ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ ಸಿದ್ಧಾರೂಢ ಜಾತ್ರೆ

Last Updated 1 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ.. ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ... ಎಂಬ ಭಕ್ತರ ಜಯಘೋಷಗಳೇ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಮಹತ್ವವನ್ನು ಸಾರುತ್ತವೆ. ಶಿವರಾತ್ರಿ ಮರು ದಿನ, ಮಾರ್ಚ್‌ ಐದರಂದು ನಡೆಯುವ ಜಾತ್ರೆಯಲ್ಲಿ ಈ ಜಯಘೋಷಗಳು ಮತ್ತೆ ಅನುರಣಿಸಲಿವೆ.

ಸಿದ್ಧಾರೂಢ ಸ್ವಾಮೀಜಿ ಬೀದರ್‌ ಜಿಲ್ಲೆಯ ಚಳಕಾಪುರದಲ್ಲಿ 1836ರ ಮಾರ್ಚ್ 26ರಂದು ಜನಿಸಿದರು. ಚಿಕ್ಕಂದಿನಲ್ಲಿ ಸಿದ್ಧ ಎಂದು ಅವರನ್ನು ಕರೆಯಲಾಗುತ್ತಿತ್ತು. ಮನೆ ಬಿಟ್ಟು ಲೋಕಸಂಚಾರ ಆರಂಭಿಸಿದ ಅವರು, ಎಷ್ಟೋ ಜನರ ಸಂಕಷ್ಟಗಳನ್ನು ಪವಾಡಗಳ ಮೂಲಕ ಪರಿಹರಿಸಿದರು.

41ನೇ ವಯಸ್ಸಿನಲ್ಲಿ ಅಂದರೆ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆ ನಿಂತರು. ಅನೇಕ ಪವಾಡಗಳನ್ನು ಮಾಡಿದ ಅವರು, 1929ರ ಆಗಸ್ಟ್‌ 21ರಂದು ಲಿಂಗೈಕ್ಯರಾದರು.

ಗಾಂಧೀಜಿ, ತಿಲಕರ ಭೇಟಿ: 1918 ಬಾಲಗಂಗಾಧರ ತಿಳಕ, 1924ರಲ್ಲಿ ಮಹಾತ್ಮ ಗಾಂಧಿ ಅವರು ಹುಬ್ಬಳ್ಳಿಗೆ ಬಂದಾಗ ಸಿದ್ಧಾರೂಢರನ್ನು ಭೇಟಿಯಾಗಿದ್ದರು. ಅಸ್ಪೃಶ್ಯರೊಂದಿಗೆ ಊಟಕ್ಕೆ ಕುಳಿತಿದ್ದ ಸಿದ್ಧಾರೂಢರನ್ನು ಕಂಡು ಗಾಂಧೀಜಿ ಮೂಕವಿಸ್ಮಿತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT