ಉಡುಪಿಯ ಅಜ್ಜರಕಾಡಿನ ಭುಜಂಗ ಉದ್ಯಾನದ ಹಸಿರು ಪರಿಸರದ ನಡುವೆ ಉಬ್ಬಿದ ಬಂಡೆಯೊಂದರ ಮೇಲೆ ದಶಕಗಳಿಂದ ಮಳೆ, ಬಿಸಿಲು, ಗಾಳಿಗೆ ಜಗ್ಗದೆ ನಿಂತಿರುವ ಗೋಪುರದಾಕಾರದ ಕಟ್ಟಡವೊಂದಿದೆ. ಅದುವೇ ‘ಭುಜಂಗ ನಿಲಯ’ ರೇಡಿಯೊ ಟವರ್.

ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಐತಿಹಾಸಿಕ ಮಹತ್ವವಿರುವ ಅಜ್ಜರಕಾಡಿನಲ್ಲಿ ಅಷ್ಟಪಟ್ಟಿ ಆಕಾರದ ಈ ಕಟ್ಟಡವು ತನ್ನ ವಾಸ್ತುಶೈಲಿಯಿಂದ ಮೊದಲ ನೋಟದಲ್ಲೇ ಸೆಳೆಯುತ್ತದೆ.

ಈಗ ಮೌನವಾಗಿ ನಿಂತಿರುವ ರೇಡಿಯೊ ಟವರ್ ಒಂದು ಕಾಲದಲ್ಲಿ ಉಡುಪಿಯ ಜನತೆಗೆ ಜಗದಗಲದ ವಿದ್ಯಮಾನಗಳನ್ನು ಉಣಬಡಿಸಿದೆ. ಸ್ವಾತಂತ್ರ್ಯಪೂರ್ವದ ಹಲವು ಅವಿಸ್ಮರಣೀಯ ಕ್ಷಣಗಳ ಮಾಹಿತಿಯನ್ನು ಶೋತೃಗಳ ಕಿವಿಗೆ ಮುಟ್ಟಿಸಿದ್ದ ಈ ಕಟ್ಟಡವು ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ವಿಶ್ರಾಂತಿಗೆ ಜಾರಿದ ಭಾವದಲ್ಲಿ ನೆಲೆ ನಿಂತಿದೆ.

ಮೂರು ಅಂತಸ್ತಿನ ಈ ಕಟ್ಟಡದ ಮೇಲೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ರೇಡಿಯೊ ರಿಸೀವರ್ ಇಟ್ಟು ಧ್ವನಿವರ್ಧಕದ ಮೂಲಕ ರೇಡಿಯೊ ಕಾರ್ಯಕ್ರಮಗಳನ್ನು ಟವರ್ ಮೂಲಕ ಬಿತ್ತರಿಸಲಾಗುತ್ತಿತ್ತು. ಕಟ್ಟಡದ ಪ್ರತಿ ಕೋನಗಳಲ್ಲಿರುವ ಕಿಟಕಿಗಳೂ ಆಕರ್ಷಣೀಯವಾಗಿವೆ. ಕಟ್ಟಡದೊಳಗಿನ ಮೆಟ್ಟಿಲುಗಳ ಮೂಲಕ ಮೇಲಂತಸ್ತಿಗೆ ಹತ್ತಿ ಹೋಗಬಹುದಾಗಿದೆ. ಆದರೆ ಈಗ ಕಟ್ಟಡದ ಬಾಗಿಲಿಗೆ ಬೀಗ ಹಾಕಿರುವುದರಿಂದ ಪ್ರವಾಸಿಗರು ಹೊರಗಿನಿಂದಲೇ ಕಟ್ಟಡದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು.

1938ರಲ್ಲಿ ಸ್ಥಾಪಿಸಿದ್ದ ಈ ರೇಡಿಯೊ ಟವರ್ ಅನ್ನು ಅಂದಿನ ಮದ್ರಾಸ್ ಸರ್ಕಾರದ ಸಚಿವರಾಗಿದ್ದ
ಪಿ.ಸುಬ್ಬರಾಯನ್ ಅವರು ಉದ್ಘಾಟಿಸಿರುವ ಉಲ್ಲೇಖ ಕಟ್ಟಡದಲ್ಲಿ ಅಳವಡಿಸಿರುವ ಫಲಕದಲ್ಲಿದೆ. ಡಾ.ಯು.ಎಲ್. ನಾರಾಯಣ ರಾವ್ ಎಂಬುವವರು ತಮ್ಮ ತಂದೆ ಭುಜಂಗ ರಾವ್ ಅವರ ನೆನಪಿಗಾಗಿ ಈ ಕಟ್ಟಡವನ್ನು ಕಟ್ಟಿಸಿದ್ದಾರೆ ಎಂಬ ಉಲ್ಲೇಖವೂ ಸಿಗುತ್ತದೆ.

1930ರ ಕಾಲಘಟ್ಟದಲ್ಲಿ ಯಾರ ಮನೆಗಳಲ್ಲೂ ರೇಡಿಯೊಗಳಿರಲಿಲ್ಲ. ರೇಡಿಯೊ ಖರೀದಿಸಬೇಕಾದರೂ ಪರವಾನಗಿ ಪಡೆಯಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಧ್ವನಿವರ್ಧಕದ ಮೂಲಕ ಈ ಕಟ್ಟಡದಿಂದ ರೇಡಿಯೊ ಕಾರ್ಯಕ್ರಮಗಳು ಭಿತ್ತರವಾಗುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಇಲ್ಲಿನ ಹಿರಿಯರು.

ರೇಡಿಯೊ ಟವರ್ನಿಂದ ಕೇಳಿಬರುತ್ತಿದ್ದ ದೆಹಲಿ, ಬೆಂಗಳೂರಿನಿಂದ ಪ್ರಸಾರವಾಗುತ್ತಿದ್ದ ವಾರ್ತೆಗಳಿಗಾಗಿ ಸಂಜೆ ವೇಳೆಗೆ ಉಡುಪಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಟವರ್ನ ಸುತ್ತ ಸೇರುತ್ತಿದ್ದರು ಎಂದೂ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಹಿಂದೆ ಪುರಸಭೆ ಇದ್ದ ಕಾಲದಲ್ಲಿ ನೌಕರರೊಬ್ಬರು ಇದರಲ್ಲಿನ ರೇಡಿಯೊವನ್ನು ನಿರ್ವಹಣೆ ಮಾಡುತ್ತಿದ್ದರು. ವಿಶೇಷ ಸಂದರ್ಭಗಳಲ್ಲಿ ಟವರ್ನಿಂದ ಸೈರನ್ ಕೂಡ ಮೊಳಗುತ್ತಿತ್ತು. ಉಡುಪಿಯ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಭುಜಂಗ ನಿಲಯ ರೇಡಿಯೊ ಟವರ್ ಇಂದು ಉಡುಪಿಯ ಹೆಗ್ಗುರುತುಗಳಲ್ಲಿ ಒಂದಾಗಿ ನೋಡುಗರನ್ನು ಸೆಳೆಯುತ್ತಿದೆ.

‘ಪ್ರವಾಸಿ ಕೈಪಿಡಿಯಲ್ಲೂ ಉಲ್ಲೇಖವಾಗಿತ್ತು’

ಅಜ್ಜರಕಾಡಿನ ಭುಜಂಗ ನಿಲಯ ರೇಡಿಯೊ ಟವರ್ ಬಗ್ಗೆ ಹಲವು ವರ್ಷಗಳ ಹಿಂದೆಯೇ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಪ್ರಕಟವಾಗಿದ್ದ ಪ್ರವಾಸಿ ಕೈಪಿಡಿಯಲ್ಲೂ ಉಲ್ಲೇಖಿಸಲಾಗಿತ್ತು. ಅದರಲ್ಲಿ ಟವರ್ನ ಫೋಟೊ ಮತ್ತು ಮಾಹಿತಿ ಪ್ರಕಟವಾಗಿತ್ತು. ಆ ಮೂಲಕ ಪ್ರವಾಸಿಗರ ಚಿತ್ತವನ್ನೂ ಸೆಳೆದಿತ್ತು ಎನ್ನುತ್ತಾರೆ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್.

ರೇಡಿಯೊ ಟವರ್ 1990ರ ವರೆಗೂ ಕಾರ್ಯ ನಿರ್ವಹಿಸುತ್ತಿತ್ತು. ಮನೆ ಮನೆಗೆ ಟೆಲಿವಿಷನ್ ಬಂದ ಬಳಿಕ ಅದು ಸ್ತಬ್ಧವಾಯಿತು. ರೇಡಿಯೊ ಟವರ್ ನಿರ್ಮಾಣವಾಗುವುದಕ್ಕೂ ಕೆಲವು ವರ್ಷಗಳ ಮೊದಲು ಅಜ್ಜರಕಾಡಿಗೆ ಮಹಾತ್ಮ ಗಾಂಧಿ ಭೇಟಿ ನೀಡಿದ್ದರು. ರೇಡಿಯೊ ಟವರ್ ನೆಲೆ ನಿಂತಿರುವ ಬಂಡೆಗೂ ಮಹತ್ವವಿದೆ. ಪಂಜಾಬ್ನ ಅಮೃತಸರದಲ್ಲಿ ಜಲಿಯನ್ ವಾಲಾ ಭಾಗ್ ದುರಂತ ನಡೆದಾಗ ಅದನ್ನು ಖಂಡಿಸಿ ಇದೇ ಬಂಡೆಯ ಮೇಲೆ ಉಡುಪಿಯ ಸ್ವಾತಂತ್ರ್ಯಪ್ರೇಮಿಗಳು ಸಭೆ ಸೇರಿರುವುದಾಗಿ ಹಿರಿಯರು ಹೇಳುತ್ತಿದ್ದರು ಎಂದೂ ಅವರು ಸ್ಮರಿಸಿದರು.

ರೇಡಿಯೊ ಟವರ್ನಲ್ಲಿ ಆಗಿನ ಕಾಲದಲ್ಲಿ ಶಕ್ತಿಶಾಲಿ ರೆಡಿಯೊ ರಿಸೀವರ್ ಬಳಸಲಾಗಿತ್ತು. ದೆಹಲಿಯಿಂದ ಪ್ರಸಾರವಾಗುತ್ತಿದ್ದ ಇಂಗ್ಲಿಷ್ ವಾರ್ತೆಯನ್ನು ಹಾಗೂ ಬೆಂಗಳೂರಿನಿಂದ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಯನ್ನೂ ಇಲ್ಲಿ ಕೇಳಬಹುದಾಗಿತ್ತು . ಸಂಗೀತ ಕಾರ್ಯಕ್ರಮಗಳನ್ನೂ ಜನರು ಆಸ್ವಾದಿಸುತ್ತಿದ್ದರು. 1947 ಆಗಸ್ಟ್ 14ರಂದು ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಟವರ್ನಲ್ಲಿ ಸೈರನ್ ಮೊಳಗಿತ್ತು ಎಂದೂ ಅವರು ರೇಡಿಯೊ ಟವರ್ನ ಮಹತ್ವವನ್ನು ವಿವರಿಸಿದರು.

‘ಪ್ರವಾಸಿ ಕೈಪಿಡಿಯಲ್ಲೂ ಉಲ್ಲೇಖವಾಗಿತ್ತು’

ಅಜ್ಜರಕಾಡಿನ ಭುಜಂಗ ನಿಲಯ ರೇಡಿಯೊ ಟವರ್ ಬಗ್ಗೆ ಹಲವು ವರ್ಷಗಳ ಹಿಂದೆಯೇ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಪ್ರಕಟವಾಗಿದ್ದ ಪ್ರವಾಸಿ ಕೈಪಿಡಿಯಲ್ಲೂ ಉಲ್ಲೇಖಿಸಲಾಗಿತ್ತು. ಅದರಲ್ಲಿ ಟವರ್ನ ಫೋಟೊ ಮತ್ತು ಮಾಹಿತಿ ಪ್ರಕಟವಾಗಿತ್ತು. ಆ ಮೂಲಕ ಪ್ರವಾಸಿಗರ ಚಿತ್ತವನ್ನೂ ಸೆಳೆದಿತ್ತು ಎನ್ನುತ್ತಾರೆ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್. ರೇಡಿಯೊ ಟವರ್ 1990ರ ವರೆಗೂ ಕಾರ್ಯ ನಿರ್ವಹಿಸುತ್ತಿತ್ತು. ಮನೆ ಮನೆಗೆ ಟೆಲಿವಿಷನ್ ಬಂದ ಬಳಿಕ ಅದು ಸ್ತಬ್ಧವಾಯಿತು. ರೇಡಿಯೊ ಟವರ್ ನಿರ್ಮಾಣವಾಗುವುದಕ್ಕೂ ಕೆಲವು ವರ್ಷಗಳ ಮೊದಲು ಅಜ್ಜರಕಾಡಿಗೆ ಮಹಾತ್ಮ ಗಾಂಧಿ ಭೇಟಿ ನೀಡಿದ್ದರು. ರೇಡಿಯೊ ಟವರ್ ನೆಲೆ ನಿಂತಿರುವ ಬಂಡೆಗೂ ಮಹತ್ವವಿದೆ.

ಪಂಜಾಬ್ನ ಅಮೃತಸರದಲ್ಲಿ ಜಲಿಯನ್ ವಾಲಾ ಭಾಗ್ ದುರಂತ ನಡೆದಾಗ ಅದನ್ನು ಖಂಡಿಸಿ ಇದೇ ಬಂಡೆಯ ಮೇಲೆ ಉಡುಪಿಯ ಸ್ವಾತಂತ್ರ್ಯಪ್ರೇಮಿಗಳು ಸಭೆ ಸೇರಿರುವುದಾಗಿ ಹಿರಿಯರು ಹೇಳುತ್ತಿದ್ದರು ಎಂದೂ ಅವರು ಸ್ಮರಿಸಿದರು. ರೇಡಿಯೊ ಟವರ್ನಲ್ಲಿ ಆಗಿನ ಕಾಲದಲ್ಲಿ ಶಕ್ತಿಶಾಲಿ ರೆಡಿಯೊ ರಿಸೀವರ್ ಬಳಸಲಾಗಿತ್ತು. ದೆಹಲಿಯಿಂದ ಪ್ರಸಾರವಾಗುತ್ತಿದ್ದ ಇಂಗ್ಲಿಷ್ ವಾರ್ತೆಯನ್ನು ಹಾಗೂ ಬೆಂಗಳೂರಿನಿಂದ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಯನ್ನೂ ಇಲ್ಲಿ ಕೇಳಬಹುದಾಗಿತ್ತು . ಸಂಗೀತ ಕಾರ್ಯಕ್ರಮಗಳನ್ನೂ ಜನರು ಆಸ್ವಾದಿಸುತ್ತಿದ್ದರು. 1947 ಆಗಸ್ಟ್ 14ರಂದು ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಟವರ್ನಲ್ಲಿ ಸೈರನ್ ಮೊಳಗಿತ್ತು ಎಂದೂ ಅವರು ರೇಡಿಯೊ ಟವರ್ನ ಮಹತ್ವವನ್ನು ವಿವರಿಸಿದರು.