ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಗೋಲು ಪುಸ್ತಕ ಪರಿಚಯ: ಸಾಧಕರ ನುಡಿ ಸಂಕಥನ

Published 16 ಮಾರ್ಚ್ 2024, 23:38 IST
Last Updated 16 ಮಾರ್ಚ್ 2024, 23:38 IST
ಅಕ್ಷರ ಗಾತ್ರ

ಕಥೆ, ಕಾದಂಬರಿ, ಪ್ರವಾಸ ಕಥನ–ಹೀಗೆ ಹಲವು ಪ್ರಕಾರಗಳ ಕೃತಿಗಳನ್ನು ರಚಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ 36ನೇ ಕೃತಿ ಇದಾಗಿದೆ. ಸಾಧನೆ ಮಾಡಿದ ವ್ಯಕ್ತಿಗಳ ನುಡಿ ಸಂಕಥನವನ್ನು ಇದು ಒಳಗೊಂಡಿದೆ. 

ಸಾಧಕರ ಅಭಿನಂದನಾ ಗ್ರಂಥಕ್ಕೆ, ಸಾಧಕರಿಗೆ 50–60 ವರ್ಷವಾದ ಸಂದರ್ಭದಲ್ಲಿ ಹೊರಬಂದ ಗ್ರಂಥಕ್ಕೆ ಹೀಗೆ ವಿವಿಧ ಸಂದರ್ಭಗಳಲ್ಲಿ ಲೇಖಕರು ಬರೆದಿದ್ದ ಲೇಖನಗಳ ಗುಚ್ಛ ಇದಾಗಿದೆ. ನಾಡಪ್ರಭು ಕೆಂಪೇಗೌಡರಿಂದ ಹಿಡಿದು ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್‌, ಎಸ್‌.ಬಂಗಾರಪ್ಪ ಹೀಗೆ ಬೆಂಗಳೂರು ನಿರ್ಮಾಣದ ಶಿಲ್ಪಿಯಿಂದ ಹಿಡಿದು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದವರು, ನೀರಾವರಿ ತಜ್ಞರು, ರಾಜಕೀಯ ಧುರೀಣರು, ಸಾಹಿತ್ಯ ಲೋಕದ ಜನಪ್ರಿಯರು, ದಲಿತ ಚಳವಳಿ, ಪತ್ರಿಕೋದ್ಯಮ, ಸಮಾಜ ಸೇವೆ, ಕನ್ನಡ ಪರ ಹೋರಾಟಗಾರರು, ಜನಪದ, ಚಿತ್ರಕಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು ಐವತ್ತು ಸಾಧಕರ ವೈವಿಧ್ಯಮಯ ಬದುಕಿನ ಅನಾವರಣವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ಇಲ್ಲಿನ ಸಾಧಕರಲ್ಲಿ ಕೆಲವರನ್ನು ಹೊರತುಪಡಿಸಿ ಹಲವರ ಜೊತೆ ಲೇಖಕರು ಒಡನಾಡಿದ ಕಾರಣ ಬರವಣಿಗೆ ಹಾಗೂ ವಿಷಯ ಪ್ರಸ್ತುತಿಯಲ್ಲಿ ಆಪ್ತತೆಯನ್ನು ಕಾಣಬಹುದಾಗಿದೆ. ಸಾಧಕರ ಹಿನ್ನೆಲೆ, ಅವರ ನಡೆ, ನುಡಿ ಹಾಗೂ ಹೋರಾಟಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವಲ್ಲಿ ಲೇಖಕರು ಯಶಸ್ಸು ಕಂಡಿದ್ದಾರೆ.  

ನುಡಿಗೋಲು 

ಲೇ: ಜಾಣಗೆರೆ ವೆಂಕಟರಾಮಯ್ಯ 

ಪ್ರ: ಜಾಣಗೆರೆ ಪತ್ರಿಕೆ ಪ್ರಕಾಶನ 

ಸಂ: 9343798078

ಪುಟ: 278 ದರ: 250 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT