ಮಲ್ಲಿಗೆ: ಹೇ ಮಿಕ್ಕು, ಹೌ ಆರ್ ಯು?
ಮಿಕ್ಕು: ನೌ ಆ ಯಾಮ್ ಫೈನ್. ಆದರೆ ನಿನ್ನೆ ನಾ ತುಂಬಾ ಅಳ್ತಿದ್ದೆ.

ಮಲ್ಲಿಗೆ: ಏನಾಯ್ತು? ಏಕೆ ಆಳ್ತಿದ್ದೆ?
ಮಿಕ್ಕು: ನನಗೆ ಆ ನಕ್ಷತ್ರವನ್ನು ಹಿಡಿಯಬೇಕೆಂಬ ಆಸೆ. ಆದ್ರೆ ಹೇಗೆ ಅಲ್ಲಿಗೆ ಹೋಗೋದು ಎಂದು ತಿಳಿಯದೇ ಅಳ್ತಿದ್ದೆ.

ಮಲ್ಲಿಗೆ: ಈಗ ತಿಳೀತಾ? ಹೇಗೆ ಹೋಗೋದಪ್ಪಾ?
ಮಿಕ್ಕು: ನಾವು ಹೋಗ್ಬೇಕಾದ್ರೆ ನಮಗೆ ರೆಕ್ಕೆ ಬೇಕು. ರೆಕ್ಕೆ ಬಂದರೆ ಹೋಗಬಹುದು.

ಮಲ್ಲಿಗೆ: ನಂಗೊಂದು ಐಡಿಯಾ ಬಂತು. ನಿಂಗೆ ರೆಕ್ಕೆ ಕೊಡ್ತೇನೆ ಕಣ್ಣು ಮುಚ್ಚು.
ಮಿಕ್ಕು: ಸರಿ ಮುಚ್ಚಿದೆ.

ಮಲ್ಲಿಗೆ: ಈಗ ನಮ್ಮಿಬ್ಬರಿಗೆ ರೆಕ್ಕೆ ಬಂದಂತೆ ಭಾವಿಸಿಕೊ. ಈಗ ಆಕಾಶಕ್ಕೆ ಹಾರೋಣ...
ಮಿಕ್ಕು: ವ್ಹಾ... ಎಷ್ಟು ಚೆನ್ನಾಗಿದೆ ಆಕಾಶದಲ್ಲಿ ತೇಲೋ ಆಟ. ಎಷ್ಟು ನಕ್ಷತ್ರಗಳು!

ಮಲ್ಲಿಗೆ: ಈ ದೊಡ್ಡ ನಕ್ಷತ್ರ ನೋಡು. ಇದು ನಿನ್ನ ಕಿರೀಟ (ಮಿಕ್ಕುವಿನ ತಲೆಯ ಮೇಲೆ ಒಂದು ನಕ್ಷತ್ರವನ್ನು ಮಲ್ಲಿಗೆ ಹಿಡಿಯುತ್ತಾಳೆ). ಈಗ ನೀನೇ ನಕ್ಷತ್ರಗಳ ರಾಜ.
ಮಿಕ್ಕು: ಈ ನಕ್ಷತ್ರ ನಿನ್ನ ಮುಡಿಗೆ. ಇದು ಹೂವಿನ ರೀತಿ ಇದೆಯಲ್ವಾ? ಈಗ ನೀನು ನಕ್ಷತ್ರ ದೇವತೆ. ನನ್ನೀ ರೆಕ್ಕೆಗಳೂ ಎರಡು ನಕ್ಷತ್ರ.

ಮಲ್ಲಿಗೆ: ಈ ಪುಟ್ಟ ನಕ್ಷತ್ರವನ್ನು ನನ್ನ ಕೈಯಲ್ಲಿ ಬಚ್ಚಿಡ್ತೇನೆ.
ಮಿಕ್ಕು: ಅಲ್ಲಿ ಹೋಗೋಣ ಬಾ. ಮಲ್ಲಿಗೆ, ಆ ಚೆಂಡಿನ ಹೆಸರೇನು ಗೊತ್ತಾ? ಚಂದಿರ.

ಮಲ್ಲಿಗೆ: ಅಲ್ಲಿ ಚಂದಿರನ ಮೇಲೆ ಕೂತು ನೋಡೋಣ್ವ?
ಮಿಕ್ಕು: ಭೂಮಿ ನೀಲಿ ಬಾಲ್. ಚಂದ್ರ ವೈಟ್ ಬಾಲ್. ಅದು ನಾನು, ಇದು ನೀನು.

ಮಲ್ಲಿಗೆ: ಅಲ್ಲಿಂದಾಚೆಗೆ ನೋಡು, ಏನೋ ಕೆಂಪಗೆ ಹೊಳೆಯುತ್ತಿದೆ.
ಮಿಕ್ಕು: ಅದು ಸೂರ್ಯ ಬಾಲ್. ಅದು ಯಾರು?

ಮಲ್ಲಿಗೆ: ಈ ಲೋಕದ ರಾಜ ರಾಣಿ ನಾವೇ, ಅದು ಈ ಲೋಕಕ್ಕೆ ಬಂದಿರೋ ಗೆಸ್ಟ್ ಬಾಲ್.
ಮಿಕ್ಕು: ಇನ್ನೂ ದೂರ ಹೋಗೋಣ, ಕುಣಿದು ನಲಿದಾಡೋಣ.

ಮಲ್ಲಿಗೆ: ತುಂಬಾನೇ ಚೆನ್ನಾಗಿದೆ ಈ ಲೋಕ. ಈಗ ಸಮಯವಾಯ್ತು. ಹೋಮ್ ವರ್ಕ್ ಮಾಡಿಲ್ಲ. ಎಲ್ರೂ ಮಲ್ಗಾಯ್ತು. ನಾ ಕೂಡ ಮಲಗಬೇಕು. ಸರಿ, ಮನೆಗೆ ಹೋಗೋಣ ನಡಿ.
ಮಿಕ್ಕು: ಗುಡ್ ಬೈ ಸ್ಟಾರ್ಸ್, ಗುಡ್ ಮೈ ಮೂನ್, ಗುಡ್ ಬೈ ಸನ್.
ಮಲ್ಲಿಗೆ: ಗುಡ್ ಬೈ... ಗುಡ್ ನೈಟ್ ಮಿಕ್ಕಿ.

-ರುಕ್ಕು ಎಂ.
9ನೇ ತರಗತಿ, ಜಿ.ಎಚ್.ಎಸ್. ಹಾಡ್ಲಿ

`ನೀವೂ ಬರೆಯಿರಿ' ಎಂದು ನಾವು ಕೊಟ್ಟ ಆಹ್ವಾನಕ್ಕೆ ಮಕ್ಕಳ ಸ್ಪಂದನ ಖುಷಿ ಕೊಡುವಂತಿದೆ. ಮಕ್ಕಳ ಜೊತೆಗೆ ಶಿಕ್ಷಕರೂ ಉತ್ಸಾಹದಿಂದ ಬರೆದಿದ್ದಾರೆ. ಹೀಗೆ ನಮ್ಮ ಕೈಸೇರಿದವುಗಳಲ್ಲಿ ಆಯ್ದ ಕೆಲವು ರಚನೆಗಳು ಇಲ್ಲಿವೆ. ನೀವೇ ರೂಪಿಸಿದ ಈ ವಿಶೇಷ ಪುಟ ಹೇಗಿದೆ ಎನ್ನುವುದಕ್ಕೆ ಒಂದು ಸಾಲು ಪತ್ರ ಬರೆಯಿರಿ. ಹಾಗೆಯೇ, ನಿಮ್ಮಳಗೊಂದು ಕಥೆಯೋ, ಪದ್ಯವೋ, ಪ್ರಸಂಗವೋ ಸುಳಿದಾಡುತ್ತಿದ್ದರೆ ಬರೆದು ಕಳಿಸಿಕೊಡಿ.
- ಸಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.