ಕೋವಿಡ್ ತಂದೊಡ್ಡಿದ ಲಾಕ್‌ಡೌನ್ ಪರಿಸ್ಥಿತಿ ಜನರನ್ನು ಡಿಜಿಟಲ್ ಲೋಕದತ್ತ ಮತ್ತಷ್ಟು ಸೆಳೆದಿತ್ತು. ‘ವರ್ಕ್‌ಫ್ರಂ ಹೋಂ’, ‘ಗೂಗಲ್‌ಮೀಟ್’, ‘ಆನ್‌ಲೈನ್ ಕ್ಲಾಸ್’ ಹೀಗೆ ಹೊಸ ಪದಗಳು ಜನ್ಮತಾಳಿ ಸಾಮಾನ್ಯ ಜನರ ‘ಜೀವನ’ಕೋಶ ಸೇರ್ಪಡೆಯಾದವು. ಎಲ್ಲರೂ ಅನುಭವಿಸಿದ ಈ ‘ಕಟ್ಟು’ಪಾಡಿನೊಳಗೇ ಲೇಖಕರು ತಮ್ಮೊಳಗಿದ್ದ ಕಥಾ ಎಳೆಗಳಿಗೆ ಅಕ್ಷರರೂಪ ಕೊಟ್ಟಿದ್ದಾರೆ. ಹೀಗಾಗಿ ಇಲ್ಲಿರುವ ಬಹುತೇಕ ಕಥೆಗಳಿಗೆ ಡಿಜಿಟಲ್ ನೆಂಟಸ್ತಿಕೆ ಇದೆ. ಇವುಗಳ ಪೈಕಿ ಕೆಲ ಕಥೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.