ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ತಂಗುವರೋ... ದಾಟುವರೋ...

Last Updated 17 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಹೊಸ ತಲೆಮಾರಿನ ಲೇಖಕ ನಾಗರಾಜ ಹೆಗಡೆ ಅಪಗಾಲ ಕಳೆದ ಒಂದೂವರೆ ದಶಕದಿಂದ ಬರವಣಿಗೆ ಮತ್ತು ಸಂಘಟನೆ ಇವೆರಡರಲ್ಲಿಯೂ ಒಂದಾಗಿಯೇ ತೊಡಗಿಕೊಂಡಿರುವರು. `ದೀಪವಿಲ್ಲದ ಹೆಸರಿನಲ್ಲಿ~ ಇವರ ಮೊದಲ ಕವನ ಸಂಕಲನ.

ಈಗ ಎರಡನೇ ಸಂಕಲನ `ಕಣ್ಣಂಚಿನ ಕಡಲು~ ಎನ್ನುವ ಹೆಸರಿನಲ್ಲಿ ಪ್ರಕಟವಾಗಿದ್ದು, ಸೂಕ್ಷ್ಮಸಂವೇದಿ ಕವಿಯ ಆಗಮನವನ್ನು ಪರಿಚಯಿಸುತ್ತಿದೆ.

ಕಣ್ಣು, ಅಂಚು, ಕಡಲು- ಇವು ಬೇರೆ ಬೇರೆ ಅನ್ನಿಸಿದರೂ ಈ ಮೂರು ಒಂದೇ ದಾರಿಯಲ್ಲಿ ಪಯಣಿಸುವಂಥವು ಹಾಗೂ ಪಯಣದಲ್ಲಿ ಒಂದು ಇನ್ನೊಂದನ್ನು ತೊರೆಯಲಾರದಷ್ಟು ಹತ್ತಿರದವು. ಅಂಚಿಗೂ, ಕಡಲನ್ನು ಆಗಾಗ ಚೂರುಚೂರಾಗಿ ತೋರುವ ಅಳುವಿಗೂ ಗಾಢವಾದ ಸಂಬಂಧವೊಂದು ಏರ್ಪಟ್ಟಿದೆ ಇಲ್ಲಿ.

ಅಂಚಲ್ಲಿ ನೆಟ್ಟ ಸಸಿಯು ಅವರಿವರ ಕಾಲ್ತುಳಿತಕ್ಕೆ ಸಿಲುಕಿ ಒಣಗುತ್ತದೆ. ಅಂಚಿನಲ್ಲಿರುವ ಸಖ್ಯಕ್ಕೆ ಬೆನ್ನು ಕಾಣಿಸುವ ಹಾಗೆ ಮುಖ ಕಾಣಸಿಗುವುದ್ಲ್ಲಿಲ. ಸಂಜೆಹೊತ್ತಿಗೆ ತೀರದ ಸುತ್ತ ಅಡ್ಡಾಡುವವರು ತೀರದಾಳಕ್ಕೆ ಆಹುತಿಯಾಗುತ್ತಲೇ ಇದ್ದಾರೆ. ಹೀಗೆ ಅಂಚಿಗೆ ಬಂದುನಿಂತದ್ದ್ಲ್ಲೆಲವೂ ತುಂಬಾ ಸಲ ಅಳುವನ್ನೇ ಬರಮಾಡಿಕೊಳ್ಳುತ್ತವೆ. ಹಾಗೆ ಬರಮಾಡಿಕೊಂಡವರಲ್ಲಿ ಹಳೆಯದನ್ನ್ಲ್ಲೆಲ ಅಳುವಿನ ಝರಿಯ ಮೇಲೆ ಕಳುಹಿಸುವ ಅಪೇಕ್ಷೆಯೂ ಇರುವಂತೆ, ಹೊಸತನ್ನು ಆಹ್ವಾನಿಸುವ ಹಂಬಲವೂ ಸೇರಿಕೊಂಡಿದೆ.

ಈ ಅಳುವಿನ ಬೇರು ಆಗತಾನೆ ಹುಟ್ಟಿದ ಮಗುವಿನಿಂದಲೇ ಬೆಳೆಯಲು ಶುರುಮಾಡಿದೆ. ಹುಟ್ಟಿದ ಮಗುವು ಇಲ್ಲಿ ಮೊದಲು ಅಳಬೇಕಿದೆ. ಅತ್ತಾಗ ಮಾತ್ರವೇ ಮಗು ಜೀವಸಹಿತವಿದೆ ಎಂದು ಲೋಕ ಭಾವಿಸುತ್ತದೆ. ಅಳದೆಹೋದ ಮಗುವಿನ ತಲೆಯನ್ನು ಕೆಳಗುಮಾಡಿ ಕುಂಡಿಗೆ ಏಟುಕೊಟ್ಟು ಅಳಿಸುವುದೂ ಇದೆ.
 
ಈ ಬಗೆಯ ನಡಾವಳಿಗೆ ತಾಯಿಂದ ಬೇರ್ಪಟ್ಟ ಮಗುವು ಸರಿಯಾಗಿ ವ್ಯಕ್ತಗೊಳ್ಳಲಿ ಎಂಬ ಇರಾದೆಯೂ ಇರುವಂತೆ, ಮಗುವು ತನ್ನೊಳಗಿನ ದನಿಯನ್ನು ಒಮ್ಮೆ ತಾನೇ ಕೇಳಿಸಿಕೊಳ್ಳಲಿ ಎನ್ನುವ ಆಸೆ ಇದೆ; ಮಗುವನ್ನು ಹೊಸಲೋಕಕ್ಕೆ ಹೊಂದಿಸುವ ರೀತಿಯೂ ಇಲ್ಲಿದೆ.

ಹೀಗೆ ಬರುವಾಗ ಜಲಾಶಯವನ್ನು ತನ್ನೊಂದಿಗೆ ತರುವ ಮಗು ಬೆಳೆಯುತ್ತಾ, ಮಾಗುತ್ತಾ ಹೋದಂತ್ಲ್ಲೆಲ ಅ್ಲ್ಲಲಲ್ಲಿ ಹನಿಯನ್ನು ಕೆಡವುವಂತೆ ಮಾಡುವ ಸಂಗತಿಗಳು ಯಾವುವು? ಮಗುವಿನಲ್ಲಿ ಬಲಿಯುತ್ತಲೇ ಹೋಗುವ ಅಳುವಿಗೆ ಕಾರಣಗಳಿವೆಯೆ? ಅಥವಾ ಕಾರಣಗಳನ್ನು ಮಗುವಿನಂತಹ ಮನಸ್ಸು ಗುರುತಿಸಿಕೊಳ್ಳಲು ಹಟ ಹಿಡಿಯುವುದೆ? ಹಾಗೆ ಹಟಹಿಡಿಯುವ ದಿನಗಳೇ ಆಯುಷ್ಯವನ್ನು ಕಳೆಯುವ ದಿನಗಳು ಆಗಬಹುದೆ? ಈ ಪ್ರಶ್ನೆಗಳನ್ನು ನಮ್ಮ ಕವಿಗಳು ಕಾವ್ಯದ ಸಂದರ್ಭದಲ್ಲಿ ಕೇಳಿಕೊಳ್ಳುತ್ತಲೇ ಬಂದಿದ್ದಾರೆ.

ಇಂತಹ ಅಳುವಿನ ಜಾಡನ್ನು ಶೋಧಿಸುವ ವಾಂಛೆ ಕವಿ ಗೋಪಾಲಕೃಷ್ಣ ಅಡಿಗರಲ್ಲಿ ವ್ಯಕ್ತವಾಗುವುದು ಹೀಗೆ:
ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿದೋಣಿ
ಬಾಳ ಗಂಗೆಯ ಮಹಾಪೂರದೊಳು
ಸಾವಿನೊಂದು ವೇಣಿ
ನೆರೆತಿದೆ, ಬೆರೆತಿದೆ, ಕುಣಿವ ಮೊರೆವ
ತೆರೆತೆರೆಗಳೋಳಿಯಲ್ಲಿ
ಜನನಮರಣಗಳ ಉಬ್ಬುತಗ್ಗು ಹೊರ
ಳುರುಳುವಾಡದಲ್ಲಿ!
ಜೀವನ ಅಸ್ಥಿರವಾಗಿ ತೋರಿದರೂ ಆಶಾಭಾವನೆಯನ್ನು ತುಂಬುವ ಸ್ನೇಹಿಯಾಗಿಯೂ ಅಡಿಗರಿಗೆ ಕಾಣಿಸಿಕೊಳ್ಳುತ್ತದೆ. ಈ ಅಳುವಿಗೆ ಇರುವ ಬೇರೊಂದು ಆಯಾಮವನ್ನು ಕವಿ ಎ.ಕೆ. ರಾಮಾನುಜನ್ ಹೀಗೆ ತಿಳಿಸುತ್ತಾರೆ.

ಅಂದರೆ ಹೆಚ್ಚೂಕಡಿಮೆ ಇದು
ಮನುಷ್ಯ ಜಾತಿಗೇ ಮೀಸಲು
ಹೀಗೆ ಬಸಿದ ನೀರು
ಕೆರೆ ನದಿ ಕೊಳಮಳೆ ಇತ್ಯಾದಿ ಮಿಕ್ಕ ನೀರಿನಲ್ಲಿ
ಬೆರೆಯುತ್ತದೆ. ನೆಲದಲ್ಲಿ ಇಳಿದು
ಮರಳಿನಲ್ಲಿ ಕರಗಿ ಆರಿ ಹೋಗುತ್ತದೆ.
ಕಾಡಿನಲ್ಲಿ ಕಲ್ಲಿನಲ್ಲಿ ಹುಲ್ಲುಸಂದಿನಲ್ಲಿ
ಒಂದು ಕಲೆ ಕೂಡ ಬಿಡದೆ ಮರೆಯುತ್ತದೆ.
ಮೊಹೆಂಜೋದಾರೊ ನಿರ್ನಾಮವಾದಾಗ
ಅಲ್ಲಿನ ಜನ ಅತ್ತಿರಬೇಕು
ಆದರೆ ಅವರ ಸ್ನಾನಕ್ಕೆ ಈಗ ಪುರಾವೆ ಸಿಕ್ಕ ಹಾಗೆ
ಇದಕ್ಕೆ ಯಾವ ಪುರಾವೆಯೂ ಸಿಕ್ಕ್ಲ್ಲಿಲ.

ರಾಮಾನುಜನ್ ಅವರಂತೆ ಕವಿ ನಾಗರಾಜ ಹೆಗಡೆ ಅವರಿಗೆ ಅಳುವಿಗೆ ಸಂಬಂಧಿಸಿದ ಅವಶೇಷಗಳನ್ನು ಹುಡುಕುವುದರಲ್ಲಿ ಆಸಕ್ತಿ ಇದ್ದಂತ್ಲ್ಲಿಲ. ಅವರಿಗೆ ದಿನದ ದಂದುಗದ ನಡುವೆಯೇ ಕಂಡುಕೊಂಡಿರುವ ಈ ಬದುಕಿನ ವಿಸ್ಮಯವನ್ನು ದಾಟಿಸಬೇಕಿದೆ:

ಕಂಡಷ್ಟೂ ಕಡಲು
ಕಣ್ಣಂಚಿನ ಕಡಲು
ಕಡೆಗೋಲ್ಲ್ಲಿಲದ ಕಡಲಿಗೆ ಕಡೆಗೂ
ದೂರದಿ ಹಾಯುವ
ಮುಗಿಲು
ಸಲ-ಸಲವೂ
ತರ-ತರದ ತೆರೆಗಳುಕ್ಕಿ
ನೀರ ಬುರುಗು ನೆಲವ ನೆಕ್ಕಿ
ನಿಂತಂತೆ ತರತರಹ ತಳಕೆ
ಕಾಲ್ಬೆರಳ ಸಂದಿಯಲಿ
ಸರಿವ ಮರಳು 
ಸರಿದದ್ದು ಮರಳು ಮಾತ್ರವ್ಲ್ಲಲ ; ಮರಳೊಂದಿಗೆ ಕಾಲವೂ ಸಾಗುವುದು. ಇಲ್ಲಿಗೆ ಎ್ಲ್ಲಲವೂ ಮುಗಿಯಿತೆಂದು ಬಗೆಯುವ ಕಣ್ಣಿನ ಪಾಲಿಗೆ ತೀರಿಹೋದದ್ದು ಕಾಲನ ಆರೈಕೆಯಲ್ಲಿ ತಣ್ಣಗೆ ಬೆಳೆಯುವುದು:

ಸಮಾಧಿಯ ಮಣ್ಣಲ್ಲೆ
ಕಣ್ಣೀರ ತೇವಕೆ ಪೊರೆಯೊಡೆದು ಮೊಳೆತದ್ದು
ಚಿಗುರಾಗಿ ಗಿಡವಾಗಿ ಮರವಾಗಿ
ಹೆಮ್ಮರವಾಗಿ ಹೂವಾಗಿ ಹೀಚಾಗಿ ಕಾಯಾಗಿ
ಮತ್ತೆ ಪಕ್ವ
ಫಲ

ಇಲ್ಲಿನ ಲೌಕಿಕ ಕೈಗೆ ಎಟಕುತ್ತದೆ. ಬೆಳೆ ಕಳೆ ಎನ್ನದೆ ಎ್ಲ್ಲಲರ ಮೇಲೆ ಸುರಿವ ಮಳೆಯೂ ತನಗೆ ಬೇಕಾದ ತೆಕ್ಕೆಗಾಗಿಯೇ ಚಡಪಡಿಸುತ್ತದೆ ಎಂದರೆ ಆಶ್ಚರ್ಯವೂ ಆಗುತ್ತದೆ. ಅಂತಹ ಒಂದು ಮಳೆಯ ಪಾಡು ಹುಲುಮಾನವರ ಪಾಡು ಸಹ ಆಗಿಬಿಡುತ್ತದೆ:

ಎಲ್ಲೆಲ್ಲೋ ಬಿದ್ದ ಕಳ
ಮಳೆ ನಿಂತಮೇಲೂ
ಸಪಾಟಾದ ಕ್ಲ್ಲಲಹಾಸಿನ ಮೇಲೆ ಬಿದ್ದಿರುವ ನೀರಿಗೆ
ಎಲ್ಲೂ ಹರಿಯಲಾಗದ ನೋವು
ಅಲ್ಲೇ ಇಂಗಲೂ ಆಗದ
ಜೋಮು!

ಹೀಗೆ ಮನುಷ್ಯ ಸ್ವಭಾವದ ಅಡತಡೆಗಳನ್ನು ಮುಟ್ಟಿ ಮಾತನಾಡಿಸುವ ಕವಿ ನಾಗರಾಜ ಹೆಗಡೆ ತಮ್ಮನ್ನು ಘಾಸಿಗೊಳಿಸುತ್ತಿರುವ ವರ್ತಮಾನದ ಅನೇಕ ಸಂಕಟಗಳ ಸಮೇತವಾಗಿಯೇ ಇಲ್ಲಿ ಎದುರಾಗುತ್ತಾರೆ. ಉಳಿದಂತೆ ಕೆಲವು ಕಡೆ ಕವಿ ನೀಟಾಗಿ ಕಾಣಿಸಿಕೊಂಡು ಕವಿತೆಯೂ ಹಿನ್ನೆಲೆಗೆ ಸರಿದುಹೋಗಿದೆ. (ನೋಡಿ: `ಬುದ್ಧನ ಸಲಹೆ~, `ಬ್ಯೂಟಿ ಪಾರ್ಲರ್~, `ಚಕ್ರವ್ಯೆಹ~, `ಪರೀಕ್ಷೆಯ ಕೋಣಿ~...)

ನಾಗರಾಜರಿಗೆ ಕವಿತೆಯಲ್ಲಿ ವ್ಯಂಗ್ಯವನ್ನು ತಂದುಕೊಳ್ಳುವಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಈ ಸಂಕಲನದಲ್ಲಿ ಹೆಜ್ಜೆಹೆಜ್ಜೆಗೂ ಮೂದಲಿಕೆ ಹೆಡೆಯಾಡುತ್ತದೆ. ಇದರಿಂದ ಕವಿಗೇ ಹೆಚ್ಚು ನಷ್ಟವಾಗಿದೆ. ಉದಾಹರಣೆಗೆ `ಕ್ರಾಂತಿ~ ಎನ್ನುವ ರಚನೆಯನ್ನು ನೋಡಬೇಕಿದೆ.
 
ಈ ರಚನೆ ವ್ಯಂಗ್ಯದಲ್ಲಿ ಅದ್ದಿ ತೆಗೆದಿರುವಂತೆ ಮೇಲ್ನೋಟಕ್ಕೆ ಅನಿಸಿದರೂ ಇವತ್ತಿನ ಸಂಕಟವೂ ಇಲ್ಲಿ ಕಾಣಿಸಿಕೊಳ್ಳುತ್ತದೆ. ವ್ಯಂಗ್ಯೋಕ್ತಿಯ (ಖಠಿಜ್ಟಿಛಿ)  ಕಡೆಗೆ ಮೋಹಿತರಾಗಿರುವ ನಾಗರಾಜ ಹೆಗಡೆ ಅವರಿಗೆ ಅಡಿಗರು ಮಾದರಿಯಾಗಿರುವಂತೆ ತೋರುತ್ತದೆ (ನೋಡಿ: ಅಡಿಗರ ಸಾಹಸ, ವಿಜಯನಗರದ ನೆನೆಪು, ಪಲಾಯನ ಸೂಕ್ತ, ನಾನು ಹಿಂದೂ ನಾನೂ ಬ್ರಾಹ್ಮಣ, ಯುದ್ಧ ಮುಗಿಯಿತು, ಎಡ-ಬಲ, ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ, ಏಳುವುದೆಂದೀ ಜನಪದ).

ಹಾಗೆ ನೋಡಿದರೆ, ವ್ಯಂಗ್ಯದ ದಾರಿಯಲ್ಲಿ ಸಾಗಿಬಂದ ರಚನೆಗಳು ಬರುವಾಗಲೇ ಸಮಸ್ಯೆಗಳನ್ನು ಹೊತ್ತುಕೊಂಡು ಬಂದಿರುತ್ತವೆ; ಇವು ಹರಿತವೂ ಬೌದ್ಧಿಕವೂ ಆಗಿರುವುದರಿಂದ ಅವು ಕವಿಯಿಂದ ಬಿಡಿಸಿಕೊಂಡ ಕಳೇಬರದಂತೆಯೂ ಗೋಚರಿಸುವವು. ಈ ಕಡಿದಾದ ಹಾದಿಯನ್ನು ಮಧುರಚೆನ್ನ, ಬೇಂದ್ರೆ, ಪು.ತಿ.ನ, ನರಸಿಂಹಸ್ವಾಮಿ, ಸುಬ್ಬಣ್ಣ ರಂಗನಾಥ ಎಕ್ಕುಂಡಿ, ಶಿವಪ್ರಕಾಶ್‌ರಂಥ ಕವಿಗಳು ಆಯ್ದುಕೊಳ್ಳಲೇ ಇ್ಲ್ಲಲ. ಈ ನಮ್ಮ ಕವಿಗಳ ಕಾವ್ಯ ಕವಿ ಗಂಗಾಧರ ಚಿತ್ತಾಲರು ನಂಬಿರುವ `ಕಾವ್ಯೋದ್ಯೋಗ~ದ ಜಾಡನ್ನು ತುಳಿದಿದೆ.

`ಬೇಕು ಒಳ-ಹೊರಗ ಕೇಂದ್ರದಲ್ಲಿ ಹಿಡಿಯುವ ಕಣ್ಣು,
ಇಡಿಯಾಗಿ ಬದುಕ ನೀಕ್ಷಿಸುವ ನೋಟ.
ನೆಲ-ಬಾನ ಎಳೆತ-ಸೆಳೆತಗಳ ಮೂಲ ದ್ವಂದ್ವ
ರೂಪಿಸುವ ಜೀವಿತದ ಆಟ-ಓಟ~

ಯಾಕೆಂದರೆ, ವ್ಯಂಗ್ಯದ ಮನೆಯಲ್ಲಿ ನೆಲೆಸುವ ಕವಿ ಬಾಳನ್ನು ಕಾಣುವ ಶಕ್ತಿಯನ್ನು ಕಳೆದುಕೊಳ್ಳುವುದು ಅವರಿಗೆ ಗೊತ್ತಿತ್ತು. ಮುಖ್ಯವಾಗಿ ವ್ಯಂಗ್ಯವನ್ನು ಆತುಕೊಂಡ ಮೇಲೆ ಕವಿಯಾಗಲೀ, ಕವಿತೆಯಾಗಲೀ ಜನಸಮುದಾಯದಿಂದ ದೂರವೇ ಉಳಿಯುವುದನ್ನು ಅವರು ಬ್ಲ್ಲಲವರಾಗಿದ್ದರು. ಇದಕ್ಕೆ ಭಿನ್ನವಾದ ತುದಿಯಲ್ಲಿ ನಾಗರಾಜ ಹೆಗಡೆಯವರ ರಚನೆಗಳು ಆಸಕ್ತಿ ತೋರಿಸುತ್ತಿವೆ. ಈ ಕವಿ ಇಲ್ಲಿಯೇ ತಂಗುವರೋ ಅಥವಾ ದಾಟುವರೋ ಎಂಬುದನ್ನು ಮುಂದಿನ ರಚನೆಗಳು ಹೇಳಬೇಕಿವೆ.

ಕಣ್ಣಂಚಿನ ಕಡಲು
ಲೇ: ನಾಗರಾಜ ಹೆಗಡೆ ಅಪಗಾಲ
ಪು: 76; ಬೆ: ರೂ.50
ಪ್ರ: ಅಭಿನವ ಪ್ರಕಾಶನ, ವಿಜಯನಗರ, ಬೆಂಗಳೂರು- 560040

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT