ಮಂಗಳೂರಿನ ರಿತುಪರ್ಣ ಪ್ರತಿಭೆ ಮತ್ತು ಪರಿಶ್ರಮದಿಂದ ವಾರ್ಷಿಕ ₹ 72.5 ಲಕ್ಷ ವೇತನದ ಉದ್ಯೋಗವನ್ನು ವಿಶ್ವದ ಪ್ರತಿಷ್ಠಿತ ಕಂಪನಿಯಲ್ಲಿ ಗಿಟ್ಟಿಸಿಕೊಂಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಈ ಪ್ರೇರಣಾದಾಯಕ ಕಥನ ನಿಮ್ಮ ಓದಿಗಾಗಿ..
ಭರತನಾಟ್ಯ, ಝುಂಬಾ ಡಾನ್ಸ್...
ಬೆಳಿಗ್ಗೆ 9.30 ರಿಂದ ಸಂಜೆ 4.30 ರ ವರೆಗೆ ಕಾಲೇಜಿನ ತರಗತಿಗಳು. ನಂತರ ಮನೆಗೆ ಬಂದು ಟಾಸ್ಕ್ ಪೂರ್ಣಗೊಳಿಸುವ ಧಾವಂತ. ರಾತ್ರಿ 12.30 ದಾಟಿದರೂ ಮುಗಿಯದ ಕೆಲಸ. ಒತ್ತಡವೇ ಜೀವನ ಎಂಬಂತಾದಾಗ, ಯಾಕಿಷ್ಟು ಕಷ್ಟಪಡಬೇಕು ಎಂದು ಒಮ್ಮೊಮ್ಮೆ ಅವರಿಗೆ ಕಾಡಿದ್ದಿದೆಯಂತೆ. ಆ ಸಂದರ್ಭದಲ್ಲಿ ತಲ್ಲಣಗಳ ಹೊರೆ ಕಳಚಿಕೊಳ್ಳಲು ಅವರಿಗೆ ನೆರವಾದದ್ದು ಭರತನಾಟ್ಯ ಮತ್ತು ಝುಂಬಾ. ಭರತನಾಟ್ಯ ಕಲಾವಿದೆಯಾಗಿರುವ ರಿತುಪರ್ಣ ಕೆಲಸದ ಒತ್ತಡ ತಡೆಯಲು ಸಾಧ್ಯವಾಗದಾಗ, ಭರತನಾಟ್ಯ ಅಥವಾ ಝುಂಬಾಕ್ಕೆ ಮೊರೆಹೋಗುತ್ತಿದ್ದಳು ಎನ್ನುತ್ತಾರೆ ಅವರ ಪಾಲಕರು.