ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಮಕ್ಕಳಿಗೆ ಹಕ್ಕಿಲೋಕ ಪರಿಚಯಿಸುವ ಕೃತಿ

Published 2 ಮಾರ್ಚ್ 2024, 23:22 IST
Last Updated 2 ಮಾರ್ಚ್ 2024, 23:22 IST
ಅಕ್ಷರ ಗಾತ್ರ

ಮಕ್ಕಳಿಗೆ ಪಕ್ಷಿಗಳ ಲೋಕ ಪರಿಚಯಿಸಲು ಹೇಳಿ ಮಾಡಿಸಿದ ಪುಸ್ತಕ ಹಕ್ಕಿ ಅಟೆಂಡೆನ್ಸ್‌. ಶಿಕ್ಷಕರ ಪ್ರೀತಿ, ವಾತ್ಸಲ್ಯ, ಗದರುವಿಕೆಯ ಜೊತೆಜೊತೆಗೆ ಪಕ್ಷಿ ವೈವಿಧ್ಯದ ಪಾಠವಾಗುತ್ತದೆ. 138 ಬಗೆಯ ಪಕ್ಷಿಗಳ ಹಲವಾರು ಚಿತ್ರಗಳು, ಅಲ್ಬಂನಲ್ಲಿ ಹೊಂದಿಸಿಟ್ಟಂತೆ ಪುಟ ವಿನ್ಯಾಸ ಮಾಡಲಾಗಿದೆ. ಅವುಗಳ ಹೆಸರು, ಜೀವನಶೈಲಿ, ಕಾವ್ಯದಲ್ಲಿ ಅವುಗಳ ಬಣ್ಣನೆ ಎಲ್ಲವನ್ನೂ ಲೇಖಕಿ ನವಿಲಿನ ಗರಿಯಂತೆಯೇ ಹೊಂದಿಸಿಟ್ಟಿದ್ದಾರೆ. ಊಟ ಮಾಡಿಸುವಾಗ, ಮಲಗಿಸುವಾಗ ಈ ಪುಸ್ತಕ ಜೊತೆಗಿದ್ದರೆ ಮಕ್ಕಳ ಮುಂದೆ ಒಂದು ಬಣ್ಣದ ಪಕ್ಷಿಗಳ ಲೋಕವೇ ಬಿಚ್ಚಿಟ್ಟಂತೆ. ತಮ್ಮ ಸುತ್ತಲಿನ ಹಕ್ಕಿ ಪ್ರಪಂಚದಲ್ಲಿ ಕೆಲವನ್ನಾದರೂ ಗುರುತಿಸುವಂತೆ ಮಾಡಬಹುದಾಗಿದೆ. ಕೊನೆಯ ಪುಟದಲ್ಲಿ ಪಕ್ಷಿಗಳ ಕನ್ನಡ ಮತ್ತು ಇಂಗ್ಲಿಷ್‌ ಹೆಸರು ಆಗಾಗ ದೊಡ್ಡವರೂ ರೆಫರ್‌ ಮಾಡುವಂತಿವೆ. ಹೂ ಕುಟಿಗ, ಮರಕುಟಿಗ, ಮಂಗಟ್ಟೆ, ಹಾಲಕ್ಕಿ ಇವನ್ನೆಲ್ಲ ಹುಡುಕುವ, ಗುರುತಿಸುವ ಕೆಲಸವನ್ನೂ ಈ ಬೇಸಿಗೆ ರಜೆಯಲ್ಲಿ ಮಾಡಿಸಬಹುದು

ಹಕ್ಕಿ ಅಟೆಂಡೆನ್ಸ್‌ (ಮಾಹಿತಿ ಪುಸ್ತಕ)
ಪುಟ: 240 ಆರ್ಟ್‌ ಪೇಪರ್‌
ಪ್ರಕಾಶಕರು: ವೀರಲೋಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT