ದೇಶ ಸುತ್ತು, ಕೋಶ ಓದು ಎಂಬ ಗಾದೆ ಮಾತಿನಂತೆ ದೇಶ ಸುತ್ತಿ ಅದರ ಮಾಹಿತಿಯ ಕೋಶವನ್ನು ಶ್ರೀನಿವಾಸ ಎಂ.ಜಿ. ಪಾಣಿಭಾತೆ ರಚಿಸಿದ್ದಾರೆ.

‘ಸ್ವಂತ ಕಾರಿನಲ್ಲಿ, ಬೆಂಗಳೂರಿನಿಂದ ಲಂಡನ್ಗೆ– ಒಂದು ರೋಚಕ ಪ್ರವಾಸಕಥನ‘ ಎಂಬ ಈ ಕೃತಿಯಲ್ಲಿ ಲೇಖಕ ಶ್ರೀನಿವಾಸ ಮತ್ತು ಸವಿತಾ ಅವರು ತಮ್ಮ ಕಾರಿನಲ್ಲಿ 75 ದಿನಗಳ ಕಾಲ 19,354 ಕಿ ಮೀ ಕ್ರಮಿಸಿ 20 ದೇಶಗಳನ್ನು ಸುತ್ತಾಡಿದ ಪ್ರವಾಸದ ಅನುಭವವನ್ನು ದಾಖಲಿಸಿದ್ದಾರೆ.

ಭೂ ಮಾರ್ಗದ ಮೂಲಕ ಲಂಡನ್ಗೆ ಪ್ರಯಾಣಿಸುವುದು ಹಲವರ ಕನಸು. ಈ ಪ್ರಯತ್ನಕ್ಕೆ ಕೈಹಾಕುವವರು ವಿರಳ. 20 ದೇಶಗಳ ಅನುಮತಿ ಪಡೆಯುವ ಹಾಗೂ ವಾಹನ ನಿರ್ವಹಣೆಯ ಸವಾಲು, ಪರಿಚಯವಿಲ್ಲದ ಆಯಾ ರಾಷ್ಟ್ರಗಳ ರಸ್ತೆಗಳಲ್ಲಿ ಸಂಚಾರಕ್ಕೆ ಹಿಂಜರಿಯುವವರೇ ಹೆಚ್ಚು. ಅಂಥವರಿಗೆ ಕೈಪಿಡಿಯಾಗುವ ಲಕ್ಷಣವಿರುವ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ.

ಪ್ರವಾಸದುದ್ದಕ್ಕೂ ತಮ್ಮ ರಸ್ತೆ ಪಯಣದ ಅನುಭವದ ಜತೆಗೆ, ಅಲ್ಲಲ್ಲಿ ತಾವು ಕಂಡ ಹಾಗೂ ಭೇಟಿ ನೀಡಿದ ರಮಣೀಯ ದೃಶ್ಯಗಳನ್ನೂ ಇಲ್ಲಿ ದಾಖಲಿಸಿದ್ದಾರೆ. ಪ್ರಾಚೀನ ರೇಷ್ಮೆ ಮಾರ್ಗದ ಇತಿಹಾಸ ಮತ್ತು ಆಯಾ ಪ್ರದೇಶಗಳ ಅಂದಿನ ಪ್ರಾಮುಖ್ಯತೆ ಕುರಿತೂ ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದಾರೆ.

ಬೆಂಗಳೂರಿನಿಂದ ಲಂಡನ್ವರೆಗೂ ದಾಟಿದ ರಾಷ್ಟ್ರಗಳು ಯಾವುವು? ಅಲ್ಲಿ ತಾವು ಕಂಡ ವಿಶೇಷಗಳಾವುವು? ಅಲ್ಲಲಿನ ರೋಚಕ ಅನುಭವಗಳ ಗುಚ್ಛ ಈ ಕೃತಿ.

ಸ್ವಂತ ಕಾರಿನಲ್ಲಿ, ಬೆಂಗಳೂರಿನಿಂದ ಲಂಡನ್ಗೆ

ಲೇ: ಶ್ರೀನಿವಾಸ ಎಂ.ಜಿ. ಪಾಣಿಭಾತೆ

ಪ್ರ: ಪ್ರಭಾತೆ ಪ್ರಕಾಶನ

ಪು: 360

ಬೆ: ₹380

ಮೊ: 98804 24780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.