ಐತಿಹಾಸಿಕ ಘಟನೆಗಳ ಆಧಾರದಲ್ಲಿ ಕಥೆ–ಕಾದಂಬರಿ ರಚನೆಯ ಪ್ರಯೋಗ ಕನ್ನಡ ಸಾಹಿತ್ಯದ ಮಟ್ಟಿಗೆ ಅಪರೂಪವೇನೂ ಅಲ್ಲ. ಇತಿಹಾಸ ಮತ್ತು ಸಾಹಿತ್ಯದ ಸಮ್ಮಿಲನದ ಇತ್ತೀಚಿನ ಕೃತಿ, ‘ಸಿಸ್ತಿನ ಶಿವಪ್ಪ ನಾಯಕ’ ಕಾದಂಬರಿ. ಮಲೆನಾಡಿನಲ್ಲಿ ಜನಾನುರಾಗಿಯಾಗಿದ್ದ ಅರಸ, ಕೆಳದಿಯ ಶಿವಪ್ಪ ನಾಯಕನ ಸುತ್ತ ಹೆಣೆದಿರುವ ಕಥಾಹಂದರದ ಈ ಕೃತಿಯಲ್ಲಿ ಇತಿಹಾಸದ ಪುಟಗಳಲ್ಲಿ ಸಿಗುವ ವಿವರಗಳಿಗೆ ಕಲ್ಪನೆಯ ಮೆರುಗು ತುಂಬಿದ್ದಾರೆ ಲೇಖಕರು.

‘ವಾಸ್ತವವಾಗಿ ಶಿವಪ್ಪ ಹೀಗೆ ಇದ್ದನೋ ಇಲ್ಲವೋ ನಾನರಿಯೆ. ಆದರೆ ನನ್ನ ಕಾದಂಬರಿಯ ನಾಯಕ ಹೀಗಿರಬೇಕು ಎನ್ನುವುದು ನನ್ನ ಆಶಯ. ಅದರಂತೆ ಶಿವಪ್ಪ ನಾಯಕನನ್ನು ಸೃಷ್ಟಿಸಿದ್ದೇನೆ’ ಎಂದು ಲೇಖಕರೇ ಮುನ್ನುಡಿಯಲ್ಲಿ ಹೇಳಿದ್ದಾರೆ. ಕೃತಿಯಲ್ಲಿ ಶಿವಪ್ಪ ನಾಯಕನ ಶಿಸ್ತಿನ ಆಡಳಿತವನ್ನು ಬಿಂಬಿಸಲು ಒತ್ತು ನೀಡಲಾಗಿದೆ.ಕಾದಂಬರಿಯನ್ನು ಓದುತ್ತ ಸಾಗಿದಂತೆ ಅರ್ಧ ಕರ್ನಾಟಕವನ್ನು ಸುತ್ತಿದ ಅನುಭವವಾಗುತ್ತದೆ. ಅರಮನೆ, ಕೋಟೆ ಕೊತ್ತಲಮತ್ತು ಸಮೃದ್ಧ ಹಸಿರಿನ ಮೂಲಕ ಕರೆದುಕೊಂಡು ಹೋಗುವ ಲೇಖಕರು ಯುದ್ಧದ ರೋಮಾಂಚನವನ್ನೂ ಮೋಸ, ವಂಚನೆ ಮುಂತಾದವುಗಳ ಕುತಂತ್ರಗಳ ಮೂಲಕ ಒಳ್ಳೆಯತನವನ್ನು ದಮನಿಸಲು ಪ್ರಯತ್ನಿಸುವವರನ್ನೂ ಪರಿಚಯಿಸಿದ್ದಾರೆ. ಪ್ರೀತಿ, ಸ್ನೇಹ, ವಿಶ್ವಾಸ, ವಾತ್ಸಲ್ಯದ ಅಗಾಧ ಲೋಕವನ್ನೂ ತೆರೆದಿಟ್ಟಿದ್ದಾರೆ.

ಕೃತಿ: ಸಿಸ್ತಿನ ಶಿವಪ್ಪ ನಾಯಕ

ಲೇ:ನಾ. ಡಿಸೋಜ

ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ

ಸಂ:9449886390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.