ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಸೈಬರ್ ಕ್ರೈಮ್: ಕಾನೂನು ಶಿಕ್ಷಣದ ಮೂಸೆಯಲ್ಲಿ ಅರಳಿದ ಕೃತಿ

Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಂತ್ರಜ್ಞರಾಗಿ 20 ವರ್ಷಗಳ ಅನುಭವ, ಬೆಂಗಳೂರು ಕಾನೂನು ಶಾಲೆ ವಿಶ್ವವಿದ್ಯಾಲಯದ ವಿಧಿವಿಜ್ಞಾನ ವಿಷಯದಲ್ಲಿ ಡಿಪ್ಲೊಮಾ ಮತ್ತು ಕಾನೂನು ಶಿಕ್ಷಣ ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಸತೀಶ್ ವೆಂಕಟಸುಬ್ಬು ಅವರು ‘ಸೈಬರ್ ಕ್ರೈಮ್ ತಡೆಗಟ್ಟುವುದು ಹೇಗೆ?’ ಎಂಬ ಕೃತಿಯನ್ನು ರಚಿಸಿದ್ದಾರೆ. ಇದು ಪ್ರಸ್ತುತ ಡಿಜಿಟಲ್ ಯುಗ ಎದುರಿಸುತ್ತಿರುವ ಸೈಬರ್ ದಾಳಿಯಿಂದ ರಕ್ಷಿಸಿಕೊಳ್ಳಲು ಇರುವ ಮಾರ್ಗೋಪಾಯದ ಮೇಲೆ ಬೆಳಕು ಚೆಲ್ಲಿದೆ.

ಮೈಸೂರಿನ ಪ್ರಾದೇಶಿಕ ಪತ್ರಿಕೆಯಲ್ಲಿ ‘ಸೈಬರ್ ಮಿತ್ರ’ ಹೆಸರಿನ ಅಂಕಣ ಬರಹಗಳ ಗುಚ್ಛ ಈ ಕೃತಿ. ಆಧಾರ್, ಪ್ಯಾನ್ ಸೈಬರ್ ಅಪರಾಧಗಳು, ಡೀಪ್‌ಫೇಕ್, ಕೃತಕ ಬುದ್ಧಿಮತ್ತೆ ಬಳಸಿ ನಡೆಸುವ ಸೈಬರ್ ದಾಳಿಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಸುವ ಸೈಬರ್ ಅಪರಾಧಗಳು, ಕ್ಯೂಆರ್ ಕೋಡ್‌, ವಾಟ್ಸ್‌ಆ್ಯಪ್‌ ಸೈಬರ್ ಅಪರಾಧಗಳು, ಕೊರಿಯರ್ ಸಹಾಯವಾಣಿಯಿಂದಾಗಿ ಆಗುವ ಸೈಬರ್ ವಂಚನೆಗಳ ಕುರಿತು ಕೃತಿ ಹೇಳಿದೆ.

ಈ ಅಪರಾಧಗಳನ್ನು ತಡೆಗಟ್ಟಲು ಭಾರತದ ಸೈಬರ್ ಕಾನೂನುಗಳು ಏನು ಹೇಳುತ್ತವೆ ಎಂಬಿತ್ಯಾದಿ ಅಂಶಗಳನ್ನು ಈ ಕೃತಿ ಒಳಗೊಂಡಿದೆ. ಇದರೊಂದಿಗೆ ವಿದೇಶಗಳಲ್ಲಿ ಈ ಪಿಡುಗು ಎದುರಿಸಲು ಇರುವ ಕಾನೂನುಗಳ ಕುರಿತೂ ಈ ಕೃತಿಯಲ್ಲಿ ಹೇಳಲಾಗಿದೆ. ಜತೆಗೆ ಸೈಬರ್ ಅಪರಾಧಗಳ ಪರಿಣಾಮಗಳ ಕುರಿತೂ ಲೇಖಕರು ಇಲ್ಲಿ ಚರ್ಚಿಸಿದ್ದಾರೆ. ಸೈಬರ್ ಅಪರಾಧ ಹೆಚ್ಚಳಕ್ಕೆ ಕಾರಣಗಳನ್ನು ಹುಡುಕುವ ಪ್ರಯತ್ನವನ್ನೂ ಸತೀಶ್ ಈ ಕೃತಿಯಲ್ಲಿ ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000–2008ರಲ್ಲಿ ಸೈಬರ್ ಕಾನೂನು ಕುರಿತು ಲೇಖಕರು ಈ ಕೃತಿಯಲ್ಲಿ ಸಂಕ್ಷಿಪ್ತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. ಸೈಬರ್ ಅಪರಾಧಗಳಿಗೆ ಅನ್ವಯವಾಗುವ ಸೆಕ್ಷನ್‌ಗಳು ಮತ್ತು ಸಾಮಾನ್ಯರಿಗೆ ಬೇಕಾಗುವ ಕಾಯಿದೆಯ ಕೆಲ ಪ್ರಮುಖ ನಿಬಂಧನೆಗಳು ಇದರಲ್ಲಿ ನೀಡಲಾಗಿದೆ. ಕಾಯಿದೆಗಳ ಸಂಖ್ಯೆ ಸಹಿತ ವಿವರ ಮತ್ತು ಅದಕ್ಕೆ ಇರುವ ಶಿಕ್ಷೆಯ ಪ್ರಮಾಣವನ್ನು ನೀಡಿರುವುದು ಉಪಯುಕ್ತವಾಗಿದೆ. 

ಸೈಬರ್ ಕ್ರೈಮ್ ತಡೆಗಟ್ಟುವುದು ಹೇಗೆ?

ಲೇ: ಸತೀಶ್ ವೆಂಕಟಸುಬ್ಬು

ಪ್ರ: ಸಾವಣ್ಣ ಎಂಟರ್‌ಪ್ರೈಸಸ್‌

ಸಂ: 90363 12786

ಪುಟ : 168

ಬೆಲೆ: ₹200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT