ಸಾಕಷ್ಟು ಹಣ ಗಳಿಸಬೇಕು ಮತ್ತು ಶ್ರೀಮಂತರಾಗಬೇಕೆಂಬ ಆಸೆ ಎಲ್ಲರದ್ದೂ ಹೌದು. ಈ ನಿಟ್ಟಿನಲ್ಲಿ ಮಧ್ಯಮ ವರ್ಗದವರ ಕಸರತ್ತು ಹಲವಾರು. ಷೇರು ಮಾರುಕಟ್ಟೆ, ಚಿನ್ನ, ಬೆಳ್ಳಿ, ನಿವೇಶನ, ಮನೆ, ಮ್ಯೂಚುವಲ್ ಫಂಡ್ ಸೇರಿದಂತೆ ಹಲವು ಮಾರ್ಗಗಳನ್ನು ಅನುಸರಿಸುವವರು ಹಲವರು. ಹೀಗಿದ್ದರೂ ಹೂಡಿಕೆ ಕುರಿತು ಗೊಂದಲ ಇರುವುದು ಸಹಜ. ಇದಕ್ಕೆ ಉತ್ತರ ಎಂಬಂತೆ ಲೇಖಕ ಶರತ್ ಎಂ.ಎಸ್. ಅವರು ‘ಮಿಡಲ್ ಕ್ಲಾಸ್ ಟು ರಿಚ್’ ಎಂಬ ಕೃತಿ ಮೂಲಕ ಸಿರಿವಂತಿಕೆಗೆ ರಾಜಮಾರ್ಗ ಯಾವುದು ಎಂಬುದನ್ನು ವಿವರಿಸುವ ಪ್ರಯತ್ನ ನಡೆಸಿದ್ದಾರೆ.

ಸಂಬಳವನ್ನೇ ನಂಬಿದರೆ ಶ್ರೀಮಂತರಾಗಬಹುದೇ? ಹೊಸ ಕಾರು ಖರೀದಿಸುವ ಮುನ್ನ ಏನೆಲ್ಲಾ ಯೋಚಿಸಬೇಕು? ಕನಸಿನ ಮನೆ ಕಟ್ಟಿಸುವ ಮುನ್ನ, ಆರೋಗ್ಯ ವಿಮೆ ಎಷ್ಟು ಅಗತ್ಯ ಎಂಬ ವಿಷಯಗಳನ್ನು ವಿವರಿಸಿರುವ ಲೇಖಕರು, ಸಿರಿವಂತರ ಯಶಸ್ಸಿನ ಗುಟ್ಟನ್ನೂ ಈ ಕೃತಿಯಲ್ಲಿ ರಟ್ಟು ಮಾಡಿದ್ದಾರೆ.

ಖರ್ಚಿನ ಮೇಲೆ ಹಿಡಿತ ಸಾಧಿಸಲು ಇರುವ ಸೂತ್ರಗಳೇನು? ಉಳಿತಾಯ, ಹಣಕಾಸು ಶಿಕ್ಷಣ ಏಕೆ ಮುಖ್ಯ? ಜೀವನ ಶೈಲಿಯ ಹಣದುಬ್ಬರ ಎಷ್ಟು ದುಬಾರಿಯಾಗಲಿದೆ? ನಿವೃತ್ತಿಯ ನಂತರ ಸ್ವತಂತ್ರ ಜೀವನ ಹೇಗಿರಬೇಕು? ನಿವೃತ್ತರಾದ ನಂತರ ಮಕ್ಕಳನ್ನೇ ಆಶ್ರಯಿಸಬೇಕೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಲೇಖಕರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.

ವಿವಿಧ ವಿಷಯಗಳ ಕುರಿತು ಕೃತಿಯಲ್ಲಿರುವ 23 ಲೇಖನಗಳಲ್ಲಿ ಚಿತ್ರಗಳು, ಇನ್ಫೊಗ್ರಾಫಿಕ್ಸ್ ಒಳಗೊಂಡ ಮಾಹಿತಿ ಇವೆ.

ಮಿಡ್ಲ್ ಕ್ಲಾಸ್ ಟು ರಿಚ್

ಲೇ: ಶರತ್ ಎಂ.ಎಸ್.

ಪ್ರ: ಬಹುರೂಪಿ

ಪು: 184

ಬೆ: ₹300

ಫೋ: 701918 2729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.