ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಲಂಬಾಣಿ ಭಾಷೆಯ ಒಳನೋಟದ ಕೃತಿ

Published 30 ಸೆಪ್ಟೆಂಬರ್ 2023, 23:30 IST
Last Updated 30 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮೂಲತಃ ಇಂಡೋ–ಆರ್ಯನ್ ಭಾಷಾ ವರ್ಗಕ್ಕೆ ಸೇರಿರುವ ಲಂಬಾಣಿ ಭಾಷೆಯು (ಗೋರ್ ಬೋಲಿಯಾ) ತನ್ನದೇ ಆದ ಮಹತ್ವ ಹೊಂದಿದೆ. ಲಿಪಿ ಇಲ್ಲದ ಕಾರಣಕ್ಕೆ ನಿರ್ಲಕ್ಷ್ಯಕ್ಕೊಳಗಾಗಿದ್ದರೂ ತನ್ನ ಲಾಲಿತ್ಯಮಯವಾದ ಮೌಖಿಕ ಪರಂಪರೆಯ ಮೂಲಕವೇ ಗೋರ್‌ ಬೋಲಿಯಾ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಈ ನಿಟ್ಟಿನಲ್ಲಿ ಲಂಬಾಣಿ ಭಾಷೆಯ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಕುರಿತು ‘ಭಾಷಾ ಶಾಸ್ತ್ರೀಯ ನೆಲೆಯಲ್ಲಿ ದಕ್ಷಿಣ ಭಾರತದ ಲಂಬಾಣಿ ಭಾಷೆ’ ಕೃತಿ ಒಳನೋಟ ಬೀರುತ್ತದೆ.

ಸ್ವಾತಂತ್ರ್ಯೋತ್ತರದಲ್ಲಿ ರಾಜ–ಮಹಾರಾಜರಿಗೆ ಆಹಾರ ಧಾನ್ಯಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಧಾನ್ಯಗಳ ಜತೆಗೆ ಮದ್ದು–ಗುಂಡುಗಳನ್ನು ಪೂರೈಸುತ್ತಿದ್ದ ಈ ಬುಡಕಟ್ಟು ಜನಾಂಗವು ಬ್ರಿಟಿಷರ ದಬ್ಬಾಳಿಕೆ ಒಳಗಾಗಿದೆ. ಈ ಅನ್ಯಾಯದಿಂದ ತಪ್ಪಿಸಿಕೊಳ್ಳಲು ದೇಶ ಮತ್ತು ವಿದೇಶಗಳಲ್ಲಿ ಹರಿದು ಹಂಚಿಹೋದ ಲಂಬಾಣಿ ಸಮುದಾಯವು ಕಾಲಾನುಕ್ರಮದಲ್ಲಿ ತನ್ನ ಭಾಷೆ, ಸಂಸ್ಕೃತಿ, ಅಚಾರ–ವಿಚಾರಗಳಲ್ಲೂ ಬದಲಾವಣೆ ಕಂಡಿದೆ. ದಕ್ಷಿಣ ಭಾರತದ ಕನ್ನಡ, ಮರಾಠಿ, ಆಂಧ್ರ, ತೆಲುಗು, ತಮಿಳು ಭಾಷೆಗಳ ಪ್ರಭಾವಕ್ಕೊಳಗಾಗಿರುವ ಗೋರ್ ಬೋಲಿಯಾದ ಕುರಿತು ಈ ಕೃತಿ ವಿಶ್ಲೇಷಿಸುತ್ತದೆ. ಬುಡಕಟ್ಟು ಸಮುದಾಯದ ಆಕರ್ಷಕ, ವರ್ಣಮಯ ಉಡುಗೆ–ತೊಡುಗೆ, ವಿಶಿಷ್ಟ ಸಂಸ್ಕೃತಿ, ಪ್ರತಿ ಸಂದರ್ಭಕ್ಕೂ ಬಳಕೆಯಾಗುವ ಹಾಡು, ಸ್ವಾತಂತ್ರ್ಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಾಯಕರ ಬಗ್ಗೆಯೂ ಪರಿಚಯಿಸುವ ಈ ಕೃತಿ ಲಂಬಾಣಿ ಭಾಷೆಗಷ್ಟೇ ಅಲ್ಲ, ಒಟ್ಟು ಸಮುದಾಯದ ಅಧ್ಯಯನಕ್ಕೂ ಆಕರ ಗ್ರಂಥವಾಗಿದೆ. ದಕ್ಷಿಣ ಭಾರತದ ಭಾಷೆಗಳ ಪ್ರಭಾವಕ್ಕೊಳಗಾಗಿಯೂ ಗೋರ್ ಬೋಲಿಯಾ ತನ್ನ ಉಳಿವಿಗೆ ವಹಿಸಬೇಕಾದ ಎಚ್ಚರಿಕೆಯ ಸಂದೇಶವನ್ನೂ ಈ ಕೃತಿ ಮನಗಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT