ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಲೇಖಕಿ ಇಂದಿರಾ ಶಿವಣ್ಣ ಅವರು ಸ್ವತಃ ಸಾವಿನ ದವಡೆಯಿಂದ ಪಾರಾಗಿ ಬಂದ ಅನುಭವ ಕಥನವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅಂಗಾಂಗ ಕಸಿ ಮಾಡಿಸಿಕೊಂಡಿರುವ ಅವರು, ವೈದ್ಯಕೀಯ ಲೋಕದ ಅಚ್ಚರಿಗಳನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಅವರ ಈ ಅನುಭವ ಕಥನ ಒಂದು ಸಾಹಸಗಾಥೆಯಂತೆ ಕಾಣಿಸುತ್ತದೆ. ನಟ ಅಂಬರೀಶ್ ಚಿಕಿತ್ಸೆ ಪಡೆದು ಒಮ್ಮೆ ಸಾವು ಗೆದ್ದ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದ ಪ್ರಸಂಗವನ್ನು ಮತ್ತು ಅಂಬರೀಶ್ ಬಗೆಗಿನ ಕೆಲ ಸಂಗತಿಗಳನ್ನು ಲೇಖಕಿ ಉಲ್ಲೇಖಿಸಿದ್ದು, ಆಸಕ್ತಿದಾಯಕವಾಗಿವೆ. 33 ಅಧ್ಯಾಯಗಳಿದ್ದು, ಇದು ಲೇಖಕಿಯ ಆತ್ಮಚರಿತ್ರೆಯಷ್ಟೇ ಅಲ್ಲ ವೈದ್ಯಕೀಯ ಲೋಕದಲ್ಲಿನ ಸಾಧ್ಯತೆಗಳನ್ನು ಅನಾವರಣಗೊಳಿಸಿರುವ ಹೊತ್ತಿಗೆಯಂತಿದೆ. ಜಠರ, ಕರುಳು ಪಿತ್ತಜನಕಾಂಗ ಹಾಗೂ ಪ್ಯಾಂಕ್ರಿಯಾಸ್ ಶಸ್ತ್ರ ಚಿಕಿತ್ಸೆಯಲ್ಲಿ ಸಿದ್ಧಹಸ್ತರಾದ ಡಾ.ರವಿಚಂದ ಸಿದ್ದಾಚಾರಿ ಮತ್ತವರ ವೈದ್ಯಕೀಯ ತಂಡದ ಯಶೋಗಾಥೆಯನ್ನು ಇದರಲ್ಲಿ ಅನಾವರಣಗೊಳಿಸಿದ್ದಾರೆ.
ಈ ಕೃತಿಯನ್ನು ಓದಿ ಮುಗಿಸುವಾಗ ಎಂಥವರಲ್ಲೂ ಒಂದು ಅದಮ್ಯ ಜೀವನೋತ್ಸಾಹದ ಸೆಲೆ ಪುಟಿಯುತ್ತದೆ. ಲೇಖಕಿಯ ಸ್ವಅನುಭವ ಮತ್ತು ಅವರು ರೂಢಿಸಿಕೊಂಡಿರುವ ಜೀವನ ಶೈಲಿ ನಾನಾ ಕಾಯಿಲೆಗಳಿಂದ ಬಳಲುತ್ತಿರುವವರ ಬದುಕಿನಲ್ಲಿ ಭರವಸೆ ಮೂಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.