ರಹಮತ್ ತರೀಕೆರೆ ಅವರ ‘ಧೀಮಂತರ ಸಾವು’ ವ್ಯಕ್ತಿಚಿತ್ರಗಳ ಸಂಕಲನ. ಶೀರ್ಷಿಕೆಯಲ್ಲಿ ಸಾವು ಎಂದಿದ್ದರೂ, ಈ ಕೃತಿ ಮಾತನಾಡುವುದು ಸಾವು ಕೊನೆಗಾಣಿಸಲಾಗದ ಬದುಕಿನ ಸಾಧ್ಯತೆಗಳ ಬಗ್ಗೆ. ಧೀಮಂತರ ಭೌತಿಕ ಬದುಕಿಗೆ ಕೊನೆಯಿರಬಹುದು. ಆದರೆ, ತಮ್ಮ ಚಿಂತನೆಗಳ ಮೂಲಕ ಅವರು ಜೀವಂತವಾಗಿರುತ್ತಾರೆ, ಸಮಾಜವನ್ನು ಪ್ರಭಾವಿಸುತ್ತಿರುತ್ತಾರೆ. ರಹಮತ್ ಅವರು ಕಾಣಿಸುವ ಇಲ್ಲಿನ ಪ್ರತಿಯೊಂದು ವ್ಯಕ್ತಿಚಿತ್ರವೂ ಕಾಲಕ್ಕೆ ಸವಾಲಾಗಿ ಉಳಿಯುವಂ
ತಹದ್ದು.

‘ಧೀಮಂತರ ಸಾವಿಗೆ ಯಾವತ್ತೂ ಪೂರ್ಣವಿರಾಮ ಇರುವುದಿಲ್ಲ’ ಎನ್ನುವ ಲೇಖಕರ ನಂಬಿಕೆಯೇ ಇಲ್ಲಿನ ನಲವತ್ತು ವ್ಯಕ್ತಿಚಿತ್ರಗಳನ್ನು ರೂಪಿಸಿದಂತಿದೆ. ರಹಮತ್ ಅವರು ಮತ್ತೆ ಮತ್ತೆ ಭೇಟಿಯಾದ, ಒಡನಾಡಿದ, ಹತ್ತಿರದಿಂದ ಕಂಡ ಹಾಗೂ ದೂರದಿಂದಲೇ ಗೌರವಿಸಿದ ವ್ಯಕ್ತಿತ್ವಗಳೆಲ್ಲ ಈ ಕೃತಿಯಲ್ಲಿ ಹಣತೆಸಾಲುಗಳಾಗಿವೆ. ಲೇಖಕರೇ ಹೇಳಿರುವಂತೆ–ಸಮಾನತೆಯ ಕನಸಿದ್ದ, ಆಸುಪಾಸಿನ ಸಮಾಜ ಬದಲಾಗಬೇಕೆಂದು ಚಡಪಡಿಸಿದ ಧೀಮಂತರ ಬದುಕು ಸಾಧನೆ ವ್ಯಕ್ತಿತ್ವದ ಕುರಿತ ಆರ್ದ್ರಚಿತ್ರಗಳು ಇಲ್ಲಿವೆ.

ಆಧುನಿಕ ಕರ್ನಾಟಕದ ಸಾಕ್ಷಿಪ್ರಜ್ಞೆಗಳಂಥ ವ್ಯಕ್ತಿತ್ವಗಳು ಧೀಮಂತರ ಸಾವು ಕೃತಿಯಲ್ಲಿ ಕಿಕ್ಕಿರಿದಿದ್ದಾರೆ. ಗಿರೀಶ ಕಾರ್ನಾಡ, ಪಿ.ಲಂಕೇಶ್, ವಿಜಯಾ ದಬ್ಬೆ, ಪುಣೇಕರ, ಜಿ. ರಾಜಶೇಖರ, ಕಿ.ರಂ. ನಾಗರಾಜ, ಎಸ್.ಆರ್.ಹಿರೇಮಠ, ಜಿ.ಎಚ್.ನಾಯಕ, ರಾಜೀವ ತಾರಾನಾಥ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್, ಚಂಪಾ, ಕೆ.ರಾಮದಾಸ್, ಕೆ.ವಿ. ಸುಬ್ಬಣ್ಣ ಮುಂತಾದ ನಾಯಕ ನಾಯಕಿಯರ ಬದುಕು ವ್ಯಕ್ತಿತ್ವದಲ್ಲಿ ಕೆಲವು ಸಾಮ್ಯತೆಗಳಿವೆ. ನಿಷ್ಠುರತೆ ಇವರೆಲ್ಲರ ವ್ಯಕ್ತಿತ್ವದ ಭಾಗವಾಗಿತ್ತು. ಸತ್ಯ ಹೇಳಲು ಇವರಾರೂ ಹಿಂಜರಿದವರಲ್ಲ. ಸತ್ಯದ ದಾರಿಯಲ್ಲಿ ನಂಜುಂಡವರು, ಸಾವಿಗಂಜದವರು ಹಾಗೂ ಸತ್ಯವನ್ನು ನುಡಿದಿದ್ದಕ್ಕಾಗಿಯೇ ಜೀವತೆತ್ತವರು ಇಲ್ಲಿದ್ದಾರೆ. ಹಾಗೆಯೇ, ಭಿನ್ನ ಭಿನ್ನ ಕ್ಷೇತ್ರಗಳ ಈ ಸಾಧಕರ ಒಟ್ಟಾರೆ ಬದುಕು ಕನ್ನಡ ಸಮಾಜದ ಆರೋಗ್ಯವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಮುಡಿಪಾಗಿತ್ತು ಎನ್ನುವುದನ್ನೂ ಗಮನಿಸಬೇಕು.

ಈ ಅಸಾಧಾರಣ ವ್ಯಕ್ತಿತ್ವಗಳ ಮೂಲಕ ರಹಮತ್ ಅವರು ಕಟ್ಟಿಕೊಡುತ್ತಿರುವ ಸ್ಮೃತಿಗಳು ಸಹೃದಯರ ಭಾವಕೋಶವನ್ನು ಉದ್ದೀಪಿಸುವಂತಿವೆ; ಅದಕ್ಕೂ ಮುಖ್ಯವಾಗಿ, ವರ್ತಮಾನದ ಕ್ಷೋಭೆಗಳನ್ನು ನಾವು ಅರಿಯುವ ಹಾಗೂ ಎದುರಿಸುವ ಬಗೆ ಯಾವುದು ಎನ್ನುವುದಕ್ಕೆ ಉತ್ತರ ರೂಪದಲ್ಲಿಯೂ ಈ ಧೀಮಂತರು ಒದಗಿಬರುವಂತಿದ್ದಾರೆ. ‘ಧೀಮಂತರ ಸಾವು’ ನಮಗೆ ಬದುಕಾಗಿ ಪರಿಣಮಿಸುವಂತಿದೆ. ಎಳೆಯರು ಹಾಗೂ ಯುವಜನರಿಗೆ ನಾಡಿನ ವಿವೇಕ ಪರಂಪರೆ ಹಾಗೂ ಬದುಕಿನ ಮೌಲ್ಯಗಳನ್ನು ಪರಿಚಯಿಸಲು ಈ ಕೃತಿ ಪಠ್ಯದಂತಿದೆ.

ಕೃತಿ: ಧೀಮಂತರ ಸಾವು
ಲೇ: ರಹಮತ್ ತರೀಕೆರೆ
ಪ್ರ: ನವಕರ್ನಾಟಕ

ಸಂ: 080 22161900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.