ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್ಟ್‌ ಮ್ಯೂಸಿಕ್‌–05 | ಮನವ ಕಾಡುವ ಹಾಡು...

Last Updated 23 ಜನವರಿ 2021, 0:49 IST
ಅಕ್ಷರ ಗಾತ್ರ

ಡಾ.ಬಾನಂದೂರು ಕೆಂಪಯ್ಯ ಏಕತಾರಿ ನುಡಿಸುತ್ತಿದ್ದರೆ ಹೃದಯ ಮಿಡಿಯುತ್ತದೆ. ಅವರ ಎತ್ತರದ ಧ್ವನಿ, ಕಂಚಿನ ಕಂಠ ಮನಸೂರೆಗೊಳ್ಳುತ್ತದೆ. ಬಿದಿರು ನಾನಾರಿಗಲ್ಲಾದವಳು, ಚಲ್ಲಿದರೂ ಮಲ್ಲೀಗೆಯಾ, ತಿಂಗಾತಿಂಗಳಿಗೆ ಚಂದಾ ನಂಜನಗೂಡು, ಎಲ್ಲೋ ಜೋಗಪ್ಪ ನಿನ್ನರಮನೆ ಮುಂತಾದ ಗೀತೆಗಳಿಗೆ ಧ್ವನಿಯಾಗಿದ್ದಾರೆ. ದೇಶವಿದೇಶಗಳಲ್ಲಿ ಈ ಹಾಡುಗಳನ್ನು ಹಾಡಿದ್ಧಾರೆ. ಬೆಂಗಳೂರು, ಧಾರವಾಡ, ಕಲಬುರ್ಗಿ, ತ್ರಿವೇಂಡ್ರಂ ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಕೆಲಸ ಮಾಡಿರುವ ಕೆಂಪಯ್ಯ ಜಾನಪದ ಕ್ಷೇತ್ರಕ್ಕೆ ಬಲುದೊಡ್ಡ ಕೊಡುಗೆ ಕೊಟ್ಟಿದ್ದಾರೆ.

ಜನಪದ ತತ್ವಪದ‘ಹಂಸ ’ ಗೀತೆಯ ಅನುಭವವನ್ನು ಬಾನಂದೂರು ಕೆಂಪಯ್ಯ ಹಂಚಿಕೊಂಡಿದ್ದಾರೆ. ಗುಲಬರ್ಗ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಒಂದು ಜನಪದ ವಿಚಾರ ಸಂಕಿರಣ ನಿಗದಿಯಾಗಿರುತ್ತದೆ. ಅಲ್ಲಿಗೆ ಡಾ.ಬಾನಂದೂರು ಕೆಂಪಯ್ಯ ಅತಿಥಿಯಾಗಿ ಪಾಲ್ಗೊಂಡಿರುತ್ತಾರೆ. ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಡಾ.ಮಲ್ಲಿಕರ್ಜುನ್‌ ಲಟ್ಟೆ ಅವರು ಬಾನಂದೂರು ಕೆಂಪಯ್ಯ ಅವರನ್ನು ‘ಹಂಸ’ ಗೀತೆ ಹಾಡುವಂತೆ ಕೇಳಿಕೊಳ್ಳುತ್ತಾರೆ. ಕೆಂಪಯ್ಯ ಮನದುಂಬಿ ಹಾಡುತ್ತಾರೆ.

ಕಾರ್ಯಕ್ರಮ ಮುಗಿದ ನಂತರ ಕೆಂಪಯ್ಯ ಕಚೇರಿಗೆ ಬರುತ್ತಾರೆ, ಫೋನ್‌ ಬರುತ್ತದೆ, ಮುಂದೆನಾಯ್ತು ಗೊತ್ತಾ?

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT