ್ವಾತಂತ್ರ್ಯ~ ದೇಶಭಕ್ತಿ ಗೀತೆ ಶ್ರೋತೃ ವರ್ಗವನ್ನು ಸಂಗೀತದ ಲೋಕಕ್ಕೆ ಕರೆದೊಯ್ದಿತ್ತು.

ಸುರಕ್ಷಾ ಹಾಡಿದ ಕೆ.ಎಸ್. ನರಸಿಂಹಸ್ವಾಮಿ ಅವರ ಭಾವಗೀತೆ ಮತ್ತು ಜಾನಪದ ಗೀತೆಗಳು ಇಂಪಾಗಿದ್ದವು. ಹಿರಿಯ ಗಾಯಕ ಪಾರ್ವತೀಸುತ ಅವರ ಗಾಯನ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು.

ಎಸ್. ಅಭಿಜಿತ್ ಹಾರ್ಮೋನಿಯಂ, ಎ.ಎನ್. ಗುರುನಂದನ್ ತಬಲಾ, ರವಿ ವಿಶೇಷ ಲಯವಾದ್ಯದಲ್ಲಿ ಸಹಕರಿಸಿದರು. ಸಂಸ್ಕೃತ ವಿದ್ವಾಂಸ ಪಾರ್ಥಸಾರಥಿ,ಪ್ರಾಂಶುಪಾಲ ಬಿ.ಪಿ. ಚಂದ್ರಶೇಖರ್, ಸಂಸ್ಥೆಯ ಪೋಷಕ ದಿನೇಶ್‌ರಾವ್, ಸ್ಥಾಪಕಿ ಗಾಯತ್ರಿ ಕೇಶವ್, ಮಹೇಶ್, ಆರತಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.