ಏರುತ್ತಿದೆ ಖ್ಯಾತಿ
ಅಮೆರಿಕದಲ್ಲಿ ಪಯಣ ಮುಂದುವರಿದಂತೆ ಆಲೋಕನ ಜನಪ್ರಿಯತೆ ಏರುತ್ತಲೇ ಇದೆ. ಮಾರ್ಗದುದ್ದಕ್ಕೂ ಅವನನ್ನು ಕಾಣಲು, ಮುದ್ದಿಸಲು, ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳಲು ಜನರು ಹಾತೊರೆಯುತ್ತಿದ್ದಾರೆ. 'Aloka the Peace Dog' ಖಾತೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ 3.5 ಲಕ್ಷ ಹಾಗೂ ಫೇಸ್‌ಬುಕ್‌ನಲ್ಲಿ 7.7 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಆತನ ಹಲವು ವಿಡಿಯೊಗಳು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡು, ಲಕ್ಷಾಂತರ ಲೈಕ್ ಗಿಟ್ಟಿಸಿವೆ.