ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾಡುಗಾರಿಕೆ, ಸುಗಮ ಸಂಗೀತದಲ್ಲಿ ಮ್ಯಾಂಡಲಿನ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಿತಾರ್, ಪಾಶ್ಚಾತ್ಯ ಸಂಗೀತದಲ್ಲಿ ಪಿಯಾನೊ ನುಡಿಸುವ ವಿದುಷಿ ಸುಮಾರಾಣಿ ಸಂಗೀತ ಲೋಕದಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ಧಾರೆ. ಶಾಸ್ತ್ರೀಯ ಸಂಗೀತದಲ್ಲಿ ಹಲವು ದಿಗ್ಗಜರಿಗೆ ಸಿತಾರ್ ಸಾಥಿಯಾಗಿದ್ದಾರೆ. ಸಾವಿರಾರು ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ಜನಪದ ಶೈಲಿ ಗೀತೆ, ವಚನ, ಹರಿಕತೆ ಕ್ಯಾಸೆಟ್‌ಗಳಿಗೆ ಸಿತಾರ್ ನುಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಿತಾರ್‌ಗೊಬ್ಬರೇ ಸುಮಾರಾಣಿ ಎಂದರೂ ತಪ್ಪಲ್ಲ. ಮೂರು ತಲೆಮಾರಿನ ನಾಯಕರ ಚಿತ್ರಗಳಿಗೆ ಅವರು ಸಿತಾರ್ ನುಡಿಸಿದ್ಧಾರೆ. ಅವರು ಸಂಗೀತ ಸಾಥಿಯಾಗಿರುವ ಚಲನಚಿತ್ರಗಳ ಸಂಖ್ಯೆ ಸಾವಿರ ದಾಟಿದೆ. ಮದ್ರಾಸ್‌ನಿಂದ ಸಂಗೀತಗಾರರನ್ನೂ ಕರೆತರುವ ಸಂದರ್ಭದಲ್ಲಿ ಕನ್ನಡದ ಹುಡುಗಿಯಾಗಿ ಅವರು ಭರವಸೆ ಮೂಡಿಸಿದ್ದರು. ಹಲವು ದೇಶಗಳ ಖ್ಯಾತನಾಮ ಸಂಗೀತ ಕಲಾವಿದರಿಗೆ ಜೊತೆಯಾಗಿರುವ ಅವರು ಹಲವು ಆಲ್ಬಂಗಳಲ್ಲಿ ಸಿತಾರ್ ನುಡಿಸಿದ್ದಾರೆ.

ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಎನ್‌ಸಿಸಿ ಸ್ವಯಂಸೇವಕಿಯಾಗಿ 2 ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದಾರೆ. ಭರತನಾಟ್ಯವನ್ನೂ ಕಲಿತಿರುವ ಅವರು ಭರತನಾಟ್ಯ, ಕಥಕ್, ಕುಚಿಪುಡಿ, ಒಡಿಸ್ಸಿ ನೃತ್ಯಗಳಿಗೆ ಸಿತಾರ್ ನುಡಿಸಿದ್ದಾರೆ. ಸಿತಾರ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸಿ ದಾಖಲೆ ಸೃಷ್ಟಿಸಿದ್ಧಾರೆ. ಈ ವಾರದ ಜಸ್ಟ್ ಮ್ಯೂಸಿಕ್‌ನಲ್ಲಿ ವಿದುಷಿ ಸುಮಾರಾಣಿ ಅವರ ಹಿತಾನುಭವವಿದೆ.

ಇಷ್ಟೆಲ್ಲಾ ಸಾಧನೆ ಮಾಡಿದ್ರೂ ವಿದುಷಿ ಸುಮಾರಾಣಿ ಅವರು ಈಗಲೂ ವಿದ್ಯಾರ್ಥಿನಿಯೇ ಆಗಿದ್ದಾರೆ. ಪಂ.ಎನ್.ವಿ.ಗೋಪಿನಾಥ್ ಅವರ ಬಳಿ ಸಿತಾರ್ ಕಲಿಕೆ ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.