ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ನೆನ್ನೆಯ ಕನಸುಗಳಿಗೆ ಇಂದಿನ ‘ವಾಚಿಕೆ’

Published 9 ಸೆಪ್ಟೆಂಬರ್ 2023, 23:30 IST
Last Updated 9 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನೆನ್ನೆ ಕಂಡ ಕನಸುಗಳೇ ಎಷ್ಟೋ ಸಲ ‘ಹಳತು ಹೊನ್ನು’ ಎನಿಸುವುದು. ಅ.ನ. ಸುಬ್ಬರಾಯರು ‘ಕಲಾಮಂದಿರ’ ಸ್ಥಾಪಿಸಿ ನೂರಾಐದು ವರ್ಷಗಳು ಕಳೆದಿವೆ. ಕಲಾಮಂದಿರದ ಉದ್ದೇಶದ ಮುಂದುವರಿಕೆಯಾಗಿ ‘ಕಲಾ’ ಎಂಬ ಪತ್ರಿಕೆಯು 1931ರಿಂದ 33ರ ಅವಧಿಯಲ್ಲಿ ಪ್ರಕಟವಾಗಿತ್ತು. ಆ ಪತ್ರಿಕೆಯ ಆಯ್ದ ಬರಹಗಳ ‘ವಾಚಿಕೆ’ಯನ್ನು ಸುಬ್ಬರಾಯರ ಮಾರ್ಗದರ್ಶನದಲ್ಲಿಯೇ ಎಚ್‌.ಎಸ್. ರಾಘವೇಂದ್ರರಾವ್ ಅವರು ಸಂಪಾದಿಸಿ ಕೊಟ್ಟಿದ್ದಾರೆ.

ವಿಚಾರ–ಕಲೆಗಳು, ವೈವಿಧ್ಯ, ಸಂಪಾದಕರ ಸಂಪತ್ತು ಎಂಬ ಮೂರು ಭಾಗಗಳಲ್ಲದೆ, ಅನುಬಂಧವನ್ನೇ ಪ್ರತ್ಯೇಕ ಭಾಗವಾಗಿ ನೀಡಲಾಗಿದೆ. ರವೀಂದ್ರನಾಥ ಟ್ಯಾಗೋರ್‌, ಅ.ನ.ಕೃ, ಮಧುರಚೆನ್ನ, ಡಿವಿಜಿ, ಆನಂದ ಕುಮಾರಸ್ವಾಮಿ, ಪೇಜಾವರ ಸದಾಶಿವರಾಯರು, ದೇವುಡು, ಜಿ.ಪಿ. ರಾಜರತ್ನಂ ಮೊದಲಾದ ದಿಗ್ಗಜರ ಬರಹಗಳನ್ನು ಈ ಅಧ್ಯಯನ ಯೋಗ್ಯ ವಾಚಿಕೆ ಒಳಗೊಂಡಿದೆ.

‘ಕಲೆ ಮತ್ತು ಸ್ವದೇಶಿ’ ಎಂಬ ಆನಂದ ಕುಮಾರಸ್ವಾಮಿಯವರ ಬರಹ, ’ರಂಗವಲ್ಲೀ ಕಲೆ‘ಯ ಕುರಿತು ಎಸ್. ಗೌರಮ್ಮ ಅವರ ಲೇಖನ, ‘ದರಿದ್ರನಿಗೂ ಕಲೆಯ ಅಗತ್ಯ ಉಂಟೆ’ ಎಂಬ ಎ.ಎನ್. ಸುಬ್ಬರಾವ್ ಬರಹ ಎಲ್ಲ ಕಾಲಕ್ಕೂ ಮುಖ್ಯವಾದಂಥವು. ಕಲೆ–ಸಾಹಿತ್ಯ ಹಾಗೂ ಇವೆರಡೂ ಬೆರೆತ ಸಂಸ್ಕೃತಿ ವೈವಿಧ್ಯದಲ್ಲಿ ಆಸಕ್ತಿ ಇರುವವರಿಗೆ ಕೃತಿಯ ಓದು ಖುಷಿ ಕೊಡಬಲ್ಲದು.

‘ಕಲಾ ಪತ್ರಿಕೆಯ ಮೊದಲ ಸಂಚಿಕೆಯ ಮೊಟ್ಟಮೊದಲ ವರ್ಣಚಿತ್ರವೇ ಈ ಪ್ರತಿಕೆಯ ಸೆಕ್ಯುಲರ್ ಮನೋಧರ್ಮಕ್ಕೆ ಸಾಕ್ಷಿಯಾಗಿದೆ. ಸ್ವದೇಶಿಯೂ ಭಾರತೀಯವೂ ಆದ ಕಲೆಯ ಮುಖ್ಯ ನೆಲೆಗಳ ಹುಡುಕಾಟವೂ ಇಲ್ಲಿರುವ ಅನೇಕ ಲೇಖನಗಳಲ್ಲಿ ನಡೆದಿದೆ’ ಎಂದು ಎಚ್.ಎಸ್‌.ರಾಘವೇಂದ್ರ ರಾವ್‌ ಅವರೇ ಬೆನ್ನುಡಿಯಲ್ಲಿ ಬರೆದಿದ್ದಾರೆ. ಕಲೆ–ಸಾಹಿತ್ಯ ಹಾಗೂ ಇವೆರಡೂ ಬೆರೆತ ಸಂಸ್ಕೃತಿ ವೈವಿಧ್ಯದಲ್ಲಿ ಆಸಕ್ತಿ ಇರುವವರಿಗೆ ಕೃತಿಯ ಓದು ಖುಷಿ ಕೊಡಬಲ್ಲದು

ಪುಸ್ತಕ: ಕಲಾಲೋಕ –ನಿನ್ನೆ ಕಂಡ ಕನಸು

ಸಂಪಾದನೆ: ಅ.ನ. ಸುಬ್ಬರಾಯರ ಮಾರ್ಗದರ್ಶನದಲ್ಲಿ ಎಚ್‌.ಎಸ್‌.ರಾಘವೇಂದ್ರ ರಾವ್‌

ಪ್ರ: ಕಲಾಮಂದಿರ

ಸಂ: 9886330207

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT