ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು | ಮಕ್ಕಳಲ್ಲಿ ಅಕ್ಷರ, ಪ್ರೀತಿ‌ ಬಿತ್ತುತ್ತ...

Published 11 ಆಗಸ್ಟ್ 2024, 0:12 IST
Last Updated 11 ಆಗಸ್ಟ್ 2024, 0:12 IST
ಅಕ್ಷರ ಗಾತ್ರ

ಪ್ರಥಮ ಪುಸ್ತಕವು ಮಕ್ಕಳಲ್ಲಿ ಅಕ್ಷರಗಳನ್ನೂ, ಪ್ರೀತಿಯನ್ನೂ, ಅಕ್ಷರ ಪ್ರೀತಿಯನ್ನೂ ಒಟ್ಟೊಟ್ಟಿಗೆ ಬಿತ್ತುವ ಮತ್ತು ಬೆಳೆಯುವ ಕಾರ್ಯದಲ್ಲಿ ತೊಡಗಿದೆ. ಈ ಸರಣಿ ಪುಸ್ತಕಗಳಲ್ಲಿ ಅಫಿಯಾ ಅವಳನ್ನು ಗುಣಪಡಿಸುವವರು ಯಾರು? (ಎಚ್‌. ಎಸ್‌. ರಾಘವೇಂದ್ರ ರಾವ್‌); ಬಿಬಿರ್‌ ಮಾಟಗಾತಿಗೊಂದು ಪುಟ್ಟ ಸಹಾಯ (ಅನುವಾದ ಎಲ್‌.ಸಿ. ನಾಗರಾಜ್); ನೀಲೂ ಇನ್ನು ಶಾಲೆ ತಪ್ಪಿಸುವುದಿಲ್ಲ (ಜೆ.ವಿ. ಕಾರ್ಲೊ)ಊಲಾ ಚುನಾವಣಾ ಸಮಯ (ಎಸ್. ದಿವಾಕರ್‌); ನೆಸೊ ಮತ್ತು ನಾಜೆ ದೊಡ್ಡ ಸಿಟಿಯ ಭಯವಿಲ್ಲ (ಓ.ಎಲ್‌. ನಾಗಭೂಷಣಸ್ವಾಮಿ ಅವರು ಅನುವಾದಿಸಿದ್ದಾರೆ.


ಪ್ರತಿ ಪುಟದಲ್ಲಿಯೂ ಆಕರ್ಷಕ ಚಿತ್ರಗಳು, ಒಂದೆರಡೆ ವಾಕ್ಯಗಳಿರುವ ಸಾಲುಗಳು ಮಕ್ಕಳು ಕತೆಯನ್ನು ತಿಳಿಯುವಂತೆ ಮಾಡುತ್ತವೆ. ಆ ವಾಕ್ಯ ಮತ್ತು ಚಿತ್ರಗಳ ಸಹಾಯದಿಂದ ಮಕ್ಕಳ ಕಲ್ಪನಾಹಕ್ಕಿಗೆ ರೆಕ್ಕೆ ದೊರೆತು ತಾವೂ ಕತೆ ಹೊಸೆಯಬಹುದು. ಕೆಲವೇ ನಿಮಿಷಗಳಲ್ಲಿ ಪುಸ್ತಕ ಓದಿ ಮುಗಿಸಿದ ಆನಂದದ ಜೊತೆಗೆ ಮೌಢ್ಯ, ಸಾಕ್ಷರತೆ, ಚುನಾವಣೆ, ಆತಂಕ, ಮುಂತಾದ ವಿಷಯಗಳ ಕುರಿತೂ ಈ ಪುಸ್ತಕಗಳು ಮಾತಾಡುತ್ತವೆ. ಮೂರನೆಯ ಹಂತದ ಅಂದ್ರೆ ಮಕ್ಕಳು ಸ್ವ ಇಚ್ಛೆಯಿಂದ ಆಯ್ಕೆ ಮಾಡಿ, ಯಾರ ಸಹಾಯವೂ ಇಲ್ಲದೆಯೋ ಓದುವ ಈ ಪುಸ್ತಕಗಳು ಬೇಗನೆ ಮುಗಿಯುವುದರಿಂದ, ಓದುವ ವಿಶ್ವಾಸ ಮೂಡಿಸುತ್ತವೆ. ಜೊತೆಗೆ ಮೂಲಭೂತ ಹಕ್ಕುಗಳು ಸಾರ್ವತ್ರಿಕವಾಗಿ ಲಭ್ಯ ಇರುವ ಕುರಿತು ಮಾತಾಡುತ್ತವೆ. ಉಡುಗೊರೆ ನೀಡಲು, ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯಲು ಚಂದದ ಪರಿಕರಗಳಾಗಿವೆ ಈ ಪುಸ್ತಕಗಳು. 

ಮೂಲಭೂತ ವಿಚಾರಗಳ ಬಗ್ಗೆ (ಐದು ಪುಸ್ತಕಗಳು)

ಲೇ: ಎಸ್ಥರ್‌ ದುಫ್ಲೋ

ಪ್ರ: ಪ್ರಥಮ್ ಬುಕ್ಸ್‌

ಸಂ: 08042052574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT