ರೂಮಿಯ ಅನೂಹ್ಯ ಒಳನೋಟಗಳು ಚಿಕಿತ್ಸಕ ಗುಣವನ್ನು ಹೊಂದಿವೆ. ಆಳವಾದ ಆಲೋಚನೆಗೆ ಹಚ್ಚುವ, ಮನಸ್ಸನು ಆರ್ದ್ರಗೊಳಿಸುವ ಶಕ್ತಿ ರೂಮಿಯ ಕತೆಗಳಿಗೆ ಇದೆ. ರೂಮಿಯ ಎರಡು ಸಾಲುಗಳಲ್ಲಿ ಅಸಂಖ್ಯಾತ ಅರ್ಥಗಳಿರುತ್ತವೆ. ಅವುಗಳು ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಮನಸು ಭಾರವಾದಾಗ, ಮನಸು ಖಾಲಿಯೆನಿಸಿದಾಗ ರೂಮಿಯ ಸಾಲುಗಳ ಸಖ್ಯ ಬೆಳೆಸಬೇಕು.