ಸಮುದ್ರದ ಹಡಗು
ಸಮುದ್ರದಲ್ಲಿ ತೇಲುತ ಬಂತು ದೊಡ್ಡದೊಂದು ಹಡಗು
ಹೋಗ್ತೀವಿ ನಾವು ಕಡಲ ಕಿನಾರೆಗೆ ನೋಡೋಕದನ್ನ
ಅಲೆಗಳ ಮೇಲೆ ತೇಲಿ ಬಿಡ್ತೀವಿ ನಮ್ ಕಾಗದದ್ ದೋಣೀನ
ಸರಕನ್ನಿಳಿಸಿ ತಂದುಕೊಡುತ್ತದು ಇಷ್ಟಿಷ್ಟ್ ಮಿಠಾಯನ್ನ

ಪೀಪೀ ಊದೋ ಪಾಪು

ಪಾಪು ಅಪ್ಪ ಪೀಪಿ ಊದ್ತಾರೆ ಪೀಪೀಪೀ
ಕೇಳಿ ಕೇಳಿ ಪಾಪೂ ಹೇಳ್ತಾನೆ ಪೀಪೀಪೀ

ಡೋಲು ಬಾರಿಸ್ತಾರೆ ಸೋಮು ಅಪ್ಪ ಡುಂಡುಂಡುಂ
ಸೋಮು ಬಾರಿಸ್ತಾನೆ ಬರಿಗೈನಲ್ಲೇ ಡುಂಡುಂಡುಂ

ಪಾಪು ಸೋಮು ಇಬ್ಬರು ಕೂಡಿ ಆರ್ಕೆಸ್ಟ್ರಾ ಮಾಡ್ತಾರೆ
ಪೀಪೀಪೀಪೀಪೀಪೀ ಧಾಂಧೂಂಧೂಂ
ಪಾಪು ಪೀಪಿ ಸೋಮು ಡೋಲು ಧಾಂಧೂಂಧೂಂ

ರಾಮು ಬಂದ ಹಾಡೋದಕ್ಕೆ ವಾ ವಾ ವಾ
ಕೇಳಿದೋರೆಲ್ಲ ಹೇಳಿದ್ರು ವಾಹ್ ವಾಹ್ ವಾಹ್

ಜಲ್ಲೆಕಬ್ಬು
ಪುಟ್ಟ ಪುಟ್ಟ ಹೈದ, ಕಚ್ಚಿ ತಿಂದ ಕಬ್ಬ
ಜಲ್ಲೆಜಲ್ಲೆ ಜಗಿದು ಜಗಿದು ಹೊಟ್ಟೆ ಆಯ್ತು ಡುಬ್ಬ

ಗುಬ್ಬಿ ಕಬಾಬು
ಗುಬ್ಬಿ ಕಾಗೆ ಸೇರ್ಕೊಂಡು ಗೇಲಿ ಮಾಡಿದ್ವು ಗೂಬೇ ಮರೀನ

ಸಂಚು ಮಾಡಿ ಕಾಗೆ ಹಚ್ಚಿತ್ತು ಗುಬ್ಬಚ್ಚೀನ
ಅಣಕಿಸಲಿಕ್ಕೆ ತನ್ನ ಪಾಡಿಗೆ ತಾನಿದ್ದ ಗೂಬೆ ಮರೀನ

ಗೂಬೆ ಬಂತು, ಕೋಪ ಬಂತು ಹಿಡಿಯಿತು ಗುಬ್ಬೀನ
ಪುಕ್ಕ ಕಿತ್ತು ಕಬಾಬು ಮಾಡಿ ಮರೀಗೆ ಕೊಟ್ಬಿಡ್ತು ಪಾಪ ಗುಬ್ಬೀನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.