ನನಗೂ ನನ್ನ ಮದುವೆ ಕುರಿತಾಗಿ ನವಿರಾದ ಕನಸಿದೆ.ಮದುವೆ ಎಂಬುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ನನಗೆ ಮತ್ತು ನನ್ನ ಮನೆಯವರಿಗೆ ಸಂತೋಷ ತರಬೇಕೆನ್ನುವುದೇ ನನ್ನ ಆಸೆ. ನಾನು ಮದುವೆಯಾಗುವ ಹುಡುಗಿ
ನಾನು ಜೀವಕ್ಕಿಂತ ಹೆಚ್ಚು ಪ್ರೀತಿಸುವವಳಾಗಿರಬೇಕು.

ಅವಳು ನನ್ನ ಮನೆಯವರಿಗೆ ಗೌರವ ಕೊಡುವಂತವಳಾಗಿರಬೇಕು. ಅವಳ ಮನೆಯವರು ಹಾಗೂ ನನ್ನ ಮನೆಯವರು ಈ ಮದುವೆಯನ್ನು ಸಂತೋಷದಿಂದ ಒಪ್ಪಿ ಸಂಪ್ರದಾಯದಂತೆ ಮದುವೆ ಮಾಡಿಸಬೇಕು. ಮದುವೆಯ ಖರ್ಚು ನನ್ನ ಸಂಪಾದನೆಯಿಂದಲೇ ಆಗಬೇಕೆಂಬುದು ನನ್ನ ಆಸೆ. ಮದುವೆ ಯಾವುದೋ ದೂರದ ಛತ್ರದಲ್ಲಿ ನಡೆಯದೇ ಹುಟ್ಟಿ ಬೆಳೆದ ನನ್ನ ಮನೆಯಲ್ಲಿಯೇ ನಡೆಯಬೇಕು.

ಸ್ನೇಹಿತರು, ಬಂಧುಗಳು ಪ್ರೀತಿ ಪಾತ್ರರು ಈ ಮದುವೆಗೆ ಬಂದು ಶುಭ ಕೋರಬೇಕು. ಬಾಲ್ಯದಿಂದ ಇಲ್ಲಿಯವರೆಗೂ ನನ್ನ ಜೊತೆಯಲ್ಲಿ ಆಡಿ ಬೆಳೆದ, ಸುಖದುಃಖಗಳನ್ನು ಹಂಚಿಕೊಂಡ ಎಲ್ಲ ಗೆಳೆಯರೂ, ಗೆಳತಿಯರೂ ಬರಬೇಕು. ಹಾಗೆಯೇ ನನ್ನ ಎಲ್ಲಾ ಗುರುಗಳು ಬಂದು ಆಶೀರ್ವದಿಸಿ ಹಾರೈಸಬೇಕು. ಆಡಂಬರವಿಲ್ಲದ ಮದುವೆಯಲ್ಲಿ ನಮ್ಮಿಂದ ಪರಿಸರಕ್ಕೆ ಕಸದ ಕೊಡುಗೆ ಎಳ್ಳಷ್ಟೂ ಇರಬಾರದು. ಮದುವೆಯ ದಿನ ಅಥವಾ ಅದರ ಹಿಂದಿನ ದಿನ ಕವಿಗೋಷ್ಠಿ ಏರ್ಪಡಿಸಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಹಾಗೂ ಉದಯೋನ್ಮುಖ ಕವಿಗಳನ್ನು ಗೌರವಿಸಬೇಕು. ಮದುವೆಗೆ ಬಂದವರೆಲ್ಲರಿಗೂ ಒಂದೊಂದು ಗಿಡವನ್ನು ಕಾಣಿಕೆಯಾಗಿ ನೀಡಬೇಕೆನ್ನುವುದು ನನ್ನ ಮಹತ್ವದ ಆಸೆ. ಅಷ್ಟು ಸಸಿಗಳನ್ನು ನೆಡುವಂತಹ ಪುಣ್ಯ ಕೆಲಸವಾಗುತ್ತದೆ. ಆಡಂಬರವಿಲ್ಲದೇ ಸಮಾಜಕ್ಕೆ ಪರಿಸರಕ್ಕೆ ಉಪಯೋಗವಾಗುವಂಥಹ ಕಾರ್ಯಗಳೊಂದಿಗೆ ಮದುವೆ ಸಾರ್ಥಕವಾಗಬೇಕೆಂಬುದೇನನ್ನ ಆಸೆ.

ಲಿಂಗಸುಗೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.